ಗೌರಿ-ಗಣೇಶ ಹಬ್ಬದ ದಿನವೇ ಭೀಕರ ಅಪಘಾತ; ಮೂವರು ದುರ್ಮರಣ

ಗೌರಿ ಗಣೇಶ ಹಬ್ಬದ ದಿನವೇ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನೆಲಮಂಗಲದ ಅಂಚೆಪಾಳ್ಯದ ಬಳಿ ನಡೆದಿದೆ. ವೇಗದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲೀಗ ಶೋಕ ಮಡುಗಟ್ಟಿದೆ.

Terrible acciddent in anchepalya at nelamangala tumakuru rav

ನೆಲಮಂಗಲ (ಸೆ.18) ಗೌರಿ ಗಣೇಶ ಹಬ್ಬದ ದಿನವೇ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನೆಲಮಂಗಲದ ಅಂಚೆಪಾಳ್ಯದ ಬಳಿ ನಡೆದಿದೆ.

ಇಂದು ಮುಂಜಾನೆ ಸಂಭವಿಸಿರುವ ಅಪಘಾತ. ಅತಿ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಮೃತರಾಗಿದ್ದಾರೆ. ಇಬ್ಬರ ಸ್ಥಿತಿ ಗಂಭಿರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಕ್ರಮ ಗೋ ಸಾಗಾಟ ವೇಳೆ ವಾಹನ ಅಪಘಾತ: ಕೈಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಬಿಗಿದಿದ್ದ ಕರುಗಳ ರಕ್ಷಣೆ

ಅಪರಿಚಿತ ವಾಹನ ಡಿಕ್ಕಿ; ವಾಹನ ಸವಾರ ಗಂಭೀರ ಗಾಯ

ಬೆಂಗಳೂರು: ಅಪರಿಚಿತ ಲಾರಿ ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಂಬೇಡ್ಕ್‌ರ್‌ ಗುಡ್ಡೆ ಪಿಜಿ ನಿವಾಸಿಗಳಾದ ವಾಸೀಂ ಅಕ್ರಂ (26) ಮೃತ ಹಿಂಬದಿ ಸವಾರ. ಸೈಯದ್‌ ಶೇಖ್‌ ಮಂಡಲ್(21) ಗಂಭೀರವಾಗಿ ಗಾಯಗೊಂಡಿ ರುವ ಸವಾರ. ಇಬ್ಬರು ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಗುಂಜೂರು ಕಡೆಯಿಂದ ವರ್ತೂರು ಕಡೆಗೆ ಬರುವಾಗ ಈ ಅಪಘಾತ ಸಂಭವಿಸಿದೆ.

ವಾಸೀಂ ಅಕ್ರಂ ಮತ್ತು ಸೈಯದ್‌ ಶೇಖ್‌ ಮಂಡಲ್‌ ಅಸ್ಸಾಂ ಮೂಲದವರು. ವಾಸೀಂ ಅಕ್ರಂ ಲ್ಯಾಬ್‌ ಟೆಕ್ನಿಶಿಯನ್‌ ಕೋರ್ಸ್‌ ಮುಗಿಸಿ ಕೆಲಸಕ್ಕೆ ಹುಡುಕಾಡು ತ್ತಿದ್ದ. ಈತನ ಸ್ನೇಹಿತ ಸೈಯದ್‌ ಶೇಖ್ ಬಿ.ಫಾರ್ಮಾ ಕೋರ್ಸ್‌ ಗೆ ವ್ಯಾಸಂಗ ಮಾಡಲು ಮೂರು ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ. ಇಬ್ಬರು ಪೆಯಿಂಗ್‌ ಗೆಸ್ಟ್‌ನಲ್ಲಿ ಉಳಿದುಕೊಂಡಿದ್ದರು.

ಶನಿವಾರ ರಾತ್ರಿ ಗುಂಜೂರಿನಲ್ಲಿ ಸ್ನೇಹಿತನನ್ನು ಭೇಟಿಯಾಗಿ ಪಿಜಿಗೆ ವಾಪಾಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಅಪರಿಚಿತ ಲಾರಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಸವಾರ ವಾಸೀಂ ಅಕ್ರಂ ಮೇಲೆ ಲಾರಿ ಚಕ್ರ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸವಾರ ಸೈಯದ್‌ ಶೇಖ್‌ ಕಾಲಿಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 

8 ಪ್ರಯಾಣಿಕರ ಹೊತ್ತು ಮುಂಬೈನಲ್ಲಿ ಇಳಿದ ಪ್ರೈವೇಟ್ ಜೆಟ್ ಅಪಘಾತ!

ಅಪಘಾತದ ಬಳಿಕ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಸಂಬಂಧ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios