ಹೈದ್ರಾಬಾದ್ (ಸೆ.24)  ಎಸಿಬಿ ಬಲೆಗೆ ಬಿದ್ದವ ಅಂತಿಂಥ ಕುಳ ಅಲ್ಲ.  ತೆಲಂಗಾಣದ ಹೆಚ್ಚುವರಿ ಪೊಲೀಸ್ ಆಯುಕ್ತ ಎಲ್ಮಕುರಿ ನರಸಿಂಹ ರೆಡ್ಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ಗಳಿಸಿದ್ದ ಸಂತ್ತು ಕಂಡು ಶಾಕ್ ಆಗಿದ್ದಾರೆ. ಅಧಿಕಾರಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.

ರಾಚಕೊಂಡ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಮಲ್ಕಜ್ಗಿರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ನರಸಿಂಹ ರೆಡ್ಡಿ ಅಕ್ರಮ ಆಸ್ತಿ ಮೌಲ್ಯವು 70 ಕೋಟಿ ರೂಪಾಯಿಗೂ ಅಧಿಕ!

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಸುಳಿವು ಹಿಡಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಕಕಾಲಕ್ಕೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ 25 ಕಡೆಗಳಲ್ಲಿ ದಾಳಿ ನಡೆಸಿದರು. ಈ ವೇಳೆ ವಶಕ್ಕೆ ಪಡೆದ ಆಸ್ತಿ ಮೌಲ್ಯವು 7.5 ಕೋಟಿ ರೂಪಾಯಿ ಎಂದು ಕಂಡು ಬಂದರೂ, ಅದರ ಒಟ್ಟು ಆಸ್ತಿ ಮೌಲ್ಯವು 70 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಎಲ್ಲಿಗೆ ಬಂತು ಕಾಲ; ಕೊರೋನಾ ಸೋಂಕಿತರ ಶವ ನೋಡಲು ಲಂಚ

ಹೈದ್ರಾಬಾದ್, ವಾರಂಗಲ್, ಜಂಗೋನ್, ನಲಗೊಂದಾ, ಕರಿಮ್ ನಗರ್, ಜಿಲ್ಲೆ ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಸೇರಿದಂತೆ 25 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದಾಳಿ  ಮಾಡಿತ್ತು. ಎಸಿಬಿ ಅಧಿಕಾರಿಗಳ ದಾಳಿ ವೇಳೆ ಅನಂತಪುರದಲ್ಲಿ 55 ಎಕರೆ ಕೃಷಿ ಭೂಮಿ, ನಾಲ್ಕು ಪ್ಲಾಟ್, ಮಾಧಾಪುರದಲ್ಲಿ 2 ಪ್ಲಾಟ್, ಹಫೀಜ್ ಪೇಟ್ ನಲ್ಲಿ 3 ಅಂತಸ್ತಿನ ಒಂದು ವಾಣಿಜ್ಯ ಮಳಿಗೆ, ಎರಡು ನಿವಾಸ, ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂಪಾಯಿ ಮತ್ತು ರಿಯಲ್ ಎಸ್ಟೇಟ್ ನಲ್ಲೂ ಹಣ ಹೂಡಿಕೆ ಎಲ್ಲವೂ ಪತ್ತೆಯಾಗಿದೆ.

1991 ರಲ್ಲಿ ಪೊಲೀಸ್ ಇಲಾಖೆಯನ್ನು ಇನ್ಸಪೆಕ್ಟರ್ ಆಗಿ ರೆಡ್ಡಿ ಸೇರಿದ್ದರು.   ಅಲ್ಲಿಂದ ಒಂದೊಂದೆ ಹುದ್ದೆ ಬಡ್ತಿ ಪಡೆದುಕೊಂಡಿದ್ದರು. ಅಪಾರ ಆಸ್ತಿ ಪತ್ತೆಯಾಗಿದ್ದು ಎಸಿಪಿ ಪ್ರಕರಣ ದಾಖಲಿಸಿಕೊಂಡಿದೆ.