ಮಹಿಳೆಯರಿಗೆ ಉಚಿತ ಪ್ರಯಾಣ: ರಶ್ ಆದ ಬಸ್‌ನಲ್ಲಿ ಅಜ್ಜಿಯ 30,000 ಹಣ ದೋಚಿದ ಕಳ್ಳರು
ಬಾದಾಮಿಗೆ ಸಂಬಂಧಿಕರೊಬ್ಬರಿಗೆ 30 ಸಾವಿರ ಹಣ ಕೊಡಲು ಹೊರಟಿದ್ದ ಅಜ್ಜಿ ಚೆನ್ನಮ್ಮ ಎಂಬ ವೃದ್ಧೆಯ ಹಣ ಕಳ್ಳತನವಾಗಿದೆ. ಗದ್ದನಕೇರಿ ಕ್ರಾಸ್‌ನಿಂದ ಬಾಗಲಕೋಟೆ ಮಾರ್ಗ ಮಧ್ಯೆ ಕಳ್ಳತನ ನಡೆದಿದೆ.
ಬಾಗಲಕೋಟೆ(ಜೂ.13): ಶಕ್ತಿ ಯೋಜನೆಯ ಕೆಎಸ್‌ಆರ್‌ಟಿಸಿ ಬಸ್ ರಶ್ ಎಫೆಕ್ಟ್ ನಿಂದಾಗಿ ರಶ್ ಆದ ಬಸ್‌ನಲ್ಲಿ ಕಳ್ಳರು ಕೈಚಳಕ ನಡೆಸಿ ಸೀಟ್ ಸಿಗದೇ ಬಸ್‌ನಲ್ಲಿ ನಿಂತಿದ್ದ ಅಜ್ಜಿಯ .30 ಸಾವಿರ ಹಣ ದೋಚಿದ ಘಟನೆ ಬಾಗಲಕೋಟೆ ಬಳಿಯ ಗದ್ದನಕೇರಿ ಕ್ರಾಸ್‌ನಲ್ಲಿ ಸೋಮವಾರ ನಡೆದಿದೆ.
ಬಾದಾಮಿಗೆ ಸಂಬಂಧಿಕರೊಬ್ಬರಿಗೆ 30 ಸಾವಿರ ಹಣ ಕೊಡಲು ಹೊರಟಿದ್ದ ಅಜ್ಜಿ ಚೆನ್ನಮ್ಮ ಎಂಬ ವೃದ್ಧೆಯ ಹಣ ಕಳ್ಳತನವಾಗಿದೆ. ಗದ್ದನಕೇರಿ ಕ್ರಾಸ್‌ನಿಂದ ಬಾಗಲಕೋಟೆ ಮಾರ್ಗ ಮಧ್ಯೆ ಕಳ್ಳತನ ನಡೆದಿದೆ. ಅಜ್ಜಿ ಬ್ಯಾಗ್‌ನಲ್ಲಿದ್ದ .30 ಸಾವಿರ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ. ಮಹಿಳೆಯರು ಬಸ್‌ನಲ್ಲಿ ಹೆಚ್ಚು ಇದ್ದ ವೇಳೆ ಕಳ್ಳರ ಕೈಕಚಳಕ ಮಾಡಿದ್ದಾರೆ. ಬಾಗಲಕೋಟೆ ಬಸ್‌ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಬ್ಯಾಗ್ ನೋಡಿದಾಗ ಹಣ ಇರಲಿಲ್ಲ. ಈ ವೇಳೆ ವೃದ್ಧೆ ಕಣ್ಣೀರು ಹಾಕುತ್ತಾ ಪೊಲೀಸರ ಎದುರಿಗೆ ತನ್ನ ಅಳಲು ತೊಡಿಕೊಳ್ಳುತ್ತಿದ್ದಳು.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ಕಾರು ಅಪಘಾತ: ಚಾಲಕ ಸಾವು, ಮೂವರ ಸ್ಥಿತಿ ಗಂಭೀರ
ಲಗೇಜ್ ವಿಚಾರ; ಕಂಡಕ್ಟರ್ ಜೊತೆ ಮಹಿಳೆಯ ವಾಗ್ವಾದ!
ಲಗೇಜ್ ವಿಚಾರದಲ್ಲಿ ಸಾರಿಗೆ ಸಿಬ್ಬಂದಿ ಜೊತೆ ಮಹಿಳಾ ಪ್ರಯಾಣಿಕರೊಬ್ಬರು ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಶಿರಾಡಿ: ಟ್ಯಾಂಕರ್ ಚಾಲಕನಿಗೆ ಹಲ್ಲೆಗೈದು ನಗದು ದರೋಡೆ
ಇಲಕಲ್‌ದಿಂದ ಮುದಗಲ್ ಮಾರ್ಗದ ಕಡೆಗೆ ಹೋಗುವ ಬಸ್‌ನಲ್ಲಿ ಈ ಮಹಿಳೆ ಪ್ಲಾಸ್ಟಿಕ್ ವಸ್ತುಗಳನ್ನು ಬಸ್‌ನ ಸೀಟ್ ಮೇಲೆ ಇಟ್ಟು ವ್ಯಾಪಾರಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಂಡಕ್ಟರ್ ಬಸ್‌ನಲ್ಲಿ ಸೀಟ್ ಮೇಲೆ ಲಗೇಜ್ ಇಟ್ಟರೆ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತೆ. ಲಗೇಜ್ ಅನ್ನು ಸೀಟ್ ಬಿಟ್ಟು ಕೆಳಗೆ ಇರಿಸಿ ಎಂದು ಹೇಳಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ ನಿನ್ನೆಯವರಿಗೆ ಸುಮ್ಮನಿದ್ದು ಈಗ್ಯಾಕೆ ಹೀಗೆ ಮಾಡುತ್ತಿದ್ದೀರಿ. ಮಹಿಳೆಯರಿಗೆ ಉಚಿತ ಪ್ರಯಾಣ ಅಂತೀರಾ. ಹಾಗಾದ್ರೆ ನಮ್ಮಂಥವರ ಗೋಳು ಕೇಳುವವರು ಯಾರು? ನಮ್ಮ ಲಗೇಜ್ ಹಾಕಿದರೆ ನಡುದಾರಿಯಲ್ಲಿ ಇಳಿಸುತ್ತೇವೆ ಎಂದು ಕಂಡಕ್ಟರ್ ಹೇಳುತ್ತಾರೆ ಎಂದು ಮಹಿಳೆ ವಾಗ್ವಾದ ನಡೆಸಿದ್ದಾರೆ. ಆರ್ಡಿನರಿ ಬಸ್‌ನಲ್ಲಿ ಹಿಂದುಗಡೆ ಸೀಟ್ ಇರೋದಿಲ್ಲ. ಅಲ್ಲಿ ಹಾಕಿ ಲಗೇಜ್ ಕೊಂಡೊಯ್ಯರಿ ಎಂದು ಕಂಡಕ್ಟರ್ ಹೇಳಿದರೂ ಕೂಡ ಮಹಿಳೆ ಮಾತಿನ ಚಕಮಕಿ ಮುಂದುವರಿಸಿದ ವಿಡಿಯೊ ಇದೀಗ ವೈರಲ್ ಆಗಿದೆ.