ಹೊಸಕೆರೆಹಳ್ಳಿ ಸಮೀಪದ ನಿವಾಸಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಚೇತನ್‌ ಮನೆಯಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆ ಚೇತನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧ್ಯಾಹ್ನದ ಹೊತ್ತಿನಲ್ಲಿ ಈ ಕೃತ್ಯ ನಡೆದಿದೆ. 

ಬೆಂಗಳೂರು(ನ.25): ಮನೆ ಮುಂದೆ ಒಣ ಹಾಕಿದ್ದ ಖಾಕಿ ಬಣ್ಣದ ಸಾಕ್ಸ್‌ಗಳನ್ನೇ ಕೈ ಗ್ಲೋಸ್‌ ಮಾಡಿಕೊಂಡು ಕಾನ್‌ಸ್ಟೇಬಲ್‌ವೊಬ್ಬರ ಮನೆ ಬೀಗ ಮುರಿದು ಹಾಡಹಗಲೇ ಕಿಡಿಗೇಡಿಗಳು ಚಿನ್ನಾಭರಣ ದೋಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸಕೆರೆಹಳ್ಳಿ ಸಮೀಪದ ನಿವಾಸಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಚೇತನ್‌ ಮನೆಯಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆ ಚೇತನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧ್ಯಾಹ್ನದ ಹೊತ್ತಿನಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

ಯಾದಗಿರಿ ಶ್ರೀಗಂಧ ಕಳವು: ಶಿವಮೊಗ್ಗ, ಕೇರಳದ ನಂಟು

ಹೊಸಕೆರೆಹಳ್ಳಿ ಬಳಿ ಚೇತನ್‌ ಕುಟುಂಬ ನೆಲೆಸಿದ್ದು, ಈ ದಂಪತಿ ಜತೆ ಚೇತನ್ ಭಾಮೈದ ಸಹ ನೆಲೆಸಿದ್ದಾರೆ. ಚೇತನ್ ಪತ್ನಿ ಸಹ ನೌಕರಿಯಲ್ಲಿದ್ದಾರೆ. ಎಂದಿನಂತೆ ಕೆಲಸಕ್ಕೆ ಬೆಳಗ್ಗೆ ದಂಪತಿ ತೆರಳಿದ್ದರು. ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ಅವರ ಭಾಮೈದ ಸಹ ಕೆಲಸಕ್ಕೆ ಹೋಗಿದ್ದರು. ಆ ವೇಳೆ ಮನೆ ಬಳಿ ಬಂದಿರುವ ಕಳ್ಳರು, ಚೇತನ್‌ ಮನೆ ಮುಂದೆ ಒಣ ಹಾಕಿದ್ದ ಸಾಕ್ಸ್‌ಗಳನ್ನು ಕೈಗ್ಲೋಸ್‌ ಮಾಡಿಕೊಂಡು ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನ ಸೇರಿದಂತೆ ₹1.3 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಸಂಜೆ ಕೆಲಸ ಮುಗಿಸಿ ಚೇತನ್‌ ಭಾಮೈದ ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.