Asianet Suvarna News Asianet Suvarna News

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಬಾಲಕಿ ಬಟ್ಟೆ ಬದಲಾಯಿಸುವ ವಿಡಿಯೋ ರೆಕಾರ್ಡ್ ಮಾಡಿದ ದುರುಳರು!

ಬಾಲಕಿ ಬಟ್ಟೆ ಬದಲಾಯಿಸುವ ವೇಳೆ ಕಿಡಿಗೇಡಿಗಳು ಮೊಬೈಲ್‌ನಿಂದ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

The miscreants who recorded the girl's video morarje residential school kolar rav
Author
First Published Dec 17, 2023, 4:28 PM IST

ಕೋಲಾರ (ಡಿ.18): ಬಾಲಕಿ ಬಟ್ಟೆ ಬದಲಾಯಿಸುವ ವೇಳೆ ಕಿಡಿಗೇಡಿಗಳು ಮೊಬೈಲ್‌ನಿಂದ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

 16 ವರ್ಷದ ಬಾಲಕಿಯ ವಿಡಿಯೋ ಚಿತ್ರೀಕರಣ ಮಾಡಿರುವ ದುರುಳರು. ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಾಲಕಿ. ವಸತಿ ಗೃಹದಲ್ಲಿ ಬಾಲಕಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಕಣ್ಣೀರು.

ನಾನು ಬಟ್ಟೆ ಬದಲಾಯಿಸುವ ವಿಡಿಯೊ,ನಾನು ನನ್ನ ಸ್ನೇಹಿತರು ಒಡಾಡುವ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಯಾರು ವಿಡಿಯೋ ಮಾಡಿದ್ದಾರೆಂದು ಗೊತ್ತಿಲ್ಲ. ವಿಡಿಯೋ ಇದೆಯೆಂದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ವಿಡಿಯೋ ತೋರಿಸಿದ್ರು. ವಿಡಿಯೋ ನೋಡಿ ನನಗೆ ಶಾಕ್ ಆಗಿದೆ ಎಂದು ಕಣ್ಣೀರಿಟ್ಟ ಬಾಲಕಿ. 

ಪ್ರಾಂಶುಪಾಲರ ಎದುರಲ್ಲೇ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ ಸಿಬ್ಬಂದಿ!

ಪ್ರಾಂಶುಪಾಲ ಸೇರಿ ಮೂವರು ಸಿಬ್ಬಂದಿ ಸಸ್ಪೆಂಡ್

ಘಟನೆ ಸಂಬಂಧ ಕ್ರೈಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ ಕುಮಾರ್ ರಾಜು ಪ್ರತಿಕ್ರಿಯೆ ನೀಡಿದ್ದು, ಬಾಲಕಿಯ ಖಾಸಗಿ ವಿಡಿಯೋ ಸೆರೆ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡರು. ಈ ಘಟನೆ ಸಂಬಂಧ ಮೂರು ಜನ ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಬಗ್ಗೆ ಗಮನಕ್ಕೆ ಬಂದಿದೆ. ನನಗೂ ಸಹ ಆ ದೃಶ್ಯ ಮೊಬೈಲ್ ನಲ್ಲಿ ತೋರಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಮುನಿಯಪ್ಪ, ವಾರ್ಡನ ಮಂಜುನಾಥ್ ಅಮಾನತ್ತ ಮಾಡಲಾಗಿದೆ

ಯಾರು ಸೆರೆ ಹಿಡಿದಿದ್ದಾರೆ ಎಂದು ತನಿಖೆ ಮಾಡ್ತೀವಿ. ಕೂಡಲೇ ಇದರ ಹಿಂದೆ‌ ಇರುವ‌ ಜಾಲದ ಕುರಿತು‌ ಪರಿಶೀಲನೆ ನಡೆಸಲಾಗುವುದು. ಪೊಲೀಸ ಇಲಾಖೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿದೆ. ಇಲ್ಲಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ‌ ಬದಲಾವಣೆ ಮಾಡಲಾಗುವುದು. ಮಕ್ಕಳು‌ ಮತ್ತು ಪೋಷಕರು ಯಾವುದೇ ಆತಂಕಪಡುವ‌ ಅವಶ್ಯಕತೆ ‌ಇಲ್ಲ. ಇದೇ ಸಂದರ್ಭದಲ್ಲಿ ಪೋಷಕರು ನವೀನ್‌ ಕುಮಾರ್ ರಾಜು ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿದ ಪೋಷಕರು.
 

Follow Us:
Download App:
  • android
  • ios