ಶಾಲಾ-ಕಾಲೇಜು ಆರಂಭದ ಮೊದಲ ದಿನವೇ ವಿದ್ಯಾರ್ಥಿ ದುರ್ಮರಣ
ಕೊರೋನಾ ಹಿನ್ನೆಲೆಯಲ್ಲಿ ಕಳೆದ 8 ತಿಂಗಳುಗಳ ಬಳಿಕ ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಆದ್ರೆ, ಶಾಲೆ ಪ್ರಾರಂವಾದ ದಿನವೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ತುಮಕೂರು, (ಜ.01): ಪ್ರಸಕ್ತ ಸಾಲಿನ ಶಾಲಾ-ಕಾಲೇಜು ಆರಂಭದ ದಿನವೇ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯು ಚನ್ನರಾಯಪಟ್ಟಣ ತಾಲೂಕಿನ ಚೀಚಗೊಂಡನಹಳ್ಳಿ ಗ್ರಾಮದವ. ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ನಲ್ಲಿ ಮುಚ್ಚಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಅಂದರೆ ಹೊಸ ವರ್ಷ(2021)ದ ಮೊದಲ ದಿನವಾದ ಶುಕ್ರವಾರ ಪುನಾರಂಭಗೊಂಡಿದೆ.
ಶಾಲಾ-ಕಾಲೇಜುಗಳು ಆರಂಭ: ವಿದ್ಯಾರ್ಥಿಗಳಿಗೆ ವಿಶೇಷ ಸ್ವಾಗತ ಕೋರಿದ ಶಿಕ್ಷಕರು
ಈ ಹಿನ್ನೆಲೆಯಲ್ಲಿ ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ ಶಶಾಂಕ್ (20) ಕಾಲೇಜಿಗೆ ಬರುತ್ತಿದ್ದ. ಮಾರ್ಗಮಧ್ಯೆ ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಶಶಾಂಕ್ ಮೃತಪಟ್ಟಿದ್ದಾನೆ.