Bengaluru: ಹಸೆಮಣೆ ಏರಿದ ನಾಲ್ಕು ತಿಂಗಳಲ್ಲೇ ಹೆಣವಾದ ಯುವತಿ!
ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ನಿಹಾರಿಕಾ ಎಂದು ಗುರುತಿಸಲಾಗಿದೆ. ಈಕೆ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ವರದಿ: ಚೇತನ್ ಮಹಾದೇವ
ಬೆಂಗಳೂರು (ಅ.23): ಪ್ರೀತಿಸಿದವನನ್ನ ಮದ್ವೆಯಾದ್ರೆ ರಾಣಿ ತರಹ ಇರ್ತೀನಿ ಅಂದ್ಕೊಂಡು ಹಸೆಮಣೆ ಏರಿದ್ದ ಚಂದದ ಹುಡುಗಿ ನೇಣಿಗೆ ಶರಣಾಗಿರುವ ಘಟನೆ ನಗರದ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.ನೇಣಿಗಾದ ಶರಣಾದ ಮುದ್ದಾಗಿರೋ ಹೆಣ್ಮಗಳ ಹೆಸರು ನಿಹಾರಿಕ. ಮೈಸೂರು ಮೂಲದವಳಾದ ನಿಹಾರಿಕ ಕಳೆದ ಐದು ವರ್ಷದಿಂದ ಕಾರ್ತಿಕ್ ಎಂಬಾತನನ್ನ ಮನಸಾರೇ ಇಷ್ಟ ಪಟ್ಟು ಮದ್ವೆಯಾಗಿದ್ದಳು. ಬಿಎಸ್ಸಿ ಓದ್ಕೊಂಡಿದ್ದ ನಿಹಾರಿಕ ಮದ್ವೆಯಾದ ಬಳಿಕ ಪುಟ್ಟೇನಹಳ್ಳಿಯ ಖಾಸಗಿ ಸ್ಕೂಲ್ ಒಂದರಲ್ಲಿ ಟೀಚಿಂಗ್ ಮಾಡಿಕೊಂಡು ಆರಾಮಾಗಿದ್ದಳು. ಅದೇ ರೀತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕಾರ್ತಿಕ್ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಆದ್ರೆ, ನಿನ್ನೆ (ಶನಿವಾರ) ಪುಟ್ಟೇನಹಳ್ಳಿಯ ಫ್ಲ್ಯಾಟ್‌ನಲ್ಲಿ ನಿಹಾರಿಕ ನೇಣುಕುಣಿಕೆಯಲ್ಲಿ ಹೆಣವಾಗಿ ಹೋಗಿದ್ದಳು.
ಸೈಕೋ ಕಾರ್ತಿಕ್ ನ ಟಾರ್ಚರ್‌ಗೆ ಉಸಿರು ಚೆಲ್ಲಿದ್ಲು ನಿಹಾರಿಕ: ಜೂನ್‌ನಲ್ಲಿ ಮದ್ವೆಯಾಗಿದ್ದ ನಿಹಾರಿಕಾ ಹಾಗೂ ಕಾರ್ತಿಕ್ ಜೋಡಿಯಲ್ಲಿ ಹಸೆಮಣಿ ಏರಿದ ದಿನದಿಂದ ಕಿರಿಕ್ ಶುರುವಾಗಿತ್ತು. ಕಾರ್ತಿಕ್ ಸಣ್ಣ ಪುಟ್ಟ ವಿಚಾರಕ್ಕೂ ನಿಹಾರಿಕಾ ಬಗ್ಗೆ ಅನುಮಾನಪಟ್ಟು ದನಕ್ಕೆ ಹೊಡೆದ ಹಾಗೆ ಹೊಡೆಯುತ್ತಿದ್ದನಂತೆ. ನಿಹಾರಿಕ ಕಾರ್ತಿಕ್‌ನ ಸೈಕೋ ಮೆಂಟಾಲಿಟಿಯನ್ನ ನೋಡಿ ರೋಸಿ ಹೋಗಿ ಹಲವು ಬಾರಿ ತಂದೆ-ತಾಯಿಯ ಬಳಿ ನೋವನ್ನ ತೋಡಿಕೊಂಡಿದ್ದಳು. ನಿನ್ನೆ ಎಂದಿನಂತೆ ಸ್ಕೂಲ್ ಕಡೆ ಹೋಗ್‌ಬರ್ತೀನ್ ರೀ ಅಂತ ಕಾರ್ತಿಕ್‌ನ ಬಳಿ ನಿಹಾರಿಕ ಕೇಳಿಕೊಂಡಿದ್ದಳು. ಸ್ಕೂಲೂ ಬೇಡ ಸ್ಕೂಲಲ್ಲಿರೋ ವ್ಯಕ್ತಿಗಳ ಜೊತೆ ಚಕ್ಕಂದವೂ ಬೇಡ ಮನೇಲೇ ಬಿದ್ದಿರು ಅಂತ ಕಾರ್ತಿಕ್ ನಿಹಾರಿಕಾಗೆ ನೋವಾಗೋ ರೀತಿಯಲ್ಲಿ ಮಾತಾಡಿದ್ದ. ಅಷ್ಟೇ ನಿಹಾರಿಕ ಆತ್ಮಹತ್ಯೆಯ ಡಿಸಿಷನ್ ತೆಗೆದುಕೊಂಡೇ ಬಿಟ್ಟಿದ್ದಳು.
ಬಿಜೆಪಿ ಜನ ಸಂಕಲ್ಪ ಯಾತ್ರೆ ನವೆಂಬರ್ 6ಕ್ಕೆ ಮುಂದೂಡಿಕೆ: ಶಾಸಕ ತೇಲ್ಕೂರ
ಪ್ರೀತಿಮಾಯೆ ಅಂತ ಗೊತ್ತಿದ್ರೂ ಪ್ರಿಯತಮನ ಕೈ ಹಿಡಿದು ಸ್ವರ್ಗಕ್ಕೆ ಕಿಚ್ಚು ಹಚ್ಚೋಣ ಅನ್ನೋ ಫೀಲ್‌ನಲ್ಲಿದ್ದ ನಿಹಾರಿಕ ಮಸಣದ ಕಿಚ್ಚಲ್ಲಿ ಲೀನವಾಗಿ ಹೋಗಿದ್ದಾಳೆ. ಇಲ್ಲಿ ನಿಹಾರಿಕಾ ತೆಗೆದುಕೊಂಡ ಪ್ರೀತಿ-ಮದ್ವೆಯ ನಿರ್ಧಾರ ಬೇರ್ಯಾವ ಹೆಣ್ಮಗಳು ತೆಗೆದುಕೊಳ್ಳದಿರ್ಲಿ ಅನ್ನೋದೇ ನಿಹಾರಿಕ ಮನೆಯವ್ರ ನೋವಿನ ವಿನಂತಿಯಾಗಿದೆ. ಸದ್ಯ ಪ್ರಕರಣ ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದು ಕಾರ್ತಿಕ್ ನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ನಿಹಾರಿಕಾ: ಮೃತ ನಿಹಾರಿಕಾ ಆಸೆಯಂತೆ ಆಕೆಯ ಕುಟುಂಬ ನೇತ್ರದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಸತ್ತ ಮೇಲೂ ನಿಹಾರಿಕಾ ಇನ್ನೊಬ್ಬರಿಗೆ ಬೆಳಕಾಗಲಿದ್ದಾರೆ.