Asianet Suvarna News Asianet Suvarna News

Mandya: ಕೆರೆಗೆ ವಿಷ ಬೆರಸಿ ಮೀನುಗಳ ಮಾರಣಹೋಮ ನಡೆಸಿದ ಕಿಡಿಗೇಡಿಗಳು!

ವಿಜೃಂಭಣೆಯಿಂದ ಗ್ರಾಮದೇವತೆ ಹಬ್ಬ ನಡೆಸುವ ಸಲುವಾಗಿ ಹಣ ಸಂಪಾದಿಸಲು ಗ್ರಾಮಸ್ಥರು ಮೀನು ಸಾಗಾಣಿಕೆ ಮಾಡಿದ್ದ ಕೆರೆಗೆ ವಿಷ ಬೆರೆಸಿರುವ ದುಷ್ಕರ್ಮಿಗಳು ಸಾವಿರಾರು ಮೀನುಗಳ ಮಾರಣಹೋಮ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಾರದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.

Thousands Of Fishes Killed As Lake Poisoned By Strangers At Mandya gvd
Author
Bangalore, First Published Jun 17, 2022, 4:17 PM IST

ಮಂಡ್ಯ (ಜೂ.17): ವಿಜೃಂಭಣೆಯಿಂದ ಗ್ರಾಮದೇವತೆ ಹಬ್ಬ ನಡೆಸುವ ಸಲುವಾಗಿ ಹಣ ಸಂಪಾದಿಸಲು ಗ್ರಾಮಸ್ಥರು ಮೀನು ಸಾಗಾಣಿಕೆ ಮಾಡಿದ್ದ ಕೆರೆಗೆ ವಿಷ ಬೆರೆಸಿರುವ ದುಷ್ಕರ್ಮಿಗಳು ಸಾವಿರಾರು ಮೀನುಗಳ ಮಾರಣಹೋಮ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಾರದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳು ರಾತ್ರೋ ರಾತ್ರಿ ಕೆರೆಗೆ ವಿಷ ಬೇರೆಸಿದ್ದು, ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿ ತೇಲಲಾರಂಭಿಸಿವೆ. 

ಅದ್ದೂರಿ ಹಬ್ಬ ನಡೆಸಲು ಗ್ರಾಮಸ್ಥರಿಂದ ಮೀನು ಸಾಕಾಣಿಕೆ: ಗ್ರಾಮದ ಸಣ್ಣ ಕೆರೆಯಲ್ಲಿ ಕಳೆದೊಂದು ವರ್ಷಗಳ ಹಿಂದೆ ಮೀನು ಸಾಕಾಣಿಕೆ ಆರಂಭಿಸಲಾಗಿದೆ. ದನಕರುಗಳಿಗೆ ನೀರು ಕುಡಿಸಲು, ಬಟ್ಟೆ ಪಾತ್ರೆ ತೊಳೆಯಲು ಇದೇ ಕಟ್ಟೆಯನ್ನೇ ಜನರು ಅವಲಂಬಿಸಿದ್ದಾರೆ. ಗ್ರಾಮದ ದೊಡ್ಡಮ್ಮದೇವಿ ಹಬ್ಬವನ್ನ ಪ್ರತಿ ವರ್ಷ ಆಚರಿಸುವ ಗ್ರಾಮಸ್ಥರು. ವಿಜೃಂಭಣೆಯಿಂದ ಹಬ್ಬ ನಡೆಸಲು ಬೇಕಾದ ಹಣ ಸಂಪಾದಿಸಲು ಮೀನು ಸಾಗಾಣಿಕೆ ಶುರು ಮಾಡಿದ್ದಾರೆ. ಸಾವಿರಾರು ರೂಪಾಯಿ ವ್ಯಯಿಸಿ ಮಾರ್ಕೋನಹಳ್ಳಿ ಡ್ಯಾಂನಿಂದ 15 ಸಾವಿರದಷ್ಟು ಮೀನು ಮರಿಗಳನ್ನ ತಂದು ಕೆರೆಗೆ ಬಿಡಲಾಗಿತ್ತು. 

ಮಂಡ್ಯದಲ್ಲಿ ಹಾಡುಹಗಲೇ ಮಹಿಳೆಯ ಕೊಲೆಗೆ ಯತ್ನ!

ಕಳೆದೊಂದು ವರ್ಷದಿಂದ ಉತ್ತಮ ಬೆಳವಣಿಗೆ ಕಂಡಿದ್ದ ಮೀನುಗಳು 5-6 ಕೆಜಿ ತೂಗೂತ್ತಿದ್ದವು. ಅವುಗಳನ್ನು ಮಾರಾಟ ಮಾಡಿದ್ರೆ ಹತ್ತತ್ರ 6-7 ಲಕ್ಷ ಹಣ ಸಿಗುತ್ತಿತ್ತು. ಅದೇ ಹಣದಲ್ಲಿ ಈ ಬಾರಿ ಗ್ರಾಮದೇವತೆ ಹಬ್ಬ ಅದ್ದೂರಿಯಾಗಿ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದರು.‌ ಆದ್ರೆ ಹಳೇ ವೈಷಮ್ಯವೋ, ಅಸೂಯೆಯೋ ಗೊತ್ತಿಲ್ಲ ದುಷ್ಕರ್ಮಿಗಳು ರಾತ್ರೋ ರಾತ್ರಿ ಕೆರೆಗೆ ವಿಷ ಹಾಕಿದ್ದಾರೆ. ವಿಷಯುಕ್ತ ನೀರು ಸೇವಿಸಿರುವ ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ: ಪಾಗಲ್ ಪ್ರೇಮಿಗೆ ಬಿತ್ತು ಧರ್ಮದೇಟು..!

ಕೆರೆ ನೀರು, ಸತ್ತ ಮೀನಿನ ಮಾದರಿ ಪರೀಕ್ಷೆಗೆ ರವಾನೆ: ಘಟನೆ ಸಂಬಂಧ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆರೆ ನೀರು, ಸತ್ತ ಮೀನಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಘಟನೆಯಿಂದ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ತಮ್ಮೂರಿನವರೇ ಯಾರೋ ವಿಷ ಹಾಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲಾಗಿದೆ. ಶೀಘ್ರ ದುಷ್ಕರ್ಮಿಗಳನ್ನ ಬಂಧಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಲಾಗಿದೆ.

Follow Us:
Download App:
  • android
  • ios