Asianet Suvarna News Asianet Suvarna News

ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಮುಸ್ಲಿಂ ಯುವ ಸಮುದಾಯ ಸಜ್ಜುಗೊಳಿಸುತ್ತಿದ್ದ ಶಂಕಿತ ಉಗ್ರ ಬಂಧನ

ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಇಲ್ಲಿನ ಮುಸ್ಲಿಂ ಯುವ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದ ಪಾಕಿಸ್ತಾನ ಮೂಲದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಶಂಕಿತ ಉಗ್ರನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

Suspected terrorist arrested for mobilizing Muslim youth community for Jihadi war against India gvd
Author
First Published Sep 1, 2024, 9:19 AM IST | Last Updated Sep 1, 2024, 9:19 AM IST

ಬೆಂಗಳೂರು (ಸೆ.01): ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಇಲ್ಲಿನ ಮುಸ್ಲಿಂ ಯುವ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದ ಪಾಕಿಸ್ತಾನ ಮೂಲದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಶಂಕಿತ ಉಗ್ರನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಅಜೀಜ್ ಅಹ್ಮದ್‌ ಅಲಿಯಾಸ್‌ ಜಲೀಲ್ ಅಜೀಜ್‌ ಬಂಧಿತನಾಗಿದ್ದು, ಸೌದಿ ಅರೇಬಿಯಾಕ್ಕೆ ಪರಾರಿಯಾಗಲು ಮುಂದಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅಜೀಜ್‌ನನ್ನು ಕೆಐಎ ವಲಸೆ ವಿಭಾಗದ ಸಹಕಾರದಲ್ಲಿ ಎನ್‌ಐಎ ಶುಕ್ರವಾರ ರಾತ್ರಿ ಸೆರೆಹಿಡಿದು ಕರೆದೊಯ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂಲಭೂತವಾದಿ ಸಂಘಟನೆ ಕಟ್ಟಿದ್ದ ಅಜೀಜ್‌: ಹಲವು ದಿನಗಳಿಂದ ಪಾಕಿಸ್ತಾನ ಮೂಲದ ‘ಹಿಜಬ್‌-ಉತ್‌-ಥರಿರ್‌’ ಹೆಸರಿನ ಸಂಘಟನೆಯಲ್ಲಿ ಅಜೀಜ್ ಸಕ್ರಿಯವಾಗಿದ್ದ. ಈ ಸಂಘಟನೆ ಮೂಲಕ ಮೂಲಕ ಮುಸ್ಲಿಂ ಸಮುದಾಯದ ಯುವ ಸಮೂಹಕ್ಕೆ ಮೂಲಭೂತವಾದ ಬೋಧಿಸಿ ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಆತ ಸಜ್ಜುಗೊಳಿಸುತ್ತಿದ್ದ. ಈ ಸಂಘಟನೆಯು ಪಾಕಿಸ್ತಾನ ಇಸ್ಲಾಂ ಧಾರ್ಮಿಕ ಗುರು ತಾಖಿ ಅಲ್‌ ದಿನಾಲ್‌ ನಭಾನಿ ಸಂದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದೆ ಎಂದು ಎನ್‌ಐಎ ಹೇಳಿದೆ.

ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ವಿಜಯಲಕ್ಷ್ಮಿ: ಬಳ್ಳಾರಿ ಜೈಲಿನಲ್ಲಿ ಭೇಟಿಯಾದ ಪತ್ನಿ

ಈ ಜಿಹಾದಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಎನ್‌ಎಐ, ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ 6 ಮಂದಿ ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿಯಿತು. ತನ್ನ ಬೆನ್ನ ಹಿಂದೆ ಎನ್‌ಐಎ ಬಿದ್ದಿರುವ ವಿಷಯ ತಿಳಿದು ಭೀತಿಗೊಂಡ ಅಜೀಜ್‌, ಕೂಡಲೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಶುಕ್ರವಾರ ರಾತ್ರಿ ಸೌದಿ ಅರೇಬಿಯಾಕ್ಕೆ ಪರಾರಿಯಾಗಲು ಯೋಜಿಸಿದ್ದ. ಆದರೆ ಆತನ ಬೆನ್ನಟ್ಟಿದ್ದ ಎನ್‌ಐಎಗೆ ಅಜೀಜ್‌ ಪಲಾಯನದ ಕುರಿತು ಸುಳಿವು ಸಿಕ್ಕಿತು. ಕೂಡಲೇ ಎನ್‌ಐಎ ಈ ಬಗ್ಗೆ ಕೆಐಎ ವಲಸೆ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಂತಿಮವಾಗಿ ರಾತ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಅಜೀಜ್‌ ಎನ್‌ಐಎ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios