ತಾಲೂಕಿನ ಕೌಠಾ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಾಗಿದ್ದ ಯುವತಿ ಮತ್ತು ಆಕೆಯ ಸಹೋದರಿ ಸಾವನ್ನಪ್ಪಿರುವ ಹೃದಯವಿದ್ರಾಹಕ ಘಟನೆ ನಡೆದಿದೆ.

ಔರಾದ್‌: (ಏ.29) : ತಾಲೂಕಿನ ಕೌಠಾ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಾಗಿದ್ದ ಯುವತಿ ಮತ್ತು ಆಕೆಯ ಸಹೋದರಿ ಸಾವನ್ನಪ್ಪಿರುವ ಹೃದಯವಿದ್ರಾಹಕ ಘಟನೆ ನಡೆದಿದೆ.

ತಂದೆಯ ಜೊತೆಗೆ ಬೈಕ್‌ ಮೇಲೆ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋಗುವಾಗ ಈ ದುರ್ಘಟನೆ ಆಗಿದೆ. ಭಾಲ್ಕಿ ತಾಲೂಕಿನ ನಿಟ್ಟೂರ (ಬಿ) ಗ್ರಾಮದ ಶ್ರದ್ಧಾ ಜುಲ್ಫೆ (22) ಮತ್ತು ಸಂಸ್ಕೃತಿ ಜುಲ್ಫೆ (19) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಂದೆ ದಿಲೀಪ ಜುಲ್ಫೆ ತೀವ್ರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಯುಸಿ ಫೇಲ್ ಆಗಿದ್ದಕ್ಕೆ ಗೆಳತಿ ಸಾವು: ಸಾವಿನ ಸುದ್ದಿ ಕೇಳಿ ಇವಳೂ ಆತ್ಮಹತ್ಯೆಗೆ ಯತ್ನ!

ಮೇ 9ರಂದು ಶ್ರದ್ಧಾ ಜುಲ್ಫೆ ಅವರ ಮದುವೆ ನಿಶ್ಚಯವಾಗಿದ್ದು, ಬೀದರ್‌ನಿಂದ ತಂದೆ ದಿಲೀಪ ತಮ್ಮಿಬ್ಬರು ಪುತ್ರಿಯರೊಂದಿಗೆ ಔರಾದ್‌ ತಾಲೂಕಿನ ಎಕಂಬಾ ಗ್ರಾಮಕ್ಕೆ ಬೈಕ್‌ ಮೇಲೆ ತೆರಳುತ್ತಿದ್ದರು. ಕೌಠಾ ಸಮೀಪ ಜವರಾಯನಂತೆ ಎದುರಿಗೆ ಬಂದ ಬೊಲೇರೋ ಪಿಕ…ಅಪ್‌ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ರಕ್ತ ಸ್ರಾವದಿಂದಾಗಿ ಶ್ರದ್ಧಾ ಮತ್ತು ಸಂಸ್ಕೃತಿ ಕೊನೆಯುಸಿರೆಳೆದಿದ್ದಾರೆ. ಸಂತಪೂರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದು ವಾರದಲ್ಲಿ ಮದುವೆ ಸಂಭ್ರಮ ನಡೆಯಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಬಸ್‌ ಡಿಕ್ಕಿಯಾಗಿ ಪಾದಚಾರಿ ಸಾವು: ಚಾಲಕನಿಗೆ ಸಜೆ ತೀರ್ಪು

ಮಂಗಳೂರು: ಬಸ್‌ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಪ್ರಕರಣದಲ್ಲಿ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಬಸ್‌ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಸ್‌ ಚಾಲಕ ಕೃಷ್ಣಾಪುರ ಕಾಟಿಪಳ್ಳ 7ನೇ ಬ್ಲಾಕ್‌ನ ನಿವಾಸಿ ಉಸ್ಮಾನ್‌(37) ಶಿಕ್ಷೆಗೊಳಗಾದ ಆರೋಪಿ. ಘಟನೆಯಲ್ಲಿ ಕೃಷ್ಣಾಪುರದ ಸುಂದರ್‌ ಸಾಲಿಯಾನ್‌(70) ಮೃತಪಟ್ಟಿದ್ದರು.

ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ, ಶೀಘ್ರದಲ್ಲೇ ದ್ವಿಚಕ್ರ, ಆಟೋ ರಿಕ್ಷಾ ಸಂಚಾರ ನಿಷೇಧ!

2020ರ ಜ.16ರಂದು ಬೆಳಗ್ಗೆ 10.20ಕ್ಕೆ ಸುಂದರ್‌ ಸಾಲಿಯಾನ್‌ ಅವರು ಬೈಕಂಪಾಡಿ ಜಂಕ್ಷನ್‌ ಬಳಿ ಬಸ್‌ ನಿಲ್ದಾಣದ ಎದುರು ಬಸ್‌ಗಾಗಿ ಕಾಯುತ್ತಿದ್ದರು. ಆಗ ಜೋಕಟ್ಟೆಕ್ರಾಸ್‌ ಕಡೆಯಿಂದ ಉಸ್ಮಾನ್‌ ಎಂಬಾತ ಬಸ್‌ನ್ನು ತೀರಾ ಎಡಬದಿಗೆ ಚಲಾಯಿಸಿಕೊಂಡ ಬಂದ ಸಿಟಿಬಸ್‌ ಸುಂದರ್‌ ಅವರಿಗೆ ಢಿಕ್ಕಿ ಹೊಡೆದು ಬಸ್‌ನ ಎದುರಿನ ಎಡಬದಿಯ ಚಕ್ರ ಅವರ ಎಡಬದಿಯ ಕಾಲು ಮತ್ತು ಸೊಂಟದ ಮೇಲೆ ಹಾದು ಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಸುಂದರ್‌ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.