ಚಾಮರಾಜನಗರದಲ್ಲಿ ಪೊಲೀಸರ ಮನೆಗೇ ಇಲ್ಲ ರಕ್ಷಣೆ: ಪೇದೆ ಮನೆಗೆ ಕನ್ನ ಹಾಕಿ ಚಿನ್ನಾಭರಣ ಕದ್ದ ಕಳ್ಳರು!
ಹನೂರು ಆಯ್ತು ಮೊನ್ನೆ ಗುಂಡ್ಲುಪೇಟೆ ಆಯ್ತು ಇಂದು ಮತ್ತೆ ಚಾಮರಾಜನಗರದಲ್ಲಿ ಮನೆಗಳ್ಳತನ ನಡೆದಿದೆ. ಇದು ಚಾಮರಾಜನಗರ ಜಿಲ್ಲಾ ಪೊಲೀಸರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಚಾಮರಾಜನಗರ(ಅ.16): ನಗರದಲ್ಲಿ ಪೊಲೀಸರ ಮನೆಗೇ ರಕ್ಷಣೆ ಇಲ್ಲದಂತಾಗಿದೆ. ಚಾಮರಾಜನಗರ ಜಿಲ್ಲಾ ಪೊಲೀಸರನ್ನ ಕಂಡ್ರೆ ಕಳ್ಳಕಾಕರಿಗೆ ಭಯಾನೇ ಇಲ್ಲವಾಗಿದೆ. ಹೌದು, ಕುಟುಂಬ ಸಮೇತ ಊರಿಗೆ ತೆರಳಿದ್ದ ಪೊಲೀಸ್ ಕಾನ್ಸ್‌ಟೇಬಲ್ ಮನೆಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ.
ಮನೆ ಒರಾಂಡದಲ್ಲಿ ನಿಲ್ಲಿಸಿದ್ದ ಬೈಕ್ ಮೇಲೆ ಖಾಕಿ ಟೋಪಿ ಇದ್ರೂ ಭಯಪಡದೆ ಖದೀಮರು ಕಳ್ಳತನ ಮಾಡಿದ್ದಾರೆ. ಮನೆ ಬಾಗಿಲು ಮೀಟಿ 80 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 40 ಸಾವಿರ ನಗದು ಕಳ್ಳತನ ಮಾಡಿದ್ದಾರೆ.
ಕಳ್ಳರಿಗೆ ವರದಾನವಾದ ಬೆಂಗ್ಳೂರು ಮಳೆ: ಪಾರ್ಕ್‌ನಲ್ಲಿದ್ದ ಶ್ರೀಗಂಧದ ಮರಗಳನ್ನ ರಾತ್ರೋ ರಾತ್ರಿ ಕದ್ದ ಖದೀಮರು!
ಚಾಮರಾಜನಗರ ಜಿಲ್ಲಾ ಪೊಲೀಸರಿಗಿಂತ ಕಳ್ಳರೇ ಚಾಲಾಕಿಗಳಾಗಿದ್ದಾರೆ. ಜಿಲ್ಲೆಯಾದ್ಯಂತ ಸಾಲು ಸಾಲು ಮನೆಗಳ್ಳತನ ನಡೆಯುತ್ತಿದ್ರೂ ಇದುವರೆಗೂ ಓಬ್ಬನೇ ಒಬ್ಬ ಕಳ್ಳ ಬಂಧನವಾಗಿಲ್ಲ. ಚಾಮರಾಜನಗರದಲ್ಲಿ ಪೊಲೀಸರು ಇದ್ದಾರೋ ಇಲ್ವೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹನೂರು ಆಯ್ತು ಮೊನ್ನೆ ಗುಂಡ್ಲುಪೇಟೆ ಆಯ್ತು ಇಂದು ಮತ್ತೆ ಚಾಮರಾಜನಗರದಲ್ಲಿ ಮನೆಗಳ್ಳತನ ನಡೆದಿದೆ. ಇದು ಚಾಮರಾಜನಗರ ಜಿಲ್ಲಾ ಪೊಲೀಸರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.