Asianet Suvarna News Asianet Suvarna News

ಟ್ಯಾಂಕರ್ - ರೋಲ್ಸ್ ರಾಯ್ಸ್ ನಡುವೆ ಭೀಕರ ಅಪಘಾತ; ಟ್ರಕ್‌ನ ಇಬ್ಬರ ಸಾವು ಕಾರಿನಲ್ಲಿದ್ದವರು ಸೇಫ್!

ಟ್ರಕ್ ಹಾಗೂ ದುಬಾರಿ ರೋಲ್ಸ್ ರಾಯ್ಸ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. 5 ಸ್ಟಾರ್ ಸೇಫ್ಟಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸೇಫ್ ಆಗಿದ್ದಾರೆ. ಆದರೆ ಟ್ಯಾಂಕರ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. 

Tanker and Rolls Royce collided head on in Delhi Expressway car passenger survives ckm
Author
First Published Aug 23, 2023, 3:31 PM IST

ಹರ್ಯಾಣ(ಆ.23) ವಾಹನದಲ್ಲಿ ಸೇಫ್ಟಿ ಅತ್ಯಂತ ಅವಶ್ಯಕ. ಭಾರತದಲ್ಲಿ 5 ಸ್ಟಾರ್ ಸೇಫ್ಟಿ ಕಾರುಗಳಿಗೆ ಬೇಡಿಕೆ ಹೆಚ್ಚು. ಅಪಘಾತದ ವೇಳೆ ವಾಹನದ ಏರ್‌ಬ್ಯಾಗ್, ಗರಿಷ್ಠ ಕ್ರಾಶ್ ರೇಟಿಂಗ್ ಜೀವವನ್ನು ಉಳಿಸುತ್ತದೆ. ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ 5 ಸ್ಟಾರ್ ಹೆಚ್ಚುವರಿ ಸೇಫ್ಟಿ ಹೊಂದಿರುವ ಕಾರು. ಇದೀಗ ಎಕ್ಸ್‌ಪ್ರೆಸ್‌ವೇನಲ್ಲಿ ರೋಲ್ಸ್ ರಾಯ್ಸ್ ಕಾರೂ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದೆ. ರಾಂಗ್ ಸೈಡ್‌ನಲ್ಲಿ ಬಿದ್ದ ಇಂಧನ ಟ್ಯಾಂಕರ್ ಹಾಗೂ ರೋಲ್ಸ್ ರಾಯ್ಸ್ ಕಾರು ಡಿಕ್ಕಿಯಾದ ಪರಿಣಾಮ, ಟ್ಯಾಂಕರ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಆದರೆ ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಮೂವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಆದರೆ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಹರ್ಯಾಣದ ನುಹ್ ಬಳಿ ಈ ಘಟನೆ ನಡೆದಿದೆ. ದೆಹಲಿ ಮುಂಬೈ ಬರೋಡಾ ಎಕ್ಸ್‌ಪ್ರೆಸ್ ವೇನಲ್ಲಿ ಈ ಅಪಘಾತ ಸಂಭವಿಸಿದೆ. ರಾಂಗ್ ಸೈಡ್‌ನಿಂದ ಬರುತ್ತಿದ್ದ ಇಂಧನ ಟ್ಯಾಂಕರ್ ವೇಗವಾಗಿತ್ತು. ಇತ್ತ ಎಕ್ಸ್‌ಪ್ರೆಸ್‌ವೇ ಹಾಗೂ ರೋಲ್ಸ್ ರಾಯ್ಸ್ ಕಾರು ಎಂದರೆ ವೇಗದಲ್ಲಿ ಚೌಕಾಸಿ ಇರುವು ಸಾಧ್ಯತೆ ಇಲ್ಲ. ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಒಮ್ಮೆಲೆ ಪ್ರತ್ಯಕ್ಷಗೊಂಡ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿದೆ. 

ಈ ಕಾರಿನ ಬೆಲೆ 211 ಕೋಟಿ ರೂಪಾಯಿ, ಮೊದಲು ಬುಕ್ ಮಾಡಿದವರಿಗೆ ಮಾತ್ರ ಲಾ ರೋಸ್ ನೊಯಿರ್ ಭಾಗ್ಯ!

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಟ್ಯಾಂಕರ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ರೋಲ್ಸ್ ರಾಯ್ಸ್ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ಪ್ರಯಾಣಿಕರ ಸಂಬಂಧಿಕರು ಮತ್ತೊಂದು ಕಾರಿನಲ್ಲಿ ಇದರ ಹಿಂದೆ ಪ್ರಯಾಣಿಸುತ್ತಿದ್ದರು. ಇಂಧನ ಟ್ಯಾಂಕರ್ ಡಿಕ್ಕಿಯಾದ ಬೆನ್ನಲ್ಲೇ ರೋಲ್ಸ್ ರಾಯ್ಸ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. 

ಹಿಂದಿನ ಕಾರಿನಲ್ಲಿದ್ದ ಸಂಬಂಧಿಕರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಕಾರಿನೊಳಗಿಂದ ಮೂವರನ್ನು ಹೊರತೆಗೆದು ಆಸ್ಪತ್ರೆ ದಾಖಲಿಸಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿರುವ ರೋಲ್ಸ್ ರಾಯ್ಸ್ ಕಾರಿನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇನ್ನು ಟ್ಯಾಂಕರ್‌ನಲ್ಲಿದ್ದ ಡ್ರೈವರ್ ರಾಂಪ್ರೀತ್ ಹಾಗೂ ಸಹಾಯಕ ಕುಲ್ದೀಪ್ ಮೃತಪಟ್ಟ ದುರ್ದೈವಿಗಳು. 

ಇಶಾ ಅಂಬಾನಿ ಬಳಿ ಇದೆ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್ ಕಲ್ಲಿನಾನ್, ಇದು ಭಾರತದ ಮೊದಲ ಮ್ಯಾಜಿಕ್ ಕಾರು!

ರೋಲ್ಸ್ ರಾಯ್ಸ್ ಅತ್ಯಂತ ಸುರಕ್ಷತಾ ಫೀಚರ್ಸ್ ಹೊಂದಿರುವ ಕಾರು 7 ಏರ್‌ಬ್ಯಾಗ್, 5 ಸ್ಟಾರ್ ಕ್ರಾಶ್ ರೇಟಿಂಗ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಕಾರಿನ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಸಾಮಾನ್ಯವಾಗಿ ಟ್ಯಾಂಕರ್‌ ಯಾವುದೇ ಕಾರು ಅಥವಾ ಸಣ್ಣ ವಾಹನಕ್ಕೆ ಡಿಕ್ಕಿಯಾದರೆ ವಾಹನಗಳು ಪುಡಿ ಪುಡಿಯಾಗಲಿದೆ. ರೋಲ್ಸ್ ರಾಯ್ಸ್ ಐಷಾರಾಮಿ ಹಾಗೂ ದುಬಾರಿ ಕಾರು. ಜೊತೆಗೆ ಸುರಕ್ಷತಾ ಫೀಚರ್ಸ್ ಹೊಂದಿರುವ ಕಾರಣ ಕಾರಿನ ಪ್ರಯಾಣಿಕರು ಸೇಫ್ ಆಗಿದ್ದಾರೆ. 
 

Follow Us:
Download App:
  • android
  • ios