Asianet Suvarna News Asianet Suvarna News

ಕದ್ದ ಚಿನ್ನದ ನೆಕ್ಲೆಸ್ ವಾಟ್ಸಾಪ್ ಡಿಪಿ ಹಾಕಿ ಸಿದ್ದಬಿದ್ದ ಖತರ್ನಾಕ್ ಕಳ್ಳಿ!

ಕದ್ದ ಚಿನ್ನವನ್ನು ವಾಟ್ಸಪ್ ಡಿಪಿಯಲ್ಲಿ ಹಾಕಿ ಖತರ್ನಾಕ್ ಕಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Thief shared the stolen gold necklace on WhatsApp DP at bengaluru rav
Author
First Published Aug 9, 2024, 12:06 PM IST | Last Updated Aug 9, 2024, 12:06 PM IST

ಬೆಂಗಳೂರು (ಆ.9): ಕದ್ದ ಚಿನ್ನವನ್ನು ವಾಟ್ಸಪ್ ಡಿಪಿಯಲ್ಲಿ ಹಾಕಿ ಖತರ್ನಾಕ್ ಕಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಪೇಟೆ ಮೂಲದ ರೇಣುಕಾ (38) ಬಂಧಿತ ಆರೋಪಿ. ಕೆಲಸ ಕೊಟ್ಟ ಮನೆ ಮಾಲೀಕರ ಮನೆಗೇ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳಿ. ನಗರದ ಅಪಾರ್ಟ್‌ಮೆಂಟ್‌ಗಳ ಬಳಿ ತೆರಳಿ ಕೆಲಸ ಇದ್ಯಾ ಅಂತಾ ಕೇಳುತ್ತಿದ್ದ ರೇಣುಕಾ. ನನಗೆ ಕುಕ್ಕಿಂಗ್ ಬರುತ್ತೆ, ಸೌತ್, ನಾರ್ತ್ ಎಲ್ಲ ಅಡುಗೆ ಮಾಡ್ತೇನೆ ಎಂದು ನಂಬಿಸಿ ಕೆಲಸ ಕೇಳುತ್ತಿದ್ದ ಕಳ್ಳಿ. ಈ ವೇಳೆ ಅವಶ್ಯಕತೆ ಇರೋ ಅಪಾರ್ಟ್ ಮಾಲೀಕರ ಪರಿಚಯ ಮಾಡುತ್ತಿದ್ದ ಸೆಕ್ಯುರಿಟಿಗಳು. ಹೀಗೆ ಪರಿಚಯವಾಗಿ ಮನೆಗೆಲಸಕ್ಕೆ ಸೇರಿದ ಬಳಿಕ ರೇಣುಕಾ ಆಟ ಶುರು ಮಾಡುತ್ತಿದ್ದಳು. ಇದೇ ರೀತಿ ಇತ್ತೀಚೆಗೆ ಮಾರತ್ತಹಳ್ಳಿ ಪೂರ್ವ ಪೌಂಟೇನ್ ಅಪಾರ್ಟ್‌ಮೆಂಟ್‌ನ ಎರಡು ಪ್ಲಾಟ್‌ಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ರೇಣುಕಾ. ಎರಡೂ ಮನೆಗಳಲ್ಲೂ ಬರೋಬ್ಬರಿ 100 ಗ್ರಾಮ್ ಚಿನ್ನ ಕದ್ದು ಕೈಚಳಕ ತೋರಿಸಿದ್ದ ರೇಣುಕಾ. ಮನೆ ಮಾಲೀಕೆಯ ತಾಳಿಯನ್ನು ಬಿಡದೇ ಕದ್ದು ಬಳಿಕ ತನಗೇನೂ ಗೊತ್ತಿಲ್ಲ ಅಂತಾ ನಾಟಕವಾಡಿದ್ದಳು. ಈ ಬಗ್ಗೆ ಮಾಲೀಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಬಳಿಕ ಪೊಲೀಸರು ರೇಣುಕಾಳನ್ನು ಕರೆಸಿ ವಿಚಾರಣೆ ನಡೆಸಿದ್ದರು. ಪೊಲೀಸರ ಮುಂದೆ ಅಮಾಯಕಳಂತೆ ನಟಿಸಿದ್ದ ಕಳ್ಳಿ. ಪಾಪದ ಹೆಣ್ಣು ಅಂದುಕೊಂಡು ಪೊಲೀಸರು ಬಿಟ್ಟು ಕಳಿಸಿದ್ದರು. 

ಬೈಕ್ ಕಳ್ಳತನ ಎಂದು ಬಂದವರಿಗೆ CCTV ಫೋಟೇಜ್ ತಂದ್ರೆ ಮಾತ್ರ FIR ಎಂದ ಪೊಲೀಸರು!

ಬಳಿಕ ಪೊಲೀಸರು ಏನೂ ಮಾಡೋದಿಲ್ಲ ಅಂತಾ ಗೊತ್ತಾಗಿ ಕದ್ದ ನೆಕ್ಲೆಸ್ ಧರಿಸಿ ಫೋಟೊ ತೆಗೆಸಿಕೊಂಡಿದ್ದ ರೇಣುಕಾ ಆ ಫೋಟೊವನ್ನು ತನ್ನ ವಾಟ್ಸಪ್ ಡಿಪಿ ಹಾಕಿ ತಗಲಾಕ್ಕೊಂಡ ಕಳ್ಳಿ. ಮೊದಲೇ ರೇಣುಕಾ ನಂಬರ್ ಪೊಲೀಸರು, ಮನೆ ಮಾಲೀಕರ ಮೊಬೈಲ್‌ನಲ್ಲಿ ಸೇವ್ ಆಗಿದ್ದರಿಂದ ವಾಟ್ಸಪ್ ಡಿಪಿಯಲ್ಲಿ ರೇಣುಕಾ ಕೊರಳಲ್ಲಿ ನೆಕ್ಲೆಸ್ ಇರೋ ಫೋಟೊ ನೋಡಿದ್ದಾರೆ. ಚಿನ್ನ ಕದ್ದ ಕಳ್ಳಿ ಇವಳೆ ಎಂಬುದು ಗೊತ್ತಾಗಿದೆ. ಬಳಿಕ ರೇಣುಕಾಳನ್ನು ಬಂಧಿಸಿದ ಪೊಲೀಸರು. ಬಂಧನ ಬಳಿಕ ತಪ್ಪೊಪ್ಪಿಕೊಂಡ ಕಳ್ಳಿ. ಸದ್ಯ ಬಂಧಿತಳಿಂದ 80 ಗ್ರಾಮ್ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿರೋ ಪೊಲೀಸರು. ಇನ್ನು ಯಾರಾರ ಮನೆಯಲ್ಲಿ ಇದೇ ರೀತಿ ಕದ್ದಿದ್ದಾಳೊ ಏನೋ ಎಲ್ಲಾ ಆಯಾಮಗಳಲ್ಲಿ ವಿಚಾರಣೆ ಮುಂದುವರಿಸಿರೋ ಪೊಲೀಸರು.

Latest Videos
Follow Us:
Download App:
  • android
  • ios