Asianet Suvarna News Asianet Suvarna News

Bengaluru News: ರಿಚ್ಮಂಡ್ ಸರ್ಕಲ್ ಬಳಿ ಅನುಮಾನಾಸ್ಪದ ವಸ್ತು ಪತ್ತೆ: ಬಿಗುವಿನ ವಾತಾವರಣ

Bengaluru Crime News: ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ

Suspicious Bag Found Near Richmond Circle in Bengaluru Police Probe On mnj
Author
Bengaluru, First Published Aug 9, 2022, 3:14 PM IST

ಬೆಂಗಳೂರು (ಆ. 09): ಬೆಂಗಳೂರಿನ ರಿಚ್ಮಂಡ್ ಸರ್ಕಲ್ (Richmond Circle) ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಅನುಮಾನಾಸ್ಪದ ವಸ್ತು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನುಮಾನಾಸ್ಪದ ಬ್ಯಾಗ್ ಕಂಡು ಪೊಲೀಸರಿಗೆ ಅಪರಿಚಿತ ವ್ಯಕ್ತಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ  ನಡೆಸಿದ್ದಾರೆ. 

ಅನುಮಾನಸ್ಪಾದ ಬ್ಯಾಗ್ ಇರುವ ಬಗ್ಗೆ ಮಾಹಿತಿ ಬೆನ್ನಲ್ಲೇ  ಬಾಂಬ್ ಸ್ಕ್ವಾಂಡ್‌ (Bomb Squad) ಬ್ಯಾಗ್ ಪರಿಶೀಲನೆ ಮಾಡುತ್ತಿದೆ. ಬ್ಯಾಗ್ ಕಂಡು ಜನರು ಭಯಭೀತರಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅನುಮಾನಾಸ್ಪದ ವಸ್ತು ಇರುವುದಾಗಿ ಅನಾಮಿಕನಿಂದ ಪೊಲೀಸರಿಗೆ ಕರೆ ಮಾಡಲಾಗಿತ್ತು. ಈ ಹಿನ್ನಲೆ ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿದ್ದಾರೆ. 

ಆರು ರಾಜ್ಯಗಳ 13 ಕಡೆ ಎನ್‌ಐಎ ದಾಳಿ: ಕರ್ನಾಟಕದಲ್ಲಿ ಮೂವರು ಶಂಕಿತ ಉಗ್ರರು ವಶಕ್ಕೆ

ಸದ್ಯ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಒಂದು ಕವರ್ ನಲ್ಲಿ ಚಾರ್ಜರ್ ಬ್ಯಾಟರಿ ರೀತಿಯ ವಸ್ತುಗಳು ಪತ್ತೆಯಾಗಿದ್ದು, ಯಾವುದೇ ಸ್ಪೋಟಕ ವಸ್ತುಗಳು ಇಲ್ಲ ಎಂದು ಪೊಲೀಸ್ ಮೂಲಗಳ ಸ್ಪಷ್ಟನೆ ನೀಡಿವೆ. ಈ ಸಂಬಂಧ ತನಿಖೆ ಮುಂದುವರೆದಿದ್ದು ಮತ್ತಷ್ಟು ಮಾಹಿತಿ ನೀರಿಕ್ಷಿಸಲಾಗಿದೆ. 

Follow Us:
Download App:
  • android
  • ios