ಇಂದು ಬೆಳಗ್ಗಿನ ಜಾವ  ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಾರೂಗಾರ ಬಳಿ ಟ್ಯಾಂಕರ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿದ್ದು, ಐವರಿಗೆ ಗಂಭೀರ ಗಾಯವಾಗಿದೆ.

ಉತ್ತರಕನ್ನಡ (ಏ.08): ರಾಜ್ಯದಲ್ಲಿ ಕರಾವಳಿ ಭಾಗ ಹಾಗೂ ಶಿರಸಿ ಭಾಗಗಳಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ. ಇಂದು ಬೆಳಗ್ಗಿನ ಜಾವ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಾರೂಗಾರ ಬಳಿ ಟ್ಯಾಂಕರ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿದ್ದು, ಈ ಘಟನೆಯಲ್ಲಿ ಐವರಿಗೆ ಗಂಭೀರ ಗಾಯವಾಗಿದೆ.

ಈ ಘಟನೆಯಲ್ಲಿ ವಾಹನಗಳು ನಜ್ಜು ಗುಜ್ಜಾಗಿರುವುದನ್ನು ನೀವು ನೋಡಬಹುದು. ಶಿರಸಿಯ ಹಾರೂಗಾರ ಬಳಿ ಕಾರವಾರ ಬಿಜೆಪಿ ಕಾರ್ಯಕರ್ತರ ವಾಹನ ಅಪಘಾತ ಅಪಘಾತಕ್ಕೀಡಾಗಿದೆ. ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ- ಐವರಿಗೆ ಗಾಯವಾಗಿದ್ದು, ಈ ಪೈಕಿ ಓರ್ವರಿಗೆ ಗಂಭೀರ ಗಾಯವಾಗಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಾರೂಗಾರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ನಿತೀನ ರಾಯ್ಕರ್ ಎಂಬವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. 

ಹಿಂಬದಿಯಿಂದ ಬಂದು ಗುದ್ದಿದ ಕಾರು: ಶಾಲೆಗೆ ಹೊರಟಿದ್ದ ತಂದೆ -ಮಗಳು ಸಾವು

ಶಿರಸಿಯಿಂದ ಕಾರವಾರಕ್ಕೆ ಹೋಗುವಾಗ ಘಟನೆ: ಈ ಅಪಘಾತದಲ್ಲಿ ವಿ.ಎಂ.ಹೆಗಡೆ, ಪ್ರದೀಪ ಗುನಗಿ, ಗಜಾನನ ರೇವಣಕರ ಹಾಗೂ ಸಂದೇಶ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿರಸಿ ಬಿಜೆಪಿ ಕಾರ್ಯಾಗಾರಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರು, ವಾಪಸ್‌ ಕಾರವಾರಕ್ಕೆ ಇನ್ನೋವಾ ಕಾರಿನಲ್ಲಿ ಹೋಗುವಾಗ ಈ ಘಟನೆಯು ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಶಿರಸಿಯಿಂದ ಕಾರವಾರಕ್ಕೆ ಇನ್ನೋವಾದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಬೆಳಗ್ಗೆ ನಡೆದ ಈ ದುರ್ಘಟನೆಯ ಕುರಿತಂತೆ ಶಿರಸಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ಹೋಟೆಲ್: ಗದಗ : ಗದಗ ಜಿಲ್ಲೆಯ ಹೊಳೆ ಆಲೂರ ನವ ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಹೋಟೆಲ್‌ ಮತ್ತು ಗೂಡಂಗಡಿಗೆ ಬೆಂಕಿ ತಗುಲಿದೆ. ಆದ್ದರಿಂದ ಮಳೆಯ ನಡುವೆಯೂ ಅಂಗಡಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿಯನ್ನು ಆರಿಸಿದ್ದಾರೆ. ಕೃಷ್ಣಾ ಗಂಗಪ್ಪ ಲಮಾಣಿ ಅವರಿಗೆ ಸೇರಿದ ಅಂಗಡಿ ಆಗಿದ್ದು, ಕ್ಷಣಾರ್ಧದಲ್ಲಿ ಹೊತ್ತಿದ ಬೆಂಕಿಯಿಂದ ಅಂಗಡಿ ವಸ್ತುಗಳು ಬಹುತೇಕವಾಗು ಸುಟ್ಟು ಹಾನಿಗೀಡಾಗಿವೆ. ಆದರೆ, ದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ‌ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದಾರೆ. 

ಗದಗ: ಮುಂಗಾರು ಪೂರ್ವ ಮಳೆಗೆ ಜಿಲ್ಲೆ​ಯಲ್ಲಿ ಇಬ್ಬರು ಬಲಿ!

ಜೊತೆಗೆ ಗದಗ ಜಿಲ್ಲೆ​ಯ ವಿವಿಧ ಗ್ರಾಮಗಳಲ್ಲಿ ಶುಕ್ರ​ವಾರ ಮಧ್ಯಾಹ್ನದ ವೇಳೆಯಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಗಾಳಿ, ಮಳೆಗೆ ಜನ ಜೀವನ ಆಸ್ತವ್ಯಸ್ತವಾಗಿದ್ದು, ಸಿಡಿಲಿನ ಅಬ್ಬರಕ್ಕೆ ಕುರಿಕಾಯಲು ತೆರಳಿದ್ದ ಇಬ್ಬರು ಯುವಕರು ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ತಾಲೂ​ಕಿನ ಲಿಂಗ​ದಾ​ಳ​(Lingadal)ದಲ್ಲಿ ಕುರಿ ಮೇಯಿ​ಸಲು ತೆರ​ಳಿದ್ದ ಯುವ​ಕ​ರಿ​ಬ್ಬರು ಸಿಡಿ​ಲಿನ ಹೊಡೆ​ತಕ್ಕೆ ಸ್ಥಳ​ದ​ಲ್ಲಿಯೇ ಮೃತ​ಪಟ್ಟು ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಮೃತ ಯುವಕರನ್ನು ಶರಣಪ್ಪ (16) ಹಾಗೂ ದೇವೇಂದ್ರಪ್ಪ (16) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಸುನೀಲ ಎನ್ನುವ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.