ಡೈವರ್ಸ್‌ಗೆ ಒಪ್ಪದ 4 ತಿಂಗಳ ಗರ್ಭಿಣಿ ಪತ್ನಿಯನ್ನ ಮುಗಿಸಲು ಗಂಡನಿಂದ ಸಂಚು!

ಕೌಟುಂಬಿಕ ಕಲಹದಿಂದ ಕೋಪಗೊಂಡು ತನ್ನ 4 ತಿಂಗಳ ಗರ್ಭಿಣಿ ಪತ್ನಿಯನ್ನೇ ಅಪಘಾತ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಪತಿ ಸೇರಿ ಇಬ್ಬರು ಆರೋಪಿಗಳನ್ನು ಕೃತ್ಯ ನಡೆದ ಆರು ತಿಂಗಳ ಬಳಿಕ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

The husband tried to kill his wife in an accident in bengaluru rav

ಬೆಂಗಳೂರು (ಜು.17) :  ಕೌಟುಂಬಿಕ ಕಲಹದಿಂದ ಕೋಪಗೊಂಡು ತನ್ನ 4 ತಿಂಗಳ ಗರ್ಭಿಣಿ ಪತ್ನಿಯನ್ನೇ ಅಪಘಾತ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಪತಿ ಸೇರಿ ಇಬ್ಬರು ಆರೋಪಿಗಳನ್ನು ಕೃತ್ಯ ನಡೆದ ಆರು ತಿಂಗಳ ಬಳಿಕ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮ್ಮಸಂದ್ರ ನಿವಾಸಿ ಅರವಿಂದ (24) ಮತ್ತು ಮಾದನಾಯಕನಹಳ್ಳಿ ನಿವಾಸಿ ಉದಯ್‌ ಕುಮಾರ್‌ (27) ಬಂಧಿತರು. ಆರೋಪಿಗಳು ಕಳೆದ ಜನವರಿ 1ರಂದು ಸಂಜೆ 6.30ರ ಸುಮಾರಿಗೆ ಬಾಗಲೂರಿನ ಕೆಐಡಿಬಿ ಲೇಔಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಚೈತನ್ಯಾ(22) ಎಂಬಾಕೆಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಏರ್‌ಪೋರ್ಚ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಗಾಯಾಳು ಚೈತನ್ಯಾಳ ಪೋಷಕರು ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಬಾಗಲೂರು ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸಿಕೊಂಡು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೃಷಣ ಹಿಸುಕಿ ಗಾಯಗೊಳಿಸಿದವಗೆ 3 ವರ್ಷ ಜೈಲು: ಹೈಕೋರ್ಟ್‌ ಆದೇಶ

ಪ್ರಕರಣದ ಹಿನ್ನೆಲೆ:

ಕಮ್ಮಸಂದ್ರ ನಿವಾಸಿ ಅರವಿಂದ ಮತ್ತು ಹೊಸಕೋಟೆಯ ಚೈತನ್ಯ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಕೆಲ ದಿನ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಸಣ್ಣಪುಟ್ಟವಿಚಾರಗಳಿಗೆ ಜಗಳವಾಗುತ್ತಿತ್ತು. ತಂದೆ-ತಾಯಿಯನ್ನು ತನ್ನಿಂದ ದೂರು ಮಾಡಿದಳು ಎಂದು ಅರವಿಂದ ಪತ್ನಿ ಮೇಲೆ ಕೋಪಗೊಂಡಿದ್ದ. ಹೀಗಾಗಿ ವಿಚ್ಛೇದನ ಕೊಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಚೈತನ್ಯಾ 4 ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರವಾಗಿ ಅರವಿಂದ ಪತ್ನಿ ಜತೆಗೆ ಜಗಳವಾಡುತ್ತಿದ್ದ. ಕೊನೆಗೆ ಪತ್ನಿಯನ್ನು ಅಪಘಾತದ ನಾಟಕ ಮಾಡಿ ಕೊಲೆ ಮಾಡಲು ಸಂಚು ರೂಪಿಸಿದ್ದ.

ಅಪಘಾತ ಎಸಗಲು ₹1.50 ಲಕ್ಷ ನೀಡಿದ್ದ

ಆರೋಪಿ ಅರವಿಂದನಿಗೆ ಕೆಲ ವರ್ಷಗಳಿಂದ ಲಾರಿ ಚಾಲಕ ಉದಯ್‌ಕುಮಾರ್‌ ಪರಿಚಯವಿತ್ತು. ಹೀಗಾಗಿ ಉದಯ್‌ನನ್ನು ಸಂಪರ್ಕಿಸಿ ಪತ್ನಿ ಚೈತನ್ಯಾಳನ್ನು ಅಪಘಾತ ಮಾಡಿ ಕೊಲೆ ಮಾಡುವ ಸಂಚಿನ ಬಗ್ಗೆ ತಿಳಿಸಿದ್ದ. ಈ ಕೆಲಸ ಮಾಡಲು ಉದಯ್‌ಗೆ .1.50 ಲಕ್ಷವನ್ನೂ ನೀಡಿದ್ದ. ಅದರಂತೆ ಉದಯ್‌ .40 ಸಾವಿರ ಕೊಟ್ಟು ಹಳೇ ಟಾಟಾ ಸುಮೋ ಕಾರು ಖರೀದಿಸಿದ್ದ. ಬಳಿಕ ಆರೋಪಿಗಳಿಬ್ಬರೂ ಚೈತನ್ಯಾ ಓಡಾಡುವ ಸ್ಥಳಗಳ ಬಗ್ಗೆ ಕೆಲ ದಿನ ನಿಗಾವಹಿಸಿದ್ದರು. ಚೈತನ್ಯಾ ಸಂಚಾರದ ಮಾರ್ಗದಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮರಾಗಳು ಇವೆ ಎಂಬುದನ್ನೂ ಗಮನಿಸಿದ್ದರು.

ಅಪಘಾತ ಎಸಗಿ ಪರಾರಿ

ಅದರಂತೆ ಜ.1ರಂದು ಚೈತನ್ಯಾ ಭರತ ನಾಟ್ಯ ತರಗತಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬಾಗಲೂರಿನ ಕೆಐಡಿಬಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಬರುವಾಗ ಆರೋಪಿಗಳು ಟಾಟಾ ಸುಮೋದಲ್ಲಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಚೈತನ್ಯಾರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚೈತನ್ಯಾ ಪ್ರಾಣಾಪಾಯದಿಂದ ಪಾರಾದರು. ಈ ಸಂಬಂಧ ಏರ್‌ಪೋರ್ಚ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಚೈತನ್ಯ ಪೋಷಕರು ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಗಲೂರು ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Bengaluru: ಕೊಲೆ ಯತ್ನದ ಆರೋಪಿ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್, ಪೊಲೀಸರೇ ಶಾಕ್!

ಟಾಟಾ ಸುಮೋ ನಂ. ಪ್ಲೇಟ್‌ನಿಂದ ಸುಳಿವು

ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶಗಳ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಅಪಘಾತ ಎಸಗಿದ್ದ ಟಾಟಾ ಸುಮೋ ಸುಳಿವು ಸಿಕ್ಕಿದೆ. ಆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಕಾರಿನ ಮಾಲೀಕರನ್ನು ಸಂಪರ್ಕ ಮಾಡಿದಾಗ, ಆ ಕಾರು ಆರೋಪಿ ಉದಯ್‌ಗೆ ಮಾರಾಟವಾಗಿರುವ ವಿಚಾರ ಗೊತ್ತಾಗಿದೆ. ಬಳಿಕ ಉದಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಪಘಾತದ ನಾಟಕದ ಸಂಪೂರ್ಣ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಆರೋಪಿ ಅರವಿಂದನನ್ನು ಬಂಧಿಸಿದ್ದಾರೆ. ಆರೋಪಿಗಳು ಅಂದು ಅಪಘಾತ ಎಸಗಿದ ಬಳಿಕ ಕಾರನ್ನು ರಿಪೇರಿಗೆ ಗ್ಯಾರೇಜ್‌ವೊಂದರಲ್ಲಿ ಬಿಟ್ಟಿದ್ದರು. ಆ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest Videos
Follow Us:
Download App:
  • android
  • ios