Asianet Suvarna News Asianet Suvarna News

ಮಾಧ್ಯಮದಲ್ಲಿ ಕಳ್ಳತನ ವರದಿ: ಕದ್ದ ಚಿನ್ನಾಭರಣ ಕೋರಿಯರ್‌ ಮೂಲಕ ಹಿಂದುರುಗಿಸಿದ ಕಳ್ಳರು

Crime News: ಕದ್ದ 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕೊರಿಯರ್ ಮೂಲಕ ಕಳ್ಳರು ಹಿಂದುರಿಗಿಸಿದ್ದಾರೆ 
 

Thieves return stolen jewellery through courier to victim in Uttar Pradesh mnj
Author
First Published Nov 3, 2022, 8:37 PM IST

ಗಾಜಿಯಾಬಾದ್ (ನ. 03): ಕದ್ದ 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕೊರಿಯರ್ ಮೂಲಕ ಕಳ್ಳರು ಹಿಂದುರಿಗಿಸಿದ್ದಾರೆ. ಉತ್ತರಪ್ರದೇಶ (Uttar Pradesh) ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಕಳ್ಳತದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಕಳ್ಳರು ಚಿನ್ನಾಭರಣ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ಕಳ್ಳರು ರಾಜ್ ನಗರ ಎಕ್ಸಟೆಂಶನ್‌ನ ಫಾರ್ಚೂನ್ ಅಪಾರ್ಟ್‌ಮೆಂಟ್‌ನ ನಿವಾಸಿಗೆ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸೇರಿದಂತೆ ಕದ್ದ ಬೆಲೆಬಾಳುವ ವಸ್ತುಗಳನ್ನು ಕೊರಿಯರ್ ಮೂಲಕ ಹಿಂದಿರುಗಿಸಿದ್ದಾರೆ. ಆದರೆ ಆರೋಪಿಗಳು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಎಸ್ಕೇಪಾಗಿದ್ದಾರೆ. ಆದರೆ ಕೋರಿಯರ್‌ ಮೂಲಕ ಕೇವಲ 5 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹಿಂದಿರುಗಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಕುಟುಂಬಸ್ಥರು ಅಕ್ಟೋಬರ್ 23 ರಂದು ದೀಪಾವಳಿಗೆಂದು ಊರಿಗೆ ಹೋದಾಗ ಮನೆಯಲ್ಲಿ ಕಳ್ಳತನವಾಗಿದೆ. ಅಕ್ಟೋಬರ್ 27ರ ಸಂಜೆ ಹಿಂದಿರುಗಿದಾಗ  ಮನೆ ದರೋಡೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕ ಪ್ರೀತಿ ಸಿರೋಹಿ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂದಗ್ರಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಬಳಿಕ ಮಾಧ್ಯಮಗಳಲ್ಲಿ ಈ ಸಂಬಂಧ ವರದಿಗಳು ಪ್ರಕಟವಾಗಿದ್ದವು. 

ಅಕ್ಟೋಬರ್ 31 ರಂದು ಕುಟುಂಬಸ್ಥರು ಕೊರಿಯರ್‌ವೊಂದನ್ನು ಸ್ವೀಕರಿಸಿದ್ದು ದರೋಡಯಾಗಿದ್ದ ಚಿನ್ನಾಭರಣಗಳನ್ನು ಪ್ಯಾಕೆಟ್‌ನಲ್ಲಿ ಕಂಡು ಆಶ್ಚರ್ಯಗೊಂಡಿದ್ದಾರೆ. ಅಕ್ಟೋಬರ್ 31 ರಂದು ಸಂಜೆ ನಮಗೆ ಕೊರಿಯರ್ ಬಂತು, ಅದರಲ್ಲಿ ರಾಜದೀಪ್ ಜ್ಯುವೆಲರ್ಸ್, ಸರಾಫಾ ಬಜಾರ್, ಹಾಪುರ್ ಎಂದು ನಮೂದಿಸಲಾಗಿತ್ತು. ನಾನು ಪ್ಯಾಕೆಟ್ ತೆರೆದಾಗ ನಮಗೆ ಸೇರಿದ ಬಾಕ್ಸ್‌ ಪತ್ತೆಯಾಗಿದೆ. ನಂತರ ಅದನ್ನು ತೆರೆದು ನೋಡಿದಾಗ ಕಳ್ಳತನವಾಗಿದ್ದ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. ಆದರೆ ಉಳಿದ ಚಿನ್ನಾಭರಣಗಳು ನಮಗೆ ಇನ್ನೂ ಬಂದಿಲ್ಲ ಎಂದು  ಪ್ರೀತಿ ಸಿರೋಹಿ ಮಗ ಹೇಳಿದ್ದಾರೆ. 

ಮನೆಯ ಸುತ್ತಮುತ್ತಲಿನ  ಸಿಸಿಟಿವಿಯನ್ನು ಪರೀಶಿಲಿಸಿದಾಗ, ಪೊಲೀಸರು 20ರ ಹರೆಯದ ಯುವಕನೊಬ್ಬ ಶಾಲಾ ಬ್ಯಾಗ್‌ನೊಂದಿಗೆ ಹೊರಬರುತ್ತಿರುವುದು ಕಂಡುಬಂದಿದೆ. ತನಿಖೆ ವೇಳೆ ಪೊಲೀಸರಿಗೆ ಬ್ಯಾಗ್ ಮನೆ ಮಾಲೀಕ ಪ್ರೀತಿ ಮಗನದ್ದು ಎಂದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ,ಯುವಕ ಮನೆಯಿಂದ ಕಾಲ್ನಡಿಗೆಯಲ್ಲಿ ಮತ್ತು ಒಂಟಿಯಾಗಿ ಹೊರಬರುತ್ತಿರುವುದು ಕಂಡುಬಂದಿದೆ.

ಪ್ರಾಮಾಣಿಕನಾ... ಲ್ಯಾಪ್‌ಟಾಪ್ ಎಗರಿಸಿ ಮಾಲೀಕನಿಗೆ ಕ್ಷಮಿಸಿ ಎಂದು ಮೇಲ್ ಮಾಡಿದ ಕಳ್ಳ

ಇನ್ನು ಪೊಲೀಸರ ತಂಡವು ಸರಾಫಾ ಬಜಾರ್‌ಗೆ ತಲುಪಿ ಕೊರಿಯರ್‌ನಲ್ಲಿ ನಮೂದಿಸಿದ್ದ ರಾಜ್‌ದೀಪ್ ಜ್ಯುವೆಲರ್ಸ್ ಅಂಗಡಿಯ ವಿವರಗಳನ್ನು ಪರಿಶೀಲಿಸಿದಾಗ, ಈ ಹೆಸರಿನ ಯಾವುದೇ ಅಂಗಡಿ ಪತ್ತೆಯಾಗಿಲ್ಲ. ಕೋರಿಯರ್‌ನಲ್ಲಿ ನಮೂದಿಸಲಾದ ಮೊಬೈಲ್ ಸಂಖ್ಯೆಯೂ ನಕಲಿಯಾಗಿದೆ. ಕೊರಿಯರ್ ಕಂಪನಿಗೆ ಹೋಗಿ ಪರೀಶಿಲಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ. ನಾವು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow Us:
Download App:
  • android
  • ios