Asianet Suvarna News Asianet Suvarna News

ಚಾಮರಾಜನಗರ: ಬ್ಯಾಂಕ್ ಸಿಬ್ಬಂದಿಯಂತೆ ಬಂದು 5 ಲಕ್ಷ ಹೊತ್ತೊಯ್ದ ಚಾಲಾಕಿ ಕಳ್ಳ..!

ಚಾಲಾಕಿ ಕಳ್ಳ ಟಿಪ್ ಟಾಪ್ ಆಗಿ, ಸ್ಟೈಲಿಷ್ ಆಗಿ ಬ್ಯಾಂಕ್ ಕ್ಯಾಷ್ ಕೌಂಟರ್‌ಗೆ ಬಂದು ಯಾವುದೇ ಆತಂಕವಿಲ್ಲದೆ ಐದು ಲಕ್ಷ ರುಪಾಯಿ ಎಗರಿಸಿ ಬಂದ ದಾರಿಯಲ್ಲಿ ವಾಪಸ್ ತೆರಳಿದ್ದಾನೆ. ಬ್ಯಾಂಕ್ ಸಿಬ್ಬಂದಿ ರೀತಿಯಲ್ಲೇ ವರ್ತಿಸಿದ್ದರಿಂದ ಇತರರಿಗೆ ಯಾವುದೇ ಅನುಮಾನ ಬಂದಿಲ್ಲ. ಜನರ ನಡುವೆಯೇ ಕಳ್ಳ ಕರಾಮತ್ತು ತೋರಿದ್ದು ಕಳ್ಳನ ಮೋಸದಾಟಕ್ಕೆ ಬ್ಯಾಂಕ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

Thief who came to Bank  and took away 5 lakhs in Chamarajanagra grg
Author
First Published Oct 19, 2023, 4:17 AM IST

ಚಾಮರಾಜನಗರ(ಅ.19):  ಬ್ಯಾಂಕ್‌ಗೆ ಸಿಬ್ಬಂದಿ ರೀತಿ ಬಂದು ರಾಜಾರೋಷವಾಗಿಯೇ 5 ಲಕ್ಷ ರು. ಹಣ ಕದ್ದೊಯ್ದಿರುವ ಘಟನೆ ಚಾಮರಾಜನಗರದ ಕೆನೆರಾ ಬ್ಯಾಂಕಿನಲ್ಲಿ ಬುಧವಾರ ಬೆಳಗ್ಗೆ 12ರ ಹೊತ್ತಿಗೆ ನಡೆದಿದೆ. ಚಾಮರಾಜನಗರ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಈ ಕಳವು ಪ್ರಕರಣ ನಡೆದಿದೆ. 

ಚಾಲಾಕಿ ಕಳ್ಳ ಟಿಪ್ ಟಾಪ್ ಆಗಿ, ಸ್ಟೈಲಿಷ್ ಆಗಿ ಬ್ಯಾಂಕ್ ಕ್ಯಾಷ್ ಕೌಂಟರ್‌ಗೆ ಬಂದು ಯಾವುದೇ ಆತಂಕವಿಲ್ಲದೆ ಐದು ಲಕ್ಷ ರುಪಾಯಿ ಎಗರಿಸಿ ಬಂದ ದಾರಿಯಲ್ಲಿ ವಾಪಸ್ ತೆರಳಿದ್ದಾನೆ. ಬ್ಯಾಂಕ್ ಸಿಬ್ಬಂದಿ ರೀತಿಯಲ್ಲೇ ವರ್ತಿಸಿದ್ದರಿಂದ ಇತರರಿಗೆ ಯಾವುದೇ ಅನುಮಾನ ಬಂದಿಲ್ಲ. ಜನರ ನಡುವೆಯೇ ಕಳ್ಳ ಕರಾಮತ್ತು ತೋರಿದ್ದು ಕಳ್ಳನ ಮೋಸದಾಟಕ್ಕೆ ಬ್ಯಾಂಕ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ‌ ಮಾಡಿದ ಗಂಡ

5 ಲಕ್ಷ ರುಪಾಯಿ ಬಂಡಲ್ ಹಿಡಿದು ಆರಾಮಾಗಿ ಹೊರಬಂದಿರುವ ಭೂಪನಿಗೆ ಇತರ ಮೂವರು ಸಹಕಾರ ನೀಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Follow Us:
Download App:
  • android
  • ios