ಗದಗ(ಸೆ.09): ಕಾರ್ ವ್ಯಾಮೋಹದಿಂದ ಶಿಕ್ಷಕಿ ಹಾಗೂ ಅವರ ಮಗಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಜಿಲ್ಲೆ ರೋಣ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ. ಶಿಕ್ಷಕಿ ಪ್ರಭಾವತಿ ಜುಟ್ಲದ್ ಹಾಗೂ ಅವರ ಮಗಳು ವರ್ಷ ಪಾಟೀಲ್ ಅವರೇ ವಂಚನೆಗೊಳಗಾದವರಾಗಿದ್ದಾರೆ.

ಖದೀಮರು ಸ್ನ್ಯಾಪ್ ಡೀಲ್ ಎಂಬ ಪ್ರಸಿದ್ಧ ಆನ್‌ಲೈನ್‌ ಶಾಪಿಂಗ್‌ ಕಂಪನಿ ಹೆಸರಲ್ಲಿ ಶಿಕ್ಷಕಿ ಹಾಗೂ ಅವರ ಮಗಳಿಗೆ ಮೋಸ ಮಾಡಿದ್ದಾರೆ.  ಸ್ನ್ಯಾಪ್ ಡೀಲ್ ಎಂಬ ಆನ್‌ಲೈನ್‌ ಶಾಪಿಂಗ್‌ ಕಂಪನಿಯಿಂದ ನೀವು ಬಹುಮಾನವಾಗಿ ಕಾರ್ ಗೆದ್ದಿದ್ದು, ನಿಮಗೆ ಕಾರ್ ಬೇಕೋ ಹಣ ಬೇಕೋ ಎಂದು ಆಸೆ ವಂಚಕರು ತೋರಿಸಿದ್ದಾರೆ. ಖದೀಮರ ಬಣ್ಣದ ಮಾತಿಗೆ ಮರುಳಾದ ತಾಯಿ ಮಗಳು ಹಣ ವರ್ಗಾವಣೆ ಮಾಡುವ ಮೂಲಕ ಮೋಸ ಹೋಗಿದ್ದಾರೆ. 

ಡ್ರಗ್ಸ್ ಮಾಫಿಯಾ ಹಿಂದೆ ರಾಜಕಾರಣಿ, ಅಧಿಕಾರಿಗಳು ಅಡಗಿದ್ದಾರೆ: ಕೈ ಹಿರಿಯ ನಾಯಕ ಹೊಸ ಬಾಂಬ್

ಮಾತು ನಂಬಿದ ಶಿಕ್ಷಕಿಯಎಸ್‌ಬಿಐ ಖಾತೆಯಿಂದ 2 ಲಕ್ಷ 35 ಸಾವಿರ ಹಾಗೂ ಮಗಳು ವರ್ಷ ಅವರ ಸೆಂಟ್ರಲ್ ಬ್ಯಾಂಕ್ ಅಕೌಂಟ್ ನಿಂದ 4 ಸಾವಿರದ 500 ರೂಪಾಯಿ ಹಣವನ್ನ ವರ್ಗಾವಣೆ ಮಾಡಿದ್ದಾರೆ. ದುಡ್ಡು ಕಳೆದುಕೊಂಡ ಮೇಲೆ ವಂಚನೆಗೊಳಗಾಗಿದ್ದು ಗೊತ್ತಾಗಿದೆ. ಬಳಿಕ ಈ ಸಂಬಂಧ ಗದಗನ ಸೈಬರ್‌ ಕ್ರೈಂ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.