Asianet Suvarna News Asianet Suvarna News

25 ವರ್ಷ ಬೊಂಬಾಯಿ, ಬೆಂಗಳೂರು ಸುತ್ತಿ ಪಾಪರ್ ಆಗಿ ಊರಿಗೆ ಬಂದ ಮಗ; ಮಾಡಿದ್ದು ಎಂಥಾ ಕೆಲಸ ನೋಡಿ!

ಹೆತ್ತ ತಾಯಿ ನನ್ನನ್ನು ಮನೆಯಿಂದ ಹೊರದಬ್ಬಿದ ಮಗ ಗಣಪತಿ, ತಂದೆ ಹೆಸರಿನ ಅಡಕೆ ತೋಟದಲ್ಲಿ ಫಸಲು ಕೊಯ್ದು ಮಾರಾಟ ಮಾಡಿದ್ದಾನೆ. ತನಗೆ ನಯಾಪೈಸೆಯನ್ನು ನೀಡದೇ ಅನಾಥೆಯನ್ನಾಗಿ ಮಾಡಿ​ದ್ದಾನೆ ಎಂದು ಜಾನಕಿ ಕಣ್ಣೀರು ಸುರಿಸುತ್ತಲೇ ಅಳಲು ತೋಡಿ​ಕೊಂಡರು.

The son cheated the old mother at shivamogga rav
Author
First Published Jan 6, 2023, 8:17 AM IST

ಸಾಗರ (ಜ.6) : ಹೆತ್ತ ತಾಯಿ ನನ್ನನ್ನು ಮನೆಯಿಂದ ಹೊರದಬ್ಬಿದ ಮಗ ಗಣಪತಿ, ತಂದೆ ಹೆಸರಿನ ಅಡಕೆ ತೋಟದಲ್ಲಿ ಫಸಲು ಕೊಯ್ದು ಮಾರಾಟ ಮಾಡಿದ್ದಾನೆ. ತನಗೆ ನಯಾಪೈಸೆಯನ್ನು ನೀಡದೇ ಅನಾಥೆಯನ್ನಾಗಿ ಮಾಡಿ​ದ್ದಾನೆ ಎಂದು ಜಾನಕಿ ಕಣ್ಣೀರು ಸುರಿಸುತ್ತಲೇ ಅಳಲು ತೋಡಿ​ಕೊಂಡರು. ಇಲ್ಲಿನ ಪತ್ರಿಕಾ ಭವನದಲ್ಲಿ 66 ವರ್ಷದ ಜಾನಕಿ ಅವರು ಪುತ್ರಿ ಸಾವಿತ್ರಿ ಜತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಮಗಾಗಿರುವ ಅನ್ಯಾಯದ ಕುರಿತು ಪತ್ರ​ಕ​ರ್ತ​ರಿಗೆ ವಿವ​ರಿಸಿ, ನ್ಯಾಯ ಕಲ್ಪಿ​ಸಲು ಮನವಿ ಮಾಡಿ​ದರು.

ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯಿಂದ ನ್ಯಾಯ ದೊರೆಯುತ್ತಿಲ್ಲ. ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ನಮ್ಮ ಪರವಾದ ಆದೇಶವಾಗಿದೆ. ಆದರೂ ಸದರಿ ಆದೇಶ ಅನುಷ್ಠಾನಕ್ಕೆ ತರುವಲ್ಲಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ನನ್ನ ಮಗಳು ನನ್ನ ಗೋಳನ್ನು ನೋಡಲಾರದೇ ನನಗೆ ಆಸರೆಯಾಗಿ ಊರಿಗೆ ಬಂದು ಆರೋಗ್ಯ ವಿಚಾರಿಸಿದರೆ, ಆಕೆಗೂ ಈ ಊರಿಗೆ ಕಾಲಿಡಬೇಡ ಎಂದು ಹೆದರಿಸುತ್ತಿದ್ದಾನೆ ಎಂದು ದೂರಿ​ದ​ರು.

Crime News: ಹಿಂದಿನಿಂದ ಬೈಕ್‌ಗೆ ಗುದ್ದಿದ ಕಾರು: ರೈತ ಸಾವು, ಕೊಲೆ ಮಾಡಿರೋ ಶಂಕೆ

ಪುತ್ರಿ ಸಾವಿತ್ರಿ ಮಾತನಾಡಿ, ಅಣ್ಣ ಗಣಪತಿ 25 ವರ್ಷಗಳಿಂದ ಬೊಂಬಾಯಿ, ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಊರುಗಳಲ್ಲಿ ಸುತ್ತಿ ಸಂಪೂರ್ಣ ಪಾಪರ್‌ ಅಗಿ ಮನೆಗೆ ಬಂದು ಸೇರಿಕೊಂಡಿದ್ದಾನೆ. ನಮ್ಮ ಮೂಲ ಊರಾದ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಪಿತ್ರಾರ್ಜಿತ ಆಸ್ತಿಯ ಖಾತೆ ಜಮೀನನ್ನು ವಯೋವೃದ್ಧೆಯಾದ ತಾಯಿಯ ಹೆಬ್ಬೆಟ್ಟು ಹಾಕಿಸಿ, ವಂಶವೃಕ್ಷದಲ್ಲಿ ನನ್ನ ಹೆಸರನ್ನು ತೋರಿಸದೇ ಮಾರಾಟ ಮಾಡಿದ್ದಾನೆ. ಇದ​ರಿಂದ ಬಂದ ಹಣದಿಂದ ಭೀಮನಕೋಣೆಯಲ್ಲಿ ಒಂದು ಜಮೀನನ್ನು ತನ್ನೊಬ್ಬನ ಹೆಸರಿಗೆ ಖರೀದಿಸಿ, ನಮಗೆ ವಂಚಿಸಿರುವ ಕುರಿತು ಕುಂದಾಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದರು.

ಭೀಮನಕೋಣೆ ಸಮೀಪದ ಕೆರೆಕೊಪ್ಪದಲ್ಲಿರುವ ಸ.ನಂ.38/1 ರÜಲ್ಲಿರುವ ದಿವಂಗತ ತಂದೆ ಹೆಸರಿನ 0.25.4 ಗುಂಟೆ ಜಮೀನನ್ನು ತಾಯಿ ಹೆಸರಿಗೆ ಖಾತೆ ಬದಲಾವಣೆ ಆಗದಂತೆ ತಕರಾರು ಹಾಕಿ ತಡೆಹಿಡಿಯುವಂತೆ ಮಾಡಿದ್ದಾನೆ. ಇದೇ ಗ್ರಾಮದ ಸ.ನಂ.123/25 ರಲ್ಲಿರುವ 0.05 ಗುಂಟೆ ಮನೆ ಜಾಗವನ್ನು ತಾಯಿ ಹೆಸರಿಗೆ ವರ್ಗಾವಣೆ ಆಗದಂತೆ ತಡೆ ಹಿಡಿಸಿದ್ದಾನೆ. ಮಾನಸಿಕವಾಗಿ ತಾಯಿಯನ್ನು ಹಿಂಸಿಸಿ ಜೀವನೋಪಾಯಕ್ಕೂ ಏನನ್ನು ನೀಡದೇ ಜೀವಂತ ಸಾಯಿಸುತ್ತಿದ್ದಾನೆ ಎಂದು ಅಳಲು ತೋಡಿಕೊಂಡರು.

Bengaluru Crime: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ

ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ತಾಯಿ ಜಾನಕಮ್ಮನ ಹೆಸರಿಗೆ ನಮ್ಮ ತಂದೆ ಹೆಸರಿನಲ್ಲಿರುವ ಆಸ್ತಿ ಖಾತೆ ಬದಲಾವಣೆ ಆಗಬೇಕು. ಮಗ ಗಣಪತಿ ತಾಯಿಯ ಜೀವನಕ್ಕೆ ಎಲ್ಲ ರೀತಿಯ ಆಹಾರ ಸಾಮಗ್ರಿಗಳನ್ನು ಒದಗಿಸಬೇಕು ಎಂಬ ತೀರ್ಪು ಬಂದಿದೆ. ಆದರೆ, ತೀರ್ಪಿನಂತೆ ಇದುವರೆಗೂ ಖಾತೆ ಬದಲಾವಣೆ ಮಾಡಿಲ್ಲ ಎಂದು ದೂರಿದರು.

ನನಗೆ ಹಾಗೂ ತಾಯಿ ಜಾನಕಮ್ಮನನ್ನು ಹೊಡೆದು ಗಾಯಗೊಳಿಸಿ ಸಾಯಿಸುತ್ತೇನೆ ಎಂದು ಜೀವಬೆದರಿಕೆ ಹಾಕಿರುವ ಘಟನೆಯ ಕುರಿತು ಚಿಕಿತ್ಸೆ ಪಡೆಯುತ್ತಿರುವ ಛಾಯಾಚಿತ್ರವನ್ನು ಪ್ರದರ್ಶಿಸಿದರು. ಕ್ರೂರಿ ಪುತ್ರ ಗಣಪತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಹಸೀಲ್ದಾರ್‌ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.

Follow Us:
Download App:
  • android
  • ios