ಕದ್ದ ಹಣ ಪೊಲೀಸ್‌ ಠಾಣೆ ಬಳಿಯೇ ಬಚ್ಚಿಡುವ ಕಳ್ಳ: ಖತರ್ನಾಕ್‌ ಐಡಿಯಾಕ್ಕೆ ಬೆಚ್ಚಿದ ಪೊಲೀಸರು

ಜನರ ಜೇಬಿಗೆ ಕತ್ತರಿ ಹಾಕಿ ಹಾಗೂ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಕದಿಯುತ್ತಿದ್ದ ಹಣವನ್ನು ಪೊಲೀಸ್ ಠಾಣೆಯ ಸಮೀಪವೇ ಬಚ್ಚಿಡುತ್ತಿದ್ದ ನಟೋರಿಯಸ್ ಕಳ್ಳನನ್ನು ಮಂಗಳೂರಿನ ಬಂದರು ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ.

Thief hides stolen money near the police station Police are shocked by the idea of the Khatarnak thief sat

ವರದಿ-ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜ.15): ಜನರ ಜೇಬಿಗೆ ಕತ್ತರಿ ಹಾಕಿ ಹಾಗೂ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಕದಿಯುತ್ತಿದ್ದ ಹಣವನ್ನು ಪೊಲೀಸ್ ಠಾಣೆಯ ಸಮೀಪವೇ ಬಚ್ಚಿಡುತ್ತಿದ್ದ ನಟೋರಿಯಸ್ ಕಳ್ಳನನ್ನು ಮಂಗಳೂರಿನ ಬಂದರು ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ. ಆದರೆ, ಈತನ ಮೇಲೆ 35ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.

ಮಂಗಳೂರಿನ ಬಂದರು ಪೊಲೀಸ್ ಠಾಣೆಯ 100 ಮೀ. ದೂರದಲ್ಲಿ ಲಕ್ಷಾಂತರ ರೂ. ಹಣ ಬಚ್ಚಿಡುತ್ತಿದ್ದ ಹಮೀದ್ ಕುಂಞ ಮೋನು (48) ಎಂಬ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂದರು ರಸ್ತೆಯ ಖಾಸಗಿ ಜಾಗದ ಪಾಳು ಬಿದ್ದ ಕಟ್ಟಡದಲ್ಲಿ ಕದ್ದ ಹಣವನ್ನು ಈತ ಬಚ್ಚಿಡುತ್ತಿದ್ದನು. 2022ರ ನವೆಂಬರ್ 16ರಂದು ಮಂಗಳೂರಿನ ಹೂವಿನ ವ್ಯಾಪಾರಿ ಉಮ್ಮರ್ ಅವರ ಅಂಗಡಿಯಲ್ಲಿ 9 ಲಕ್ಷ ಕಳವು ಮಾಡಿದ್ದನು. ಹೀಗೆ ಕಳ್ಳತನ ಮಾಡಿದ 9 ಲಕ್ಷ ರೂ. ಹಣದಲ್ಲಿ ತನ್ನ ಖರ್ಚಿಗೆ ಆಗುವಷ್ಟು ಇಟ್ಟುಕೊಂಡು ಉಳಿದ 5.80 ಲಕ್ಷ ನಗದು ಹಣವನ್ನು ಪಾಳುಬಿದ್ದ ಕಟ್ಟಡದಲ್ಲಿ ಇಟ್ಟು ಊರಿಗೆ ಹೋಗಿದ್ದನು.

ಮಹಿಳೆಯಂತೆ ವೇಷ ಧರಿಸಿ ಗಿಡಗಳನ್ನು ಕದಿಯುತ್ತಿದ್ದವನ ಬಂಧನ!

ಪಾಳು ಬಿದ್ದ ಕಟ್ಟಡ ನೆಲಸಮ: ಆದರೆ ಊರಿಗೆ ಹೋಗಿ ವಾಪಾಸ್ ಬಂದ ವೇಳೆ ಕಟ್ಟಡ ಡೆಮಾಲಿಷ್ ಮಾಡಿ ಜಾಗ ಸಮತಟ್ಟು ಮಾಡಲಾಗಿತ್ತು. ಆಗ ಎಷ್ಟೇ ಹುಡುಕಾಡಿದರೂ ಹಣ ಸಿಗದೇ ಇದ್ದಾಗ ಕಳ್ಳ ಹಮೀದ್ ಅಲ್ಲಿಂದ ಜಾಗ ಖಾಲಿ ಮಾಡಿದ್ದನು. ಆದರೆ, ಈ ಮಧ್ಯೆ ಹೂವಿನ ಅಂಗಡಿ ಕಳವು ಆರೋಪಿ ಹುಡುಕಾಟದಲ್ಲಿದ್ದ ಪೊಲೀಸರಿಗೆ ಹಮೀದ್ ಕುಂಞಮೋನು ಸಿಕ್ಕಿ ಬಿದ್ದಿದ್ದಾನೆ. ನಂತರ ಆತನನ್ನು ಬಂಧಿಸಿ ವಿಚಾರಣೆ ‌ನಡೆಸಿದ ವೇಳೆ ಹಳೇ ಕಟ್ಟಡದಲ್ಲಿ ಬಚ್ಚಿಟ್ಟಿದ್ದ ಬಗ್ಗೆ ‌ಮಾಹಿತಿ ನೀಡಿದ್ದಾನೆ. ಆದರೆ ಕಟ್ಟಡ ನೆಲಸಮವಾಗಿರೋ ಬಗ್ಗೆ ಹೇಳಿದ್ದಾನೆ. 

ಹಣವನ್ನು ತೆಗೆದುಕೊಂಡಿದ್ದ ಕಾರ್ಮಿಕರು: ಹೀಗಾಗಿ ಕಟ್ಟಡ ನೆಲಸಮವಾದ ಜಾಗದ ಕಾರ್ಮಿಕರ ವಿಚಾರಣೆ ಮಾಡಿದಾಗ 5.80 ಲಕ್ಷ ರೂ. ಹಣ ಸಿಕ್ಕರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ ಮತ್ತು ಹೊರ ಜಿಲ್ಲೆಗಳಲ್ಲಿ ಕದ್ದ ಹಣಗಳನ್ನ ಇದೇ ಜಾಗದಲ್ಲಿ ಬಚ್ಚಿಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಮಂಗಳೂರು ಬಂದರು ಪೊಲೀಸ್ ಠಾಣೆಯ ಅನತಿ ದೂರದ ಜಾಗವನ್ನೇ ಕಳ್ಳನು ಸೇಫ್ ಲಾಕರ್ ಮಾಡಿಕೊಂಡಿದ್ದನು. ಇನ್ನು ಚಾಲಾಕಿ ಕಳ್ಳ ಹಮೀದ್‌ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ, ಹೊರ ಜಿಲ್ಲೆಗಳಲ್ಲಿಯೂ ತನ್ನ ಕೈಚಳಕ ತೋರಿಸುತ್ತಿದ್ದನು. ಒಟ್ಟಾರೆ 35ಕ್ಕೂ ಹೆಚ್ಚು ಸರಣಿ ಕಳ್ಳತನದಲ್ಲಿ ಹಮೀದ್ ಕುಂಞ ಮೋನು ಪೊಲೀಸರಿಗೆ ಬೇಕಾಗಿದ್ದನು.

ರಾತ್ರಿ ಹೆಂಗಸರ ಸಹವಾಸ ಹಗಲಲ್ಲಿ ಕಳ್ಳತನ: ದರೋಡೆಗೆ ಯತ್ನಿಸುತ್ತಿದ್ದ 6 ಮಂದಿ ಬಂಧನ

ಖತರ್ನಾಕ್‌ ಕಳ್ಳನ ಮೇಲೆ 22 ಬಂಧನ ವಾರಂಟ್: ಖತರ್ನಾಕ್‌ ಕಳ್ಳ ಹಮೀದ್ ಕುಂಞ ಮೋನು ಮೇಲೆ ಸುಮಾರು 22 ಬಂಧನ ವಾರಂಟ್ ಜಾರಿಯಾಗಿತ್ತು. ಪುತ್ತೂರು ನಗರ, ಉಪ್ಪಿನಂಗಡಿ, ಚಿಕ್ಕಮಗಳೂರು, ವೇಣೂರು, ಬೆಳ್ತಂಗಡಿ, ಶೃಂಗೇರಿ, ಮೂಡಿಗೆರೆ, ಧರ್ಮಸ್ಥಳ ಸೇರಿ ಹಲವು ಠಾಣೆಗಳಲ್ಲಿ ಕೇಸ್‌ಗಳಿದ್ದವು. ಹೂವಿನ ವ್ಯಾಪಾರಿಯ ಮಳಿಗೆಯಲ್ಲಿ ಹಣ ಕಳ್ಳತನ ಮಾಡಿರುವ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios