Asianet Suvarna News Asianet Suvarna News

Bengaluru: ಎಲೆಕ್ಟ್ರಾನಿಕ್‌ ಸಿಟಿ ಬ್ರಿಡ್ಜ್‌ ಮೇಲಿಂದ ಹಾರಿದ ಟೆಕ್‌ ಮಹಿಂದ್ರಾ ಉದ್ಯೋಗಿಯ ಪತ್ನಿ

ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಚಿಕ್ಕತೋಗೂರಿನ ಮೇಲ್ಸೇತುವೆಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಟೆಕ್‌ ಮಹಿಂದ್ರಾ ಕಂಪನಿ ಉದ್ಯೀಗಿಯ ಹೆಂಡ್ತಿ.

Tech Mahindra IT company employee wife jumped from Electronic City Bridge sat
Author
First Published Dec 27, 2023, 7:33 PM IST

ಬೆಂಗಳೂರು (ಡಿ.27): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಳಗ್ಗೆ ವಾಕಿಂಗ್ ಮಾಡಲೆಂದು ಬಂದು ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಚಿಕ್ಕತೋಗೂರಿನ ನೈಸ್‌ ರಸ್ತೆಯ ಮೇಲ್ಸೇತುವೆಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿಯ ಹೆಂಡ್ತಿ. ಜಾರ್ಖಂಡ್‌ ಮೂಲದ ಮಹಿಳೆಯಾಗಿದ್ದು, ಮುಖಕ್ಕೆ ಗಂಭೀರ ಗಾಯವಾಗಿದ್ದು, ಕಾಲು ಹಾಗೂ ದೇಹದ ಇತರೆ ಭಾಗಗಳ ಮೂಳೆಗಳು ಮರಿದಿವೆ.

ಎಲೆಕ್ಟ್ರಾನಿಕ್ಸ್ ಸಿಟಿಗೆ ಸಮೀಪದ  ಚಿಕ್ಕತೋಗೂರು ಬ್ರಿಡ್ಜ್ ಮೇಲಿಂದ ಹಾರಿ ಆತ್ಮಹತ್ಯೆ ಯತ್ನಿಸಿದ್ದಾರೆ. ನೈಸ್ ರಸ್ತೆಯ ಬ್ರಿಡ್ಜ್ ಮೇಲಿಂದ ಮಹಿಳೆ ಹಾರಿದ್ದಾಳೆ. ಬೆಳ್ಳಗ್ಗೆ ವಾಕಿಂಗ್‌ಗೆ ಹೋಗುತ್ತೇನೆಂದು ಮನೆಯಿಂದ ಹೊರಟಿದ್ದ ಮಹಿಳೆ ಬ್ರಿಡ್ಜ್‌ ಮೇಲಿಂದ ಬಿದ್ದಿದ್ದಾರೆ ಎಂದು ಹೇಳಾಗುತ್ತಿದೆ. ಮೇಲ್ಸೇತುವೆಯಿಂದ ಬಿದ್ದ ಮಹಿಳೆಯನ್ನು ಜಾರ್ಖಂಡ್‌ ಮೂಲದ ಯಾಮಿಕ ಮಿಶ್ರ (28) ಎಂದು ಗುರುತಿಸಲಾಗಿದೆ. ಈಕೆಯ ಪತಿ ಟೆಕ್ ಮಹೇಂದ್ರ ಕಂಪನಿಯ  ಉದ್ಯೋಗಿ ಆಗಿದ್ದಾರೆ. ಇನ್ನು ಸೇತುವೆಯಿಂದ ಬಿದ್ದ ಹಿನ್ನೆಲೆಯಲ್ಲಿ ಮಹಿಳೆಯ ಮುಖಕ್ಕೆ ಗಂಬೀರ ಗಾಯವಾಗಿದ್ದು, ಮೂಳೆಗಳು ಮುರಿದಿವೆ.

200 ಸಂಚಿಕೆ ಪೂರೈಸಿದ ಭೂಮಿಗೆ ಬಂದ ಭಗವಂತ: ಹೊರಗೆ ಹಾಕೊಳ್ಳೋ ರಾಜಾ ಚೆಡ್ಡಿ ಎಲ್ಲಿ ಸಿಗುತ್ತೆಂದು ಕೇಳಿದ ಅಭಿಮಾನಿ!

ಇನ್ನು ಘಟನೆಯ ನಂತರ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸೇತುವೆ ಮೇಲಿಂದ ಬಿದ್ದಿದ್ದರಿಂದಾಗಿ ಗಂಭೀರ ಪ್ರಮಾಣದ ಗಾಯಗಳಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮಹಿಳೆಯಿಂದ ಹೇಳಿಕೆ ಪಡೆಯಲು ಸಧ್ಯವಾಗಿಲ್ಲ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಕೆ ಕಾಣಿಸಿಕೊಂಡ ನಂತರ ಹೇಳಿಕೆ ಪಡೆಯಲಿದ್ದಾರೆ. ಇನ್ನು ಪೊಲೀಸರು ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ‌ ಆತ್ಮಹತ್ಯೆಗೆ ಯತ್ನಿಸಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತಂತೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

Follow Us:
Download App:
  • android
  • ios