ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜು: ಶಂಕಿತ ಉಗ್ರರಿಗೆ ಆನ್‌ಲೈನಲ್ಲಿ ಹಣ, ಹೊರ ರಾಜ್ಯದಿಂದ ಶಸ್ತ್ರಾಸ್ತ್ರ

ಉಗ್ರ ದಾಳಿಗೆ ಸಿದ್ಧತೆ ನಡೆಸಿದ್ದ ಆರೋಪಿಗಳಿಗೆ ಗೂಗಲ್‌ಪೇ ಮೂಲಕ ಹಣ ಸಂದಾಯವಾಗಿದೆ. ಆದರೆ ಎಷ್ಟು ಮೊತ್ತದ ಆರ್ಥಿಕ ನೆರವು ಬಂದಿದೆ ಎಂಬುದರ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ. ಅಲ್ಲದೆ ಹೊರ ರಾಜ್ಯಗಳಿಂದ ಆರೋಪಿಗಳಿಗೆ ನಾಡ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳು ಪೂರೈಕೆಯಾಗಿವೆ. ಈ ಬಗ್ಗೆ ಕೂಡಾ ತನಿಖೆ ನಡೆಯುತ್ತಿದೆ: ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ 

Suspected Terrorists Receive Money Online Weapons from Other States to Bengaluru grg

ಬೆಂಗಳೂರು(ಜು.20):  ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಐವರು ಶಂಕಿತ ಉಗ್ರರಿಗೆ ಆನ್‌ಲೈನ್‌ ಮೂಲಕ ಹಣ ಹಾಗೂ ಹೊರ ರಾಜ್ಯದಿಂದ ಶಸ್ತ್ರಾಸ್ತ್ರ ಪೂರೈಕೆಯಾಗಿತ್ತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ.

ಉಗ್ರ ದಾಳಿಗೆ ಸಿದ್ಧತೆ ನಡೆಸಿದ್ದ ಆರೋಪಿಗಳಿಗೆ ಗೂಗಲ್‌ಪೇ ಮೂಲಕ ಹಣ ಸಂದಾಯವಾಗಿದೆ. ಆದರೆ ಎಷ್ಟು ಮೊತ್ತದ ಆರ್ಥಿಕ ನೆರವು ಬಂದಿದೆ ಎಂಬುದರ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ. ಅಲ್ಲದೆ ಹೊರ ರಾಜ್ಯಗಳಿಂದ ಆರೋಪಿಗಳಿಗೆ ನಾಡ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳು ಪೂರೈಕೆಯಾಗಿವೆ. ಈ ಬಗ್ಗೆ ಕೂಡಾ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

ಬೆಂಗಳೂರಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಪ್ಲ್ಯಾನ್‌: ಐವರು ಶಂಕಿತ ಉಗ್ರರು ಅರೆಸ್ಟ್‌; ಮಾಸ್ಟರ್‌ಮೈಂಡ್‌ ಎಸ್ಕೇಪ್‌!

ಭಯೋತ್ಪಾದಕ ಕೃತ್ಯ ನಡೆಸಲು ಹಣ ಹಾಗೂ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಹಮ್ಮದ್‌ ಜುನೈದ್‌ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರ ನಾಸಿರ್‌ ಪ್ರಮುಖ ಪಾತ್ರವಹಿಸಿದ್ದಾರೆ. ಈ ಇಬ್ಬರ ಸೂಚನೆ ಮೇರೆಗೆ ಆರೋಪಿಗಳು ವಿಧ್ವಂಸಕ ಕೃತ್ಯ ತಯಾರಿ ನಡೆಸಿದ್ದರು. ಕೇರಳ ರಾಜ್ಯದಿಂದಲೇ ಆರೋಪಿಗಳಿಗೆ ಪಿಸ್ತೂಲ್‌ ಸರಬರಾಜು ಆಗಿರುವ ಬಗ್ಗೆ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios