3.70 ಲಕ್ಷ ಮೌಲ್ಯದ ವಿಗ್ರಹ ಸೇರಿ ಸಾಮಗ್ರಿಗಳ ಕಳವು| ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮುಂಡರಗಿ ಶಿವರಾಯ ದೇವಸ್ಥಾನದಲ್ಲಿ ನಡೆದ ಕಳ್ಳತನ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು|  ಪ್ರಕರಣ ದಾಖಲಿಸಿಕೊಂಡಿರುವ ಕಳ್ಳರ ಪತ್ತೆಗೆ ಬಲೆಬೀಸಿದ ಪೊಲೀಸರು| 

ದೇವದುರ್ಗ(ಸೆ.28): ತಾಲೂಕಿನ ಮುಂಡರಗಿ ಶಿವರಾಯ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು 3.70 ಲಕ್ಷ ಮೌಲ್ಯದ ದೇವರ ವಿಗ್ರಹ ಸೇರಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ರಾತ್ರಿ ದೇವಸ್ಥಾನಕ್ಕೆ ಪ್ರವೇಶಿಸಿದ ಕಳ್ಳರು ಗುಡಿಯಲ್ಲಿದ್ದ 6 ಸಾವಿರ ಬೆಳೆಬಾಳುವ 12 ತೊಲೆ ಬೆಳ್ಳಿಯ ಶಿವರಾಯ ತಾತನ ಮೂರ್ತಿ, 3.5000 ಮೌಲ್ಯದ 9 ಕೆಜಿ ಬೆಳ್ಳಿಯ ಗೋಪುರ ಆಕಾರದ ಚಟ್ಟ, ಏಳು ಸಾವಿರ ಬೆಲೆಯ 12 ತೊಲೆಯ ಚಪ್ಪಲಿ ಕೊಡಲಿ, 5 ಸಾವಿರ ಮೌಲ್ಯದ 10 ತೊಲೆ ಬೆಳ್ಳಿಯ ಎರಡು ಲಿಂಗದ ಕಾಯಿ, 2500 ಬೆಲೆಯ ಐದು ತೊಲೆಯ ಶಿವನ ಬೆಳ್ಳಿ ಮೂರ್ತಿ ಸೇರಿ ಒಟ್ಟು 3.70 ಲಕ್ಷ ಕಳ್ಳರು ಕದ್ದು ಪರಾರಿಯಾಗಿದ್ದಾರೆ. 

ಮಂಡ್ಯ : 9 ತಿಂಗಳಲ್ಲಿ 23 ದೇಗುಲದಲ್ಲಿ ಕಳ್ಳತನ

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆಬೀಸಿದ್ದಾರೆ.