ಪಾಠದ ವೇಳೆ ಆಟವಾಡಿದ ಬಾಲಕನಿಗೆ ಶಿಕ್ಷೆ, ಬಸ್ಕಿ ಹೊಡೆಯುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು!

ತರಗತಿಯಲ್ಲಿ ಕುಳಿತುಕೊಳ್ಳುವ ಬದಲು ಆಟವಾಡಿದ ಬಾಲಕನಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿತ್ತು. ಆದರೆ ಬಸ್ಕಿ ಹೊಡೆಯುತಲ್ಲೇ ಬಾಲಕ ಕುಸಿದು ಬಿದ್ದು ಮೃತಪಟ್ಟ ದುರಂತ ಘಟನೆ ನಡೆದಿದೆ.

Ten year old Student collapse and Dies after sit ups punishment in Odisha School ckm

ಭುವನೇಶ್ವರ(ನ.22) ತರಗತಿಗೆ ಹಾಜರಾಗುವು ಬದಲು ನಾಲ್ಕನೇ ತರಗತಿಯ ವಿದ್ಯಾರ್ಥಿ ತನ್ನ ಗೆಳೆಯರ ಜೊತೆ ಮೈದಾನದಲ್ಲಿ ಆಟವಾಡಿದ್ದಾರೆ. ಇದನ್ನು ಗಮನಿಸಿದ ಟೀಚರ್, ಮೂವರನ್ನು ಕರೆಸಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಆದರೆ ಬಸ್ಕಿ ಹೊಡೆಯುತ್ತಲೇ 10 ವರ್ಷದ ಬಾಲಕ ಕುಸಿದು ಬಿದ್ದು ಮೃತಪಟ್ಟ ಘಟನೆ ಒಡಿಶಾದ ಜಾಜ್‌ಪುರದಲ್ಲಿ ನಡೆದಿದೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಟೀಚರ್ ಕೂಡ ಆಘಾತಕ್ಕೊಳಗಾಗಿದ್ದಾರೆ.

ಒರಾಲಿಯಲ್ಲಿರುವ ಸೂರ್ಯನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ನಾಲ್ಕನೇ ತರಗತಿ ಓದುತ್ತಿದ್ದ ರುದ್ರ ನಾರಾಯಣ ಸೇಥಿ ಮೃತಪಟ್ಟ ಬಾಲಕ. ಮಂಗಳವಾರ(ನ.21) ರುದ್ರ ನಾರಾಯಣ ತನ್ನ ಗೆಳೆಯರ ಜೊತೆ ಆಟವಾಡಲು ತೆರಳಿದ್ದಾನೆ. ತರಗತಿಯ ಮತ್ತಿಬ್ಬರು ಬಾಲಕರ ಜೊತೆ ಆಟವಾಡಿದ್ದಾನೆ. ಆದರೆ 3 ಗಂಟೆ ವೇಳೆಗೆ ರುದ್ರ ನಾರಾಯಣ ತರಗತಿಗೆ ಹಾಜರಾಗಬೇಕಿತ್ತು. ಆದರೆ ರುದ್ರ ನಾರಾಯಣ ಹಾಗೂ ಇತರ ಇಬ್ಬರು ಬಾಲಕರು ತರಗತಿಗೆ ಹಾಜರಾಗಿಲ್ಲ.

 

ಶಾಲಾ ಪಠ್ಯದಲ್ಲಿ ರಾಮಾಯಣ,ಮಹಾಭಾರತ ಸೇರಿಸಲು NCERT ಸಮಿತಿ ಶಿಫಾರಸು!

ಮೈದಾನದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳನ್ನು ಗಮನಿಸಿದ ಟೀಟರ್, ಮೂವರನ್ನೂ ಕರೆಸಿ ತರಗತಿಗೆ ಚಕ್ಕರ್ ಹೊಡೆದು ಆಟವಾಡಿದ ಕಾರಣಕ್ಕೆ ಶಿಕ್ಷೆ ನೀಡಿದ್ದಾರೆ. ಮೂವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿದೆ. ಐದಾರು ಬಸ್ಕಿ ಹೊಡೆಯುತ್ತಿದ್ದಂತೆ ರುದ್ರ ನಾರಾಯಣ ಕುಸಿದು ಬಿದ್ದಿದ್ದಾನೆ. ಇತರ ಬಾಲಕರು ಚೀರಾಡಿದ್ದಾರೆ. ಓಡೋದಿ ಬಂದ ಟೀಚರ್, ತರಗತಿ ಕೊಠಡಿಗೆ ಎತ್ತಿಕೊಂಡು ಹೋಗಿದ್ದಾರೆ.ಬಿಸಿನ ತಾಪದಿಂದ ಪ್ರಜ್ಞೆ ತಪ್ಪಿರುವ ಸಾಧ್ಯತೆ ಇದೆ ಎಂದು  ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪರಿಸ್ಥಿತಿ ಗಂಭೀರತೆಯನ್ನು ಅರಿತ ಟೀಚರ್, ಇತರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಶಾಲಾ ಪಕ್ಕದಲ್ಲೇ ಇರುವ ಬಾಲಕನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಇತ್ತ ಶಾಲಾ ವಾಹನದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ತಕ್ಷಣವೇ ಉನ್ನತ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆ ಬಾಲಕನ ದಾಖಲಿಸಲಾಗಿದೆ. 

ರಾಜ್ಯದ 4 ಲಕ್ಷ ವಿದ್ಯಾರ್ಥಿಗಳಿಗೆ ಶಾಕ್‌: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದ ಸರ್ಕಾರ

ಕುಸಿದು ಬೀಳುತ್ತಿದ್ದಂತೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಬಾಲಕನ ಪೋಷಕರು ಪುತ್ರನ ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಶಿಕ್ಷೆ ವಿಧಿಸಿದ ಟೀಚರ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಾದರೆ ತನಿಖೆ ನಡೆಸುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios