ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 148ರಲ್ಲಿ ಸೋಮವಾರ ಬೆಳಗ್ಗೆ 7ಗಂಟೆ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.4 ): ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 148ರಲ್ಲಿ ಸೋಮವಾರ ಬೆಳಗ್ಗೆ 7ಗಂಟೆ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ತುಮಕೂರು ಮೂಲದ ಶಂಶುದೀನ್(40),ಮಲ್ಲಿಕಾ(37),ಖಲೀಲ್( 42) ಮತ್ತು ತಬ್ರೇಜ್(13) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತಕ್ಕೆ ನುಜ್ಜುಗುಜ್ಜಾಗಿರುವ ಕಾರು. ಚಿಲ್ಲಾಪಿಲ್ಲಿಯಾಗಿ ಬಿದ್ದಿರೋ ಮೃತ‌ ದೇಹಗಳು.

ವಿಜಯಪುರ: ರಸ್ತೆ ಅಪಘಾತ, ನಾಲ್ಕು ವರ್ಷದ ಹೆಣ್ಣು ಮಗು ಸಾವು

ದಾವಣಗೆರೆಯಿಂದ ತುಮಕೂರಿಗೆ ತೆರಳುತ್ತಿದ್ದ ಕಾರಿನಲ್ಲಿ 7 ಜನ ಪ್ರಯಾಣ ಬೆಳೆಸಿದ್ರು. ಈ ವೇಳೆ ಬ್ರೇಕ್ ಡೌನ್ ಆಗಿ ರಸ್ತೆ ಬದಿ‌ ನಿಂತಿದ್ದ ಲಾರಿಗೆ‌ ಹಿಂಬದಿಯಿಂದ ಈ ಕಾರು‌ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಲ್ಲಿದ್ದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದಲ್ಲಿ ಹಾದು ಹೋಗಿರುವ ರಿಂಗ್‌ ರೋಡ್‌ನಿಂದಾಗಿ ನಗರದೊಳಗೆ‌ ಹಾದು ಹೋಗುವ ವಾಹನಗಳ ಸಂಖ್ಯೆ‌ ವಿರಳವಾಗಿದೆ. ಆದ್ರೆ ರಿಂಗ್ ರೋಡಲ್ಲಿ ಅಪಘಾತಗಳ ಸಂಖ್ಯೆ‌ ಮಾತ್ರ ಹೆಚ್ಚಾಗಿದೆ. ಅಲ್ಲದೆ ಕಳೆದ‌ 15 ದಿನಗಳ‌‌ ಹಿಂದೆಯಷ್ಡೇ ನಡೆದ ಅಪಘಾತದ‌ ಸ್ಥಳದಲ್ಲೇ ಇಂದು ಅಪಘಾತವಾಗಿ ನಾಲ್ವರು ಸಾವನ್ನಪ್ಪಿದ್ದಾರೆ.‌ ಸ್ಥಳೀಯರು ಆತಂಕವ್ಯಕ್ತಪಡಿಸಿದ್ದಾರೆ. ಆದ್ರೆ ಗಮನ‌ಹರಿಸಬೇಕಾದ ಪೊಲೀಸರು, ಆರ್ ಟಿಓ ಅಧಿಕಾರಿಗಳು ಮತ್ತು ಹೈವೆ ಹೆದ್ದಾರಿ‌‌ ಪ್ರಾಧಿಕಾರದ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ.‌ ಈವರೆಗೆ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿಲ್ಲ. ಆಕ್ಸಿಡೆಂಟ್ ತಡೆಗೆ ಅಗತ್ಯ ಕ್ರಮ‌ಕೈಗೊಂಡಿಲ್ಲವೆಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 14 ಅಪಘಾತ: ನಾಲ್ವರ ಸಾವು, 15 ಮಂದಿಗೆ ಗಾಯ