Asianet Suvarna News Asianet Suvarna News

ಸಸ್ಪೆಂಡ್‌ ಆಗಿ ಐಎಂಎ ಹಗರಣದಲ್ಲಿ ಶಿಕ್ಷೆ ಅನುಭವಿಸಿದ್ದ IAS ಅಧಿಕಾರಿ ಆತ್ಮಹತ್ಯೆ?

ಐಎಎಸ್ ಅಧಿಕಾರಿ ಆತ್ಮಹತ್ಯೆ ಶಂಕೆ/ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಆತ್ಮಹತ್ಯೆ ಶಂಕೆ/ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ್ರಾ ಐಎಎಸ್ ಅಧಿಕಾರಿ

Suspended ias officer vijay shankar committed suicide Bengaluru
Author
Bengaluru, First Published Jun 23, 2020, 9:28 PM IST

ಬೆಂಗಳೂರು(ಜೂ.  23)  ಐಎಂಎ ಹಗರಣ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 ಐಎಂಎ ಹಣ ವಂಚನೆ ಪ್ರಕರಣಕ್ಕೆ  ಸಂಬಂಧಿಸಿ SITಯಿಂದ ಬಂಧನಕ್ಕೊಳಗಾಗಿದ್ದ ವಿಜಯ್ ಶಂಕರ್ ಬಂಧನಕ್ಕೆಒಳಗಾಗಿದ್ದರು.  2019 ಜುಲೈ 8ರಂದು ಎಸ್‍ಐಟಿ ಲಂಚ ಪಡೆದ ಆರೋಪದಲ್ಲಿ ವಿಜಯ್ ಶಂಕರ್ ಅವರನ್ನ ಬಂಧಿಸಿತ್ತು.

ಐಎಂಎ ಪ್ರಕರಣದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರು?

ವಿಜಯ್ ಶಂಕರ್ ವಿಚಾರಣೆ ಮಾಡಬೇಕು ಎಂದು ಸಿಬಿಐ ಸರ್ಕಾರದ ಅನುಮತಿ ಕೇಳಿತ್ತು. ಸರ್ಕಾರ ತನಿಖೆಗೆ ಅನುಮತಿ ನೀಡಿದ್ದೆ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.  ಬೆಂಗಳೂರಿನ  ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿತ್ತು.

ಬೆಂಗಳೂರಿನ ಡಿಸಿಯಾಗಿದ್ದ ವೇಳೆ ಒಂದು ಪ್ರಕರಣದಲ್ಲಿ ಐಎಂಎ ಹಗರಣದ ರೂವಾರಿ ಮನ್ಸೂರ್‌ಗೆ ವಿಜಯ್ ಶಂಕರ್ ಕ್ಲೀನ್ ಚಿಟ್ ಕೊಟ್ಟಿದ್ದರು. ಪ್ರಕರಣದ ಆರೋಪದಲ್ಲಿ ಜೈಲುವಾಸ ಅನುಭವಿಸಿದ್ದರು. 

Follow Us:
Download App:
  • android
  • ios