Asianet Suvarna News Asianet Suvarna News

ಹರ್ಯಾಣದಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ: 14 ವರ್ಷದ ಬಾಲಾಪರಾಧಿ ಬಂಧನ

ಹರಿಯಾಣದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 3 ವರ್ಷದ ಬಾಲಕಿ ಮೇಲೆ ಹದಿಹರೆಯದ ಯುವಕ ಅತ್ಯಾಚಾರ ಮಾಡಿದ್ದಾನೆ ಎಂದು ವರದಿಯಾಗಿದೆ. 

tennage boy arrested for abductin and raping 3 year old girl in haryana ash
Author
Bangalore, First Published Aug 17, 2022, 3:06 PM IST

ದೇಶ ಇತ್ತೀಚೆಗಷ್ಟೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (Azadi Ka Amrit Mahotsav) ಆಚರಿಸಿದೆ. ಆದರೂ, ದಿನೇ ದಿನೇ ದೇಶದ ಹಲವೆಡೆ ನಾನಾ ಅತ್ಯಾಚಾರ (Rape) ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಇದಕ್ಕೆ ತಡೆ ಎನ್ನುವುದೇ ಇಲ್ಲದಂತಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗ ಉತ್ತರ ಭಾರತದ ಹರಿಯಾಣದಲ್ಲಿ ಮತ್ತೊದು ಅತ್ಯಾಚಾರ ಪ್ರಕರಣ ವರದಿಯಾಗಿದ್ದು, ಅದು 3 ವರ್ಷದ ಬಾಲಕಿಯ ಮೇಲೆ ಎನ್ನುವುದು ಮಾತ್ರ ಶೋಚನೀಯವೇ ಸರಿ. ಹೌದು, ಹರಿಯಾಣದ ನುಹ್‌ (Nuh) ಪ್ರದೇಶದಲ್ಲಿ 3 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಹದಿಹರೆಯದ ಬಾಲಕನೇ ಈ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಅಪ್ರಾಪ್ತ ಬಾಲಕಿಯ ತಂದೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮಂಗಳವಾರ ಬೆಳಗ್ಗೆ ತನ್ನ ಪತ್ನಿ ಹೊಲಕ್ಕೆ (Field) ಹೋಗುತ್ತಿದ್ದಾಗ ಅವರ ಅಪ್ರಾಪ್ತ ಮಗಳು ಹೆಂಡತಿಯನ್ನು ಹಿಂಬಾಲಿಸಿದಳು. ದೂರದಲ್ಲಿ ಬಾಲಕಿ ತನ್ನ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಅರಿಯದ ತನ್ನ ಹೆಂಡತಿ, 14 ವರ್ಷದ ಬಾಲಕ ತನ್ನ ಮಗಳನ್ನು ಅಪಹರಿಸುತ್ತಿರುವುದನ್ನು ಸಹ ಗಮನಿಸಿರಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ ನಾನು ಹೊಲಕ್ಕೆ ಹೋಗುತ್ತಿದ್ದಾಗ ನನ್ನ ಮಗಳು ಅಳುವುದು ನನಗೆ ಕೇಳಿಸಿತು. ಆ ವೇಳೆ ಅವಳು ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದಳು ಮತ್ತು ನಾನು ಅವಳನ್ನು ಆಸ್ಪತ್ರೆಗೆ ಸೇರಿಸಿದೆ ಎಂದು ಅತ್ಯಾಚಾರಕ್ಕೊಳಗಾದ ತಂದೆ ಹೇಳಿದ್ದಾರೆ ಎಂದು ಹರ್ಯಾಣದ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ, ಅತ್ಯಾಚಾರ ಮಾಡಿದ ಬಾಲಕ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದೂ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 

ಇದನ್ನು ಓದಿ: ಬೆಂಗ್ಳೂರಲ್ಲಿ ಪೈಶಾಚಿಕ ಕೃತ್ಯ: ಭೇಟಿಗೆಂದು ಕರೆಸಿ ಯುವತಿಯ ಮೇಲೆ ರೇಪ್‌ ಮಾಡಿ ಕಾಮುಕ ಪರಾರಿ

ಈ ಸಂಬಂಧ ಮಾಹಿತಿ ನೀಡಿದ ಹರ್ಯಾಣದ ನುಹ್‌ ಪ್ರದೇಶದ ಹಿರಿಯ ಪೊಲೀಸ್ ಅಧೀಕ್ಷಕ (Senior Superintendent of Police)   ವರುಣ್ ಸಿಂಗ್ಲಾ ಅವರು, “ನಾವು ಈ ವಿಷಯದ ಬಗ್ಗೆ ವಿಶೇಷ ತಂಡವನ್ನು ರಚಿಸಿದ್ದೇವೆ ಮತ್ತು ಘಟನೆ ನಡೆದ 5 ಗಂಟೆಗಳಲ್ಲೇ ಆರೋಪಿಯಾಗಿರುವ ಹದಿಹರೆಯದ ಹುಡುಗನನ್ನು ಬಂಧಿಸಿದ್ದೇವೆ (Arrested). ಇನ್ನು, ಸಂತ್ರಸ್ಥ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ’’ ಎಂದು ಹೇಳಿದ್ದಾರೆ. ಅಲ್ಲದೆ, ಅತ್ಯಾಚಾರ ಪ್ರಕರಣ ಸಂಬಂಧ ಎಫ್‌ಐಆರ್ (First Information Report) ದಾಖಲಿಸಲಾಗಿದ್ದು, 14 ವರ್ಷದ ಬಾಲಕನನ್ನು ಬುಧವಾರ ಬಾಲಾಪರಾಧ ನ್ಯಾಯ ಮಂಡಳಿಯ (Juvenile Justice Board) ಮುಂದೆ ಹಾಜರುಪಡಿಸಲಾಗುವುದು ಎಂದೂ ಹರ್ಯಾಣದ ನುಹ್‌ ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ: 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

Follow Us:
Download App:
  • android
  • ios