ಗಂಡ ಹೆಂಡತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರೋ ಘಟನೆ ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮೃತ ಪಟ್ಟ ದುರ್ದೈವಿಗಳನ್ನು ಗಂಡ ಮೆಹೆಬೂಬ್ (45) ಹಾಗೂ ಹೆಂಡ್ತಿ ಪರ್ವೀನ್ (35) ಎಂದು ಗುರುತಿಸಲಾಗಿದೆ.

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಏ.17): ಆತ ದೂರದ ಯಾದಗಿರಿಯಿಂದ ಬಂದು ಬೆಂಗಳೂರಿನಲ್ಲಿ ಮೇಸ್ತ್ರಿ ಕೆಲಸ‌ ಮಾಡುತ್ತಿದ್ದ. ಹೆಂಡ್ತಿ ಮಕ್ಕಳು ಕೆಲಸ‌ ಎಲ್ಲಾ ಚೆನ್ನಾಗಿಯೇ ಇತ್ತು. ಡಾಲರ್ಸ್ ಕಾಲೋನಿ ಎಂಬ ಏರಿಯಾದಲ್ಲಿ ಒಂದು ದೊಡ್ಡ ಬಿಲ್ಡಿಂಗ್ ಕಟ್ಟೋ ಕೆಲಸವು ಸಿಕ್ಕಿತ್ತು. ಆದರೆ ಇದಕ್ಕಿದ್ದಂತೆ ಗಂಡ ಹೆಂಡ್ತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾರೆ. ಗಂಡ ಹೆಂಡತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರೋ ಘಟನೆ ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮೃತ ಪಟ್ಟ ದುರ್ದೈವಿಗಳನ್ನು ಗಂಡ ಮೆಹೆಬೂಬ್ (45) ಹಾಗೂ ಹೆಂಡ್ತಿ ಪರ್ವೀನ್ (35) ಎಂದು ಗುರುತಿಸಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಾಲರ್ಸ್ ಕಾಲೋನಿಯ 14 ನೇ ಕ್ರಾಸ್ ನ ನಿರ್ಮಾಣ ಹಂತದ ಕಟ್ಟಡದಲ್ಲಿ ಮೃತ ದೇಹಗಳು ಪತ್ತೆಯಾಗಿದ್ದು, ಸಾಕಷ್ಟು ಸಂಶಯ ಮೂಡಿಸಿದೆ. 

ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗಂಡ ಮೆಹಬೂಬ್ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ಡಾಕ್ಟರ್ ರೊಬ್ಬರ ಮನೆ ಕಟ್ಟುವ ಕೆಲಸ ಮೆಹಮೂಬ್ ಗೆ ಸಿಕ್ಕಿತ್ತು. ಹೀಗಾಗಿ ಯಾದಗಿರಿ ಮೂಲದ ಮೆಹಬೂಬ್ ಕುಟುಂಬ ನಿರ್ಮಾಣ ಹಂತದ ಬಿಲ್ಡಿಂಗ್ ನಲ್ಲಿಯೇ ವಾಸ ಮಾಡುತ್ತಿದ್ರು. ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಒಂದು ವರ್ಷದಿಂದ ಇಲ್ಲಿಯೇ ವಾಸವಾಗಿದ್ದಾರೆ. ರಂಜಾನ್ ಹಬ್ಬಕ್ಕೆ ತೆರಳಿದವರು ವಾಪಸ್ ಬಂದಿದ್ರು. ಮೂರು ದಿನಗಳ ಹಿಂದೆ ಗಂಡ ಹೆಂಡ್ತಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿರೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಗಂಡ ಮೆಹಬೂಬ್ ದೇಹದ ಮೇಲೆ ಚಾಕುವಿನಿಂದ ಇರಿದಿರೋ ಮಾರ್ಕ್ ಗಳು ಇವೆ. ಹೀಗಾಗಿ ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿದ್ದಾರೆ. 

ಗಂಡ ಸಾವನ್ನಪ್ಪಿದ ಒಂದು ಗಂಟೆ ಬಳಿಕ ಹೆಂಡ್ತಿ ಪರ್ವೀನ್ ನೇಣಿಗೆ ಶರಣಾಗಿರೋ ಶಂಕೆ ಇದೆ. ನೆಲದ ಮೇಲೆ ಗಂಡನ ಮೃತ ದೇಹ ಬಿದ್ದಿದೆ. ಹೆಂಡ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಇದೆ. ಕೊಳೆತ ಸ್ಥಿತಿಯಲ್ಲಿ ದಂಪತಿ ಮೃತ ದೇಹ ಪತ್ತೆಯಾಗಿದೆ. ಸದ್ಯ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತ ದೇಹ ರವಾನೆ ಮಾಡಲಾಗಿದೆ. ಇಬ್ಬರ ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆ ಕೈಗೊಂಡಿರೋ ಪೊಲೀಸರು ಮೂರು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ವಾಸನೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ರು. ಬಳಿಕ ಸಂಜಯ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಾವನ್ನಪ್ಪಿರೋದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಉತ್ತರ ವಿಭಾಗ ಡಿಸಿಪಿ ಸೈದುಲ್ಲಾ ಅಡಾವತ್ ಡಾಲರ್ಸ್ ಕಾಲೋನಿಯಲ್ಲಿ ಎರಡು ಡೆಡ್ ಬಾಡಿ ಇರೋ ಬಗ್ಗೆ ಮಾಹಿತಿ ಸಿಗುತ್ತೆ.

ಖಾಸಗಿ ಚಾಟಿಂಗ್, ವಿಡಿಯೋ ಕಾಲ್ ರೆಕಾರ್ಡಿಂಗ್ ಇಟ್ಟುಕೊಂಡು ಸಮಾಜ ಸೇವಕರಿಂದ ಬ್ಲ್ಯಾಕ್ ಮೇಲ್?

ಗಂಡ ಹೆಂಡ್ತಿ ಅನ್ನೋದು ಗೊತ್ತಾಗುತ್ತೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಮೇಸ್ತ್ರಿ ಕೆಲಸ ಮಾಡ್ತಿದ್ದು, ಅಲ್ಲೇ ಒಂದು ವರ್ಷದಿಂದ ಇದ್ದರು. ಯಾದಗಿರಿ ಭಾಗದವರಾಗಿದ್ದು, ರಂಜಾನ್ ಗೆ ಹೋಗಿ ವಾಪಸ್ ಆಗಿದ್ರು. ಅನುಮಾನಾಸ್ಪದ ಸಾವು ಕೇಸ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪತಿ ಮೃತದೇಹ ನೆಲದ ಮೇಲೆ ಬಿದ್ದಿದೆ, ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ದೂರದ ಯಾದಗಿರಿಯಿಂದ ಬಂದು ಗಂಡ ಹೆಂಡ್ತಿ ಇಬ್ಬರು ಅನುಮಾನಸ್ಪಾದವಾಗಿ ಸಾವನ್ನಪ್ಪಿರೋದು ಅನುಮಾನ ಮೂಡಿಸಿದೆ. ಪೊಲೀಸರು ಬೇರೆ ಯಾರಾದ್ರು ಇವರನ್ನು ಕೊಲೆ ಮಾಡಿದ್ರಾ ಎಂಬ ಬಗ್ಗೆ ಕೂಡ ತನಿಖೆಯನ್ನು ಕೈಗೊಂಡಿದ್ದಾರೆ.