ಅತ್ಯಾಚಾರವೆಸಗಿ ತಲೆಮರೆಸಿಕೊಂಡ ಆರೋಪಿ ಪತ್ತೆಗೆ ಜಾಲ ಬೀಸಿದ ಪೊಲೀಸರು 

ಬೆಂಗಳೂರು(ಆ.12): ಭೇಟಿಗೆಂದು ಕರೆಸಿ ದೂರದ ಸಂಬಂಧಿ ಯುವತಿ ಮೇಲೆ ಅತ್ಯಾಚರವೆಸಗಿದ ಘಟನೆ ನಗರದಲ್ಲಿ ನಡೆದಿದೆ. ರಮೇಶ್ ಎಂಬಾತನೇ ಯುವತಿ ಮೇಲೆ ಅತ್ಯಾಚರವೆಸಗಿದ ಆರೋಪಿಯಾಗಿದ್ದಾನೆ. 

ಆರೋಪಿ ರಮೇಶ್ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದನಂತೆ, ಆ. 6 ರಂದು ಯುವತಿಯನ್ನ ಭೇಟಿ ಮಾಡಬೇಕು ಎಂದು ಬೆಂಗಳೂರಿನ ಹೋಟೆಲ್‌ಗೆ ಕರೆಸಿಕೊಂಡಿದ್ದ. ದೂರದ ಸಂಬಂಧಿ ಅಪರೂಪಕ್ಕೆ ನಗರಕ್ಕೆ ಬಂದಿದ್ದಾನೆಂದು ಯುವತಿ ಕೂಡ ರಮೇಶನ ಮಾತು ನಂಬಿ ಹೋಟೆಲ್‌ಗೆ ತೆರೆಳಿದ್ದಳು. ಇದೇ ಸಮಯವನ್ನ ದುರುಪಯೋಗ ಪಡಿಸಿಕೊಂಡ ಆರೋಪಿ ರಮೇಶ ಯುವತಿ ಮೇಲೆ ರೇಪ್‌ ಮಾಡಿದ್ದಾನೆ. 

ಪತ್ನಿಯೊಂದಿಗೆ ಜಗಳ: 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

ಈ ಸಂಬಂಧ ಯುವತಿ ಆರೋಪಿ ರಮೇಶನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಹೋಟೆಲ್‌ನಲ್ಲಿ ನನ್ನ ಮೇಲೆ ರಮೇಶ ಅತ್ಯಾಚಾರವೆಸಗಿದ್ದಾನೆ ಅಂತ ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ. 

ಘಟನೆಯಿಂದ ಶಾಕ್‌ನಲ್ಲಿದ್ದ ಅತ್ಯಾಚಾರಕ್ಕೊಳಗಾದ ಯುವತಿ ಘಟನೆ ನಡೆದ ಮೂರು ದಿನಗಳ ಬಳಿಕ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಯುವತಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿ ರಮೇಶ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.