ಬೆಂಗಳೂರು(ಡಿ.14): ಸ್ಪಾ ಕಂಪನಿಯಲ್ಲಿ ಎಸ್ಕಾರ್ಟ್‌ ಸರ್ವೀಸ್‌ ನೌಕರಿ ಕೊಡಿಸುವುದಾಗಿ ಯುವಕನಿಗೆ ನಂಬಿಸಿದ ಅಪರಿಚಿತರು, 1 ಲಕ್ಷ ಹಣ ಹಾಕಿಸಿಕೊಂಡು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಮಹದೇವಪುರ ನಿವಾಸಿ ವಿಶ್ವನಾಥ್‌ ಎಂಬುವರು ನೀಡಿದ ದೂರಿನ ಮೇರೆಗೆ ಅಮಿತ್‌, ನಿಖಿತಾ ಹಾಗೂ ಪ್ರಿಯಾ ಶರ್ಮಾ ಎಂಬುವರ ವಿರುದ್ಧ ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾಹ ಆಗೋದಾಗಿ ನಂಬಿಸಿ ವಂಚನೆ: ಕಂಗಾಲಾದ ಯುವತಿ

ವಿಶ್ವನಾಥ್‌ ಕೆಲಸ ಹುಡುಕಲು ಆನ್‌ಲೈನ್‌ನಲ್ಲಿ ಸ್ವವಿವರ ಅಪ್‌ಲೋಡ್‌ ಮಾಡಿದ್ದರು. ರಿಚ್‌ ಸ್ಪಾ ಕಂಪನಿಯಲ್ಲಿ ಕೆಲಸ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಮಿತ್‌ ಎಂಬುವರಿಗೆ ಕರೆ ಮಾಡಿದಾಗ ‘ಎಸ್ಕಾಟ್ಸ್‌ರ್‍ ಸರ್ವೀಸ್‌’ ನೌಕರಿಗೆ ನೇಮಿಸಿಕೊಳ್ಳುವುದಾಗಿ ಹೇಳಿದ್ದ. ದಾಖಲೆ ಸಿದ್ಧಪಡಿಸಲು ಒಂದು ಲಕ್ಷ ಸಂದಾಯ ಮಾಡಿಸಿಕೊಂಡಿದ್ದ. ಬಳಿಕ ನಿಖಿತಾ ಮತ್ತು ಪ್ರಿಯಾ ಶರ್ಮಾ ಎಂಬುವರು ಕರೆ ಮಾಡಿ ಮತ್ತೆ 18 ಸಾವಿರ ಪಾವತಿಸುವಂತೆ ಒತ್ತಾಯಿಸಿದ್ದರು. ಮಸಾಜ್‌ ಬಾಯ್‌ ಕೆಲಸ ಮಾಡುವಂತೆ ಪೀಡಿಸಿದ್ದರು.