ಬೆಂಗಳೂರು(ಡಿ.13):  ವೈವಾಹಿಕ ಜಾಲತಾಣದಲ್ಲಿ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ ಯುವಕ ಮನೆ ನಿರ್ಮಾಣ ಮಾಡಲು ನಾಲ್ಕು ಲಕ್ಷ ರು.ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವೈಟ್‌ಫೀಲ್ಡ್‌ ನಿವಾಸಿ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಶಶಿಧರ್‌ ಜೋಶಿ ಎಂಬಾತನ ವಿರುದ್ಧ ವೈಟ್‌ಫೀಲ್ಡ್‌ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತ ಯುವತಿ ಪೋಷಕರು ಜತೆ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದಾಳೆ. ಮದುವೆಯಾಗಲು ವರನಿಗಾಗಿ ವೈವಾಹಿಕ ಜಾಲತಾಣದಲ್ಲಿ ಸ್ವವಿವರ ಹಂಚಿಕೊಂಡಿದ್ದರು. ಮ್ಯಾಟ್ರಿಮೋನಿಯಾದಲ್ಲಿ ಶಶಿಧರ್‌ ಜೋಶಿ ರಿಕ್ವೆಸ್ಟ್‌ ಕಳುಹಿಸಿದ್ದ. ತಾನು ಉತ್ತರ ಪ್ರದೇಶದ ರಾಯ್‌ಬರೇಲಿ ಊರಿನವನಾಗಿದ್ದು, ಜಯನಗರದಲ್ಲಿ ನೆಲೆಸಿದ್ದೇನೆ. 

ಕಡಿಮೆ ಬೆಲೆಗೆ ಗ್ಲೌಸ್‌ ನೀಡುವುದಾಗಿ 45 ಲಕ್ಷ ದೋಚಿದ ಸೈಬರ್‌ ಕಳ್ಳರು

ಮದುವೆಯಾಗುವುದಾಗಿ ನಂಬಿಸಿದ್ದ. ಇಂಟರ್‌ನ್ಯಾಷನಲ್‌ ಟ್ರೇಡರ್ಸ್‌’ ಹಾಗೂ ಕಸ್ಟಮ್‌ ಅಥಾರಿಟಿ ಆಕ್ಷನ್‌ ಗೋಲ್ಡ್‌’ ಹೆಸರಿನ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ನಿರ್ಧರಿಸಿದ್ದೇನೆ. ಎರಡು ದಿನದಲ್ಲಿ ಹಣ ವಾಪಸ್‌ ನೀಡುವುದಾಗಿ ಹೇಳಿದ್ದ. ಆರೋಪಿ ಮಾತು ನಂಬಿದ ಯುವತಿ, ಹಂತ ಹಂತವಾಗಿ ನಾಲ್ಕು ಲಕ್ಷ ಹಣವನ್ನು ಆರೋಪಿ ಖಾತೆಗೆ ವರ್ಗಾವಣೆ ಮಾಡಿದ್ದರು.