ಬೆಂಗಳೂರು(ಫೆ.05): ನಿದ್ರೆಯಲ್ಲಿದ್ದಾಗ ಖಾಸಗಿ ಕಂಪನಿಯೊಂದರ ಸೆಕ್ಯುರಿಟಿ ಗಾರ್ಡ್‌ ಬಳಿ ಡಬಲ್‌ ಬ್ಯಾರಲ್‌ ಗನ್‌ ಅನ್ನು ಕಿಡಿಗೇಡಿಗಳು ಕದ್ದು ಪರಾರಿಯಾಗಿರುವ ಘಟನೆ ಮಾಗಡಿ ರಸ್ತೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಂಪನಿ ಕಾವಲುಗಾರ ಜೆ.ಎಂ.ಹರೀಶ್‌ ಎಂಬುವರಿಗೆ ಸೇರಿದ ಡಬಲ್‌ ಬ್ಯಾರಲ್‌ ಗನ್‌ ಕಳ್ಳತನವಾಗಿದ್ದು, ಮಾಗಡಿ ರಸ್ತೆಯ ರೈಲ್ವೆ ಕಾಲೋನಿ ಸಮೀಪದ ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ಕಂಪನಿ ಭದ್ರತೆಗೆ ಹರೀಶ್‌ ನಿಯೋಜಿತರಾಗಿದ್ದರು.

ಮುಂಬೈ;  ನಟಿ ಬಾತ್‌ ರೂಂಗೆ ನುಗ್ಗಿ ಆಕೆ ಎದುರೆ ಹಸ್ತಮೈಥುನ ಮಾಡಿಕೊಂಡ!

ಸೋಮವಾರ ಮಧ್ಯರಾತ್ರಿಯಲ್ಲಿ ಕಂಪನಿಯ ವಿಶ್ರಾಂತಿ ಕೊಠಡಿಯಲ್ಲಿ ಹರೀಶ್‌ ನಿದ್ರೆಯಲ್ಲಿದ್ದಾಗ ಈ ಕೃತ್ಯ ನಡೆದಿದೆ. ಎರಡು ಮೊಬೈಲ್‌ ಹಾಗೂ ಡಬಲ್‌ ಬ್ಯಾರಲ್‌ ಗನ್‌ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಂಪನಿ ಬಳಿ ಯುವತಿಯರ ಜತೆ ಹುಡುಗರ ಓಡಾಟಕ್ಕೆ ಹರೀಶ್‌ ಆಕ್ಷೇಪಿಸುತ್ತಿದ್ದರು. ಇದರಿಂದ ಸ್ಥಳೀಯ ಯುವಕರ ಜತೆ ಅವರಿಗೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಹರೀಶ್‌ಗೆ ತೊಂದರೆ ಉಂಟು ಮಾಡುವ ದುರುದ್ದೇಶದಿಂದ ಗನ್‌ ಕಳ್ಳತನ ಮಾಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.