Asianet Suvarna News Asianet Suvarna News

ಸಲಿಂಗಕಾಮ ಕೇಸಲ್ಲಿ ಸೂರಜ್ ರೇವಣ್ಣ 8 ದಿನ ಸಿಐಡಿ ವಶಕ್ಕೆ

ಜೆಡಿಎಸ್ ಕಾರ್ಯಕರ್ತನನ್ನು ಸಲಿಂಗಕಾಮಕ್ಕೆ ಬಳಿಸಕೊಂಡ ಆರೋಪಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು 8 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.

Suraj Revanna in CID custody for 8 days in homosexuality case sat
Author
First Published Jun 24, 2024, 3:30 PM IST

ಬೆಂಗಳೂರು (ಜೂ.24): ಹಾಸನದ ಜೆಡಿಎಸ್ ಕಾರ್ಯಕರ್ತನನ್ನು ಸಲಿಂಗಕಾಮಕ್ಕೆ ಬಳಕೆ ಮಾಡಿಕೊಂಡ ಆರೋಪದಲ್ಲಿ ನಿನ್ನೆ ಬಂಧನವಾಗಿದ್ದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು 8 ದಿನಗಳ ಕಾಲ ಅಪರಾಧ ತನಿಖಾ ಇಲಾಖೆ (Crime Investigation Department-ಸಿಐಡಿ) ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.

ಸೂರಜ್ ರೇವಣ್ಣ ವಿರುದ್ಧ ಹಾಸನದಲ್ಲಿ ಸಲಿಂಗಕಾಮದ ಕೇಸ್ ದಾಖಲಾಗುತ್ತಿದ್ದಂತೆ ಆತನನ್ನು ಬಂಧಿಸಿದ್ದ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ರಾಜ್ಯ ಸರ್ಕಾರದಿಂದ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ನೀಡಲಾಗಿತ್ತು. ಇದರ ಬೆನ್ನಲ್ಲಿಯೇ ನಿನ್ನೆ ಸಂಜೆ ವೇಳೆಗೆ ಹಾಸನದಿಂದ ಬೆಂಗಳೂರಿಗೆ ಸೂರಜ್ ರೇವಣ್ಣನನ್ನು ಕರೆತಂದಿದ್ದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಇಟ್ಟಿದ್ದರು. ಇಂದು ಮಧ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸಿದ ಸಿಐಡಿ ಪೊಲೀಸರಿ ಕೇಸಿನ ಸಂಬಂಧ ವಿಚಾರಣೆ ನಡೆಸುವುದಕ್ಕಾಗಿ 14 ದಿನ ವಶಕ್ಕೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದರು. ಆದರೆ, ನ್ಯಾಯಾಧೀಶರು 8 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.

ಸಲಿಂಗ ಕಾಮ ಕೇಸಲ್ಲಿ ಸೆಂಟ್ರಲ್ ಜೈಲ್ ಸೇರಿದ ಸೂರಜ್ ರೇವಣ್ಣಗೆ ಲಿಂಗತ್ವ, ಲೈಂಗಿಕ ಸಾಮರ್ಥ್ಯ ಪರೀಕ್ಷೆ

ಸಿಐಡಿ ಪೊಲೀಸರು ಸೂರಜ್ ರೇವಣ್ಣನನ್ನು ಪರಪ್ಪನ ಅಗ್ರಹಾರದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ 42 ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ನ್ಯಾಯಾಧೀಶರ ಮುಂದೆ ಕೇಸಿನ ಸಂಬಂಧಪಟ್ಟಂತೆ ವಿಚಾರಣೆ ಮಾಡುವುದಕ್ಕೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶಿವಕುಮಾರ್ ಅವರ ಪೀಠವು 8 ದಿನ ಸಿಐಡಿ ಪೊಲೀಸ್ ಕಸ್ಟಡಿಗೆ (ಜುಲೈ 1 ರವರೆಗೆ) ನೀಡಿ ಕೋರ್ಟ್ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಸಿಐಡಿ ಪೊಲೀಸರು ಸೂರಜ್ ರೇವಣ್ಣನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲು ಮುಂದಾಗಿದ್ದಾರೆ.ಹೀಗಾಗಿ, ಇವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಿದ್ದಾರೆ. ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್, ಫಾರೆನ್ಸಿಕ್ ತಜ್ಞರು ಮತ್ತು ಪಿಜಿಷಿಯನ್  ವೈದ್ಯರಿಂದ  ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತದೆ. ಜೊತೆಗೆ, ಮನೋ ವೈದ್ಯರಿಂದ ಕೂಡ ಸಂತ್ರಸ್ತನನ್ನ ಎಗ್ಸಾಮಿನೇಷನ್ ಮಾಡಿಸಲಿದ್ದಾರೆ. 

ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್ ಕೊಟ್ಟ ಹಣದಲ್ಲಿ ಪವಿತ್ರಾಗೌಡ ಮನೆ ಖರೀದಿ?

ಸೂರಜ್ ರೇವಣ್ಣಗೆ ಯಾವ ರೀತಿ ಮೆಡಿಕಲ್ ಟೆಸ್ಟ್ ಆಗಲಿದೆ ?
1. ಕೂದಲುಗಳನ್ನ ಪರೀಕ್ಷೆಗೆ ಒಳಪಡಿಸಲು ಕೂದಲನ್ನ ಸಂಗ್ರಹ ಮಾಡಿಕೊಳ್ಳಲಿದ್ದಾರೆ.
2. ಸಂತ್ರಸ್ತ ಯುವಕನ ದೇಹದ ಮೇಲೆ ಕಚ್ಚಿದ ಗುರುತುಗಳು ಇದ್ದರೆ ಹಲ್ಲಿನ ಮಾರ್ಕ್ ಅನ್ನು ಮಾಡಿ  ಲೈಂಗಿಕ ದೌರ್ಜನ್ಯ ನಡೆಸಿರುವ ಸೂರಜ್ ರೇವಣ್ಣ  ಹಲ್ಲಿಗೆ ಹೋಲಿಕೆ ಮಾಡಿ ಪರೀಕ್ಷಿಸಲಿದ್ದಾರೆ.
3. ಸೂರಜ್ ರೇವಣ್ಣಗೆ ಲಿಂಗತ್ವ ಪರೀಕ್ಷೆ.
4. ಅಸಹಜ ಲೈಂಗಿಕ ಕ್ರಿಯೆಗೆ ಸಮರ್ಥನ ಅಥವಾ ಈ ರೀತಿಯ ಅ ಸಹಜ ಲೈಂಗಿಕ ಕ್ರಿಯೆ ಇದೇ ಮೊದಲ ಅಂತಾ ಪರೀಕ್ಷೆ ಮಾಡ್ತಾರೆ.
5. ಕಿಡ್ನಿ ಮತ್ತು ವೃಷಣಗಳ ಪರೀಕ್ಷೆಗಳನ್ನ ಕೂಡ ನಡೆಸಲಿದ್ದಾರೆ.
6. ಲೈಂಗಿಕವಾಗಿ ಸಮರ್ಥತೆ ಬಗ್ಗೆ ಪರೀಕ್ಷೆ.
7. ಫಾರೆನ್ಸಿಕ್ ತಙ್ಞರಿಂದ ಕೂದಲು, ಬಟ್ಟೆ ಮತ್ತು ಕೆಲವೊಂದು ವಸ್ತುಗಳನ್ನ ಪರೀಕ್ಷೆಗೆ ಒಳಪಡಿಸ್ತಾರೆ.
8. ಡಿಎನ್ ಎ ಟೆಸ್ಟ್ ಕೂಡ ಮಾಡಲಿದ್ದಾರೆ.

Latest Videos
Follow Us:
Download App:
  • android
  • ios