ಬಾಗಲಕೋಟೆ: ಊಟ, ಒಳ ಉಡುಪುಗಳನ್ನು ಕದಿಯೋದೆ ಈ ಖದೀಮನ ಟಾರ್ಗೆಟ್..!
* ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ನಡೆದ ಘಟನೆ
* ಊಟ, ಉಡುಪು ಕದಿಯುವ ಖದೀಮ
* ಕಳ್ಳನ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ರಬಕವಿ-ಬನಹಟ್ಟಿ(ಜೂ.28): ಕಳ್ಳರೆಂದರೆ ಸಾಮಾನ್ಯವಾಗಿ ಆಭರಣ, ಹಣ ಕದಿಯುವುದು ಸಹಜ. ಆದರೆ ಕಳೆದ ಹದಿನೈದು ದಿನಗಳಿಂದ ಬನಹಟ್ಟಿಯ ಲಕ್ಷ್ಮೀನಗರ, ಸಾಯಿನಗರ, ಕಾಡಸಿದ್ಧೇಶ್ವರ ನಗರದಲ್ಲಿ ಖದೀಮನೊಬ್ಬ ಅಡುಗೆ ಮನೆಗೆ ನುಗ್ಗಿ ಆಹಾರ ಪದಾರ್ಥ ಹಾಗೂ ಮನೆಯ ಹೊರಗಡೆ ಒಣಹಾಕಿದ ಉಡುಪುಗಳನ್ನು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬನಹಟ್ಟಿಯ ಜಗದಾಳ ರಸ್ತೆಯಲ್ಲಿರುವ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬ ಈ ಕೃತ್ಯ ಎಸಗುತ್ತಿದ್ದಾನೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಲವು ದಿನಗಳಿಂದ ಹತ್ತಾರು ಮನೆಗಳಲ್ಲಿ ಬಟ್ಟೆಹಾಗೂ ಆಹಾರ ಸಾಮಗ್ರಿ ಕಳವಾಗುತ್ತಿರುವುದನ್ನು ಗಮನಿಸಿದ ಜನರು ಕಳ್ಳನ ಪತ್ತೆಗಾಗಿ ಜಾಗ್ರತೆ ವಹಿಸಿದ್ದರು.
ಡೇ ಟೈಂನಲ್ಲಿ ಸ್ಕೆಚ್ ಹಾಕಿ ರಾತ್ರಿ ಹೊತ್ತಲ್ಲಿ ಬೈಕ್ ಕ್ಯಾಚ್, ಬೆಂಗ್ಳೂರಲ್ಲಿ ಗ್ಯಾಂಗ್ ಆಕ್ಟೀವ್
ಸೋಮವಾರ ತಡರಾತ್ರಿ ಸಾಯಿನಗರದಲ್ಲಿನ ವೈದ್ಯರೊಬ್ಬರ ಮನೆಯ ಕಾಂಪೌಂಡ್‌ಗೆ ನುಗ್ಗಿದ ಖದೀಮ ಹಿಂದಿನ ಬಾಗಿಲಿನಿಂದ ಅಡುಗೆ ಮನೆಗೆ ನುಗ್ಗುವ ಪ್ರಯತ್ನ ಮಾಡುತ್ತಿರುವಾಗ, ಮನೆಯಲ್ಲಿದ್ದವರು ಕೂಗಾಡಿದ್ದಾರೆ. ಆಗ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಕುರಿತು ಪೊಲೀಸರು ಕೂಡ ಎಚ್ಚರವಹಿಸಿದ್ದು, ಕಳ್ಳನ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿವೆ. ಅದನ್ನು ಆಧರಿಸಿ, ಪೊಲೀಸರು ಕಳ್ಳನನ್ನು ಬಂಧಿಸಲು ಕ್ರಮವಹಿಸಿದ್ದಾರೆ. ಇದಲ್ಲದೇ ಸ್ಥಳೀಯರು ಕೂಡ ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದು ಕಳ್ಳನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.