ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರ ಅರೆಸ್ಟ್ ಆಗಿದ್ದು, ಬಂಧಿತರಿಂದ  ಐಸಿಸ್​ಗೆ ಸಂಬಂಧಪಟ್ಟಿರುವ ಹಲವು ವಸ್ತುಗಳು ಲಭ್ಯವಾಗಿದೆ.  ಆರೋಪಿಗಳ ಬಳಿಯಲ್ಲಿ ಸಿಕ್ಕಿರುವ ಪೆನ್​ಡ್ರೈವ್​ನಲ್ಲಿ ಐಸಿಸ್​ಗೆ ಸಂಬಂಧಿಸಿದ ಹಲವಾರು ವಿಡಿಯೋಗಳಿವೆ ಎಂದು  ಶಿವಮೊಗ್ಗ  ಎಸ್​ಪಿ ಲಕ್ಷ್ಮೀಪ್ರಸಾದ್​ ಹೇಳಿದ್ದಾರೆ.

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ಶಿವಮೊಗ್ಗ (ಸೆ.23): ಶಿವಮೊಗ್ಗದಲ್ಲಿ ಇಬ್ಬರು ಶಂಕಿತರನ್ನ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಇವತ್ತು ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಶಿವಮೊಗ್ಗ ಪೊಲೀಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಂಕಿತ ಉಗ್ರರ ಸ್ಕೆಚ್ ವಿಸೃತ ಮಾಹಿತಿ ನೀಡಿದ್ದಾರೆ‌. ಶಿವಮೊಗ್ಗ 25/22 ಯುಎಪಿಎ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಕಳೆದ ಆಗಸ್ಟ್​ 15 ರಂದು ಸಂಭವಿಸಿದ ಸ್ಟಾಬಿಂಗ್ ಕೇಸ್​ನಲ್ಲಿ ನಾಲ್ಕು ಆರೋಪಿಗಳನ್ನು ಬಂದಿಸಿದ್ದೆವು. ಆ ಪೈಕಿ ಓರ್ವ ಆರೋಪಿ ಜಬಿವುಲ್ಲಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದೆವು. ಆತನಿಂದ ಸಿಕ್ಕ ಹೆಚ್ಚಿನ ಮಾಹಿತಿಯಡಿಯಲ್ಲಿ ದೊಡ್ಡಪೇಟೆ ಠಾಣೆಯಲ್ಲಿ 334/22 ಅಡಿಯಲ್ಲಿ ಉಪಕಾಯ್ದೆಯನ್ನು ಆಡ್ ಮಾಡಿದ್ದೆವು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದಾಗ ಶಾರೀಖ್ ಎಂಬ ವ್ಯಕ್ತಿ ಜಬಿವುಲ್ಲಾನಿಗೆ ಪ್ರಚೋದನೆ ನೀಡಿದ್ದ ಎಂಬುದು ತಿಳಿದು ಬಂತು.ಆನಂತರ ಶಾರೀಖ್​ನ ಬಗ್ಗೆ ತನಿಖೆ ಕೈಗೊಂಡಾಗ ಆತನಿಗೆ ಮಾಜ್ ಹಾಗೂ ಯಾಸೀನ್ ಸಹಚರರಾಗಿದ್ದರು ಎಂಬುದು ಗೊತ್ತಾಯ್ತು.ಇದರ ಅನ್ವಯದಲ್ಲಿ ಯಾಸಿನ್​ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಇದರ ಅನ್ವಯ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ, 325/22 ಕೇಸ್ ​ನಂಬರ್​ನಲ್ಲಿ ಮತ್ತೊಂದು ಕೇಸ್​ ರಿಜಿಸ್ಟರ್​ ಮಾಡಿದ್ದೆವು. ಡಿವೈಎಸ್​ಪಿ ಶಾಂತವೀರ್​ ರವರು ತನಿಖೆಯ ನೇತ್ವತ್ವವನ್ನು ವಹಿಸಿಕೊಂಡು ಯಾಸಿನ್​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆವು. ಈ ಪ್ರಕರಣದಲ್ಲಿ ಶಾರೀಕ್​ ಎ ಎನ್​ ಆರೋಪಿಯಾಗಿದ್ದು, ಮಾಜ್​ ಎಂಬ ಇನ್ನೊಬ್ಬ ಆರೋಪಿಯನ್ನು ನಾವು ಬಂಧಿಸಿದ್ದೇವೆ.ಈ ಪ್ರಕರಣದಲ್ಲಿ ತನಿಖೆ ಸಂದರ್ಭದಲ್ಲಿ ನಮಗೆ ಕಂಡು ಬಂದ ಅಂಶಗಳು ಬಹಳಷ್ಟಿವೆ.

ಐಸಿಸ್​ಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದ ಶಾರೀಖ್​ ಮಾಜ್ ಹಾಗೂ ಯಾಸಿನ್ ಮಾಜ್​ ಹಾಗೂ ಯಾಸೀನ್​ ಪಿಯುಸಿ ಓದುವ ಸಂದರ್ಭದಲ್ಲಿಯೇ ಇಬ್ಬರು ಪರಿಚಯವಾಗಿದ್ದರು, ಆ ಸಂದರ್ಭದಲ್ಲಿ ಇಬ್ಬರು ಸಹ ಮಂಗಳೂರಿಗೆ ಹೋಗಿದ್ದರು.
ಇವರಿಬ್ಬರು ಐಸಿಸ್​ಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದ ಶಾರೀಖ್​ ಮಾಜ್ ಹಾಗೂ ಯಾಸಿನ್ ಜೊತೆ ಮಾತನಾಡಿ ಅವರಿಗೆ ನಿಷೇಧಿತ ಸಂಘಟನೆಯ ಬಗ್ಗೆ ಹೇಳುತ್ತಾನೆ.

ಐಸಿಸ್​ನ ಅಲ್​ಹೈಕ್​ನ ಮೀಡಿಯಾ ಸೆಂಟರ್​ನ ಯೂಟ್ಯೂಬ್​, ಟೆಲಿಗ್ರಾಂನ ಸದಸ್ಯನಾಗಿದ್ದ ಯಾಸಿನ್​. ಈ ಹಿನ್ನೆಲೆಯಲ್ಲಿ ಐಸಿಸ್​ ನಿಂದ ಸಪ್ಲೆಯಾಗುತ್ತಿದ್ದ ಮೆಟಿರಿಯಲ್​ಗಳು ಯಾಸಿನ್ ಹಾಗೂ ಮಾಜ್​ನ್ನ ತಲುಪುತ್ತಿರುತ್ತದೆ. ಶಾರೀಖ್​ನಿಂದ ಲಿಂಕ್​ ಹೊಂದಿದ್ದಾರೆ ಎಂಬ ಕಾರಣಕ್ಕೆ ಯಾಸಿನ್ ಹಾಗೂ ಮಾಜ್​ಗೆ ಮೆಟಿರಿಯಲ್​ಗಳು ಸಪ್ಲೆಯಾಗುತ್ತಿರುತ್ತದೆ. ಈ ಮೂವರು ಆರೋಪಿ ಐಸಿಸ್ ನ ಐಡಿಯಾಲಜಿಯನ್ನೇ ಫಾಲೋ ಮಾಡುತ್ತಿರುತ್ತಾರೆ.

ಈ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವಕ್ಕೆ ಬರಬೇಕು , ಷರಿಯಾ ಕಾನೂನು ಇಲ್ಲಿ ಅನುಷ್ಟಾನ ಆಗಬೇಕು:
ಭಾರತ ದೇಶಕ್ಕೆ ಬ್ರಿಟಿಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಿಜವಾಗಲು ಸ್ವಾತಂತ್ರ್ಯ ಸಿಕ್ಕಿಲ್ಲ. ನಿಜವಾಗಲೂ ಸ್ವಾತಂತ್ರ್ಯ ಸಿಗಬೇಕು ಎಂದರೇ ಈ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವಕ್ಕೆ ಬರಬೇಕು , ಷರಿಯಾ ಕಾನೂನು ಇಲ್ಲಿ ಅನುಷ್ಟಾನ ಆಗಬೇಕು ಎಂಬ ವಿಚಾರ ಹೊಂದಿರುತ್ತಾರೆ. ಐಸಿಸ್​ ಇದೇ ವಿಚಾರದಲ್ಲಿ ನಡೆಸಿದ ಕೃತ್ಯವನ್ನು ಗಮನಿಸಿ, ಅದೇ ರೀತಿ ನಾವು ಕೂಡ ಇದೇ ರೀತಿಯಲ್ಲಿ ಮಾಡಬೇಕು ಎಂದು ಷಡ್ಯಂತ್ರ ಮಾಡುತ್ತಾರೆ. ಸ್ಫೋಟಕಗಳ ತಯಾರಿ ವಿಡಿಯೋ, ತಲೆ ಕಡಿಯವ ವಿಡಿಯೋಗಳಂ ಉದ್ರಿಕ್ತ ವಿಡಿಯೋಗಳನ್ನು ನೋಡಿ ಅದೇ ರೀತಿಯಲ್ಲಿ ನಾವು ಮಾಡಬೇಕು ಎಂದು ಪ್ರಚೋದನೆಗೆ ಒಳಗಾಗಿ ಕೃತ್ಯಕ್ಕೆ ಇಳಿಯುತ್ತಾರೆ.

ಬಾಂಬ್​ ತಯಾರಿ ಹೇಗಿತ್ತು ಗೊತ್ತಾ?
ಐಸಿಸ್​ನಿಂದ ಪ್ರಚೋದನೆಗೆ ಒಳಗಾದ ಶಂಕಿತರು ಬಾಂಬ್​ ತಯಾರಿಗೆ ಮುಂದಾಗುತ್ತಾರೆ. ಇದಕ್ಕಾಗಿ ಯಾಸಿನ್​ನನ್ನು ನಿಯೋಜಿಸುತ್ತಾರೆ. ಯಾಸಿನ್​ಗೆ ಟೈಮರ್​ ರಿಲೇ ಸರ್ಕಿಟ್​ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರುತ್ತದೆ. ಈತ ಎಲೆಕ್ಟ್ರಿಲ್ ಇಂಜಿನಿಯರ್ ಆಗಿದ್ದ ಕಾರಣಕ್ಕೆ ಬಾಂಬ್ ತಯಾರಿ ಈತನನ್ನು ನಿಯೋಜಿಸುತ್ತಾರೆ. ಅಲ್ಲದೆ ಆತ ಅಮೇಜಾನ್​ನಿಂದ ಸರ್ಕಿಟ್​ನ್ನು ಖರೀದಿ ಮಾಡುತ್ತಾನೆ. ಲೋಕಲ್​ನಲ್ಲಿಯೇ ಸ್ಫೋಟಕಕ್ಕೆ ಬೇಕಾಗುವ ವಸ್ತುಗಳನ್ನು ಕಚ್ಚಾವಸ್ತುಗಳನ್ನು ಸಂಗ್ರಹಿಸಿದ್ದರು ಆರೋಪಿಗಳು ಬ್ಯಾಟರಿ, ಸ್ವಿಚ್​, ವಯರ್, ಮ್ಯಾಚ್ ವಾಕ್ಸ್​ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಬಾಂಬ್ ತಯಾರಿಗೆ ಮುಂದಾಗುತ್ತಾರೆ.

ಈ ನಡುವೆ ಅಲ್ಯೂಮಿನಿಯಂ ಪೌಡರ್​ಗಾಗಿ ಹುಡುಕಾಡುತ್ತಾರೆ. ಆದರೆ ಅವರಿಗೆ ಅದು ಎಲ್ಲಿಯು ಸಿಗುವುದಿಲ್ಲ. ಹೀಗಾಗಿ ಲೋಕಲ್​ನಲ್ಲಿ ಸಿಕ್ಕವಸ್ತುಗಳಿಂದಲೇ ಬಾಂಬ್​ ತಯಾರಿಗೆ ಮುಂದಾಗುತ್ತಾರೆ. ನಂತರ ಸ್ಥಳೀಯ ವಸ್ತುಗಳಿಂದಲೇ ಸ್ಫೋಟಕ ಸಿದ್ದಪಡಿಸಿಕೊಂಡು ಗುರುಪುರದ ಬಳಿಯಲ್ಲಿ ಯಾಸೀನ್​ ಮನೆಗೆ ಹತ್ತಿರವಾದ ಪ್ರದೇಶದಲ್ಲಿ ಟ್ರಯಲ್​ಗೆ ಸಿದ್ಧವಾಗುತ್ತಾರೆ. ಆ ಸ್ಥಳವನ್ನು ಸ್ಥಳೀಯರು ಕೆಮ್ಮಣ್ಣು ಗುಂಡಿ ಎಂದು ಕರೆಯುತ್ತಾರೆ. ಅಲ್ಲಿ ಟ್ರಯಲ್ ಬ್ಲಾಸ್ಟ್​ಗೆ ಮುಂದಾಗಿದ್ದರು.

ಕಳೆದ ಆಗಸ್ಟ್ ತಿಂಗಳಲ್ಲಿ ಟ್ರಯಲ್ ಬ್ಲಾಸ್ಟ್ ಯಶಸ್ವಿ
ಕಳೆದ ಆಗಸ್ಟ್ ತಿಂಗಳಿನಲ್ಲಿ (ಸ್ಪಷ್ಟ ದಿನಾಂಕವಿನ್ನು ಲಭ್ಯವಾಗಿಲ್ಲ) ಟ್ರಯಲ್​ ಬ್ಲಾಸ್ಟ್​ನ್ನು ಯಶಸ್ವಿಯಾಗಿ ಮಾಡುತ್ತಾರೆ.ಇದೇ ರೀತಿಯಲ್ಲಿ ಹಲವು ರೀತಿಯಲ್ಲಿ ಟ್ರಯಲ್​ ಬ್ಲಾಸ್ಟ್​ ಮಾಡಲು ಸಿದ್ಧತೆ ಮಾಡಿಕೊಂಡು ಮೆಟಿರಿಯಲ್​ ಸಂಗ್ರಹಿಸಲು ಮುಂದಾಗಿದ್ದಾರೆ.
ಮಂಗಳೂರಿನ ಒಂದು ಪ್ರದೇಶ ಹಾಗೂ ಗುರುಪುರದ ಒಂದು ಪ್ರದೇಶದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದ ಆರೋಪಿಗಳು ಸರ್ಕಿಟ್​ಗಾಗಿ ಕಾಯುತ್ತಿರುತ್ತಾರೆ. ಆದರೆ ಅದು ಬರುವುದು ವಿಳಂಬವಾಗಿರುತ್ತದೆ. ಇದೆಲ್ಲದರ ನಡುವೆ ತಮ್ಮ ಸಿದ್ಧಾಂತವನ್ನು ಒಪ್ಪದ ಖಾಪೀರರ ಜೀವ ಹಾನಿ ಮಾಡಬೇಕು ಎಂಬ ಕಾರಣಕ್ಕೆ ದೊಡ್ಡದೊಂದು ಸ್ಫೋಟಕ ತಯಾರಿಸಿ, ಸ್ಪೋಟಿಸಬೇಕು ಎಂದು ಚಿಂತಿಸುತ್ತಿರುತ್ತಾರೆ.

Suspected Terrorists: ಶಂಕಿತ ಉಗ್ರ ಶಾರೀಕ್‌ಗಾಗಿ ತೀವ್ರ ಶೋಧ

ಈ ಸಮಯದಲ್ಲಿ ನಾವು ಅವರನ್ನು ತನಿಖೆಗೆ ಒಳಪಡಿಸುತ್ತೇವೆ. ಅಲ್ಲದೆ 11 ಕಡೆಗಳಲ್ಲಿ ಆರೋಪಿಗಳ ಮನೆ, ಸಂಬಂಧಿಕರ ಮನೆ, ಅವರು ಕೃತ್ಯವೆಸಗಲು ಬಳಸುತ್ತಿದ್ದ ಜಾಗಗಳ ಮೇಲೆ ದಾಳಿ ಮಾಡುತ್ತೇವೆ,.ಈ ಸಂದರ್ಭದಲ್ಲಿ ಒಟ್ಟು 14 ಮೊಬೈಲ್‌ಗಳು ಮತ್ತು 1 ಡಾಂಗಲ್ 2 ಲ್ಯಾಪ್‌ಟಾಪ್‌ಗಳು, | ಪೆನ್‌ಡ್ರ ವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್‌ ಗ್ಯಾಡ್‌ಟ್ಸ್‌ಗಳು I ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್‌ನ ಅವಶೇಷಗಳು ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು – ರಿಲೆ ಸರ್ಕಿಟ್, ಬಲ್ಬಗಳು, ಮ್ಯಾಚ್ ಬಾಕ್ಸ್‌ಗಳು, ವೈರ್‌ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು ಇತ್ಯಾದಿ. ತಮ್ಮ ಸಿದ್ಧಾಂತವನ್ನು ಎಲ್ಲೆಡೆ ಹರಡಲು ರಾಷ್ಟ್ರೀಯ ಧ್ವಜವನ್ನು ಸುಟ್ಟಿದ್ದಾರೆ. ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು.

ಉಗ್ರ ನಂಟು: ಶಿವಮೊಗ್ಗಕ್ಕೆ ಕೇಂದ್ರ ತಂಡ

ಸದ್ಯ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಇನ್ನಷ್ಟು ತನಿಖೆ ನಡೆಸಬೇಕಿದೆ. ಇನ್ನು ಶಾರೀಖ್ ಅರೆಸ್ಟ್ ಆದರೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ. ಈ ಆಪರೇಷನ್​ ಟೀಂನಲ್ಲಿ ಶಿವಮೊಗ್ಗ ಉಪವಿಭಾಗದ ಡಿವೈಎಸ್​ಪಿ ಬಾಲರಾಜ್ ಟೀಂ ಹಾಗೂ ತೀರ್ಥಹಳ್ಳಿ ಡಿವೈಎಸ್​ಪಿ ಶಾಂತವೀರ್ ಹಾಗೂ ಎಎಸ್​ಪಿ ಭದ್ರಾವತಿಯವರ ಟೀಂ ಕೆಲಸ ಮಾಡಿದೆ. ಹಾಗೂ ಈ ಪ್ರಕರಣ ಸಂಬಂಧ ಶಿವಮೊಗ್ಗ ಅಡಿಷನಲ್ ಎಸ್​ಪಿ ಗಂಭೀರವಾಗಿ ಮೇಲ್ವಿಚಾರಣೆ ನಡೆಸಿದ್ದಾರೆ.