* ಮಹಿಳಾ ಪೊಲೀಸರ ಮೇಲೆಯೇ ಕೈಹಾಕಲು ಬಂದ ಕಾಮುಕ* ಮಾಸ್ಕ್  ಯಾಕೆ  ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೆ ಉದ್ಧಟತನ* ಉತ್ತರ  ಪ್ರದೇಶ ಮಹಿಳಾ ಪೊಲೀಸರ ಮೇಲೆ ದೌರ್ಜನ್ಯ

ಉತ್ತರ ಪ್ರದೇಶ (ಜೂ. 25) ಮಾಸ್ಕ್ ಹಾಕದ ವ್ಯಕ್ತಿಯನ್ನು ಮಹಿಳಾ ಪೊಲೀಸರು ತಡೆದು ಪ್ರಶ್ನೆ ಮಾಡಿದ್ದಾರೆ. ಆದರೆ ಈ ವ್ಯಕ್ತಿ ಮಹಿಳಾ ಪೊಲೀಸರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. 

ಆರೋಪಿ ಮೊಹಮದ್ ಜೈದ್ ಎಂಬಾತನ ಬಂಧನವಾಗಿದೆ. ಹತ್ತು ವರ್ಷದ ಬಾಲಕನೊಂದಿಗೆ ಬೈಕ್ ನಲ್ಲಿ ಮಾಸ್ಕ್ ಹಾಕದೆ ತೆರಳುತ್ತಿದ್ದ. ಈತನ ತಡೆದ ಮಹಿಳಾ ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಅವರ ಯೂನಿಫಾರ್ಮ್ ಗೆ ಕೈಹಾಕಿದ್ದಾನೆ.

15 ಬಾಲಕಿ ಮೇಲೆ ಹಲವಾರು ಸಾರಿ ಎರಗಿದ ಕಾಮುಕ ಇನ್ಸ್‌ಪೆಕ್ಟರ್‌ 

ಪುಂಡಾಟಿಕೆ ತೋರಿಸುವ ಕಾಮುಕರ ವಿರುದ್ಧ ಕ್ರಮಕ್ಕೆ ಇದ್ದ ರೋಮಿಯೋ ತಡೆ ತಂಡದ ಮಹಿಳಾ ಅಧಿಕಾರಿಗಳಿಗೆ ಈ ಕಾಮುಕ ಕಿರುಕುಳ ಕೊಟ್ಟಿದ್ದಾನೆ. ದೆಹಲಿ ಪೊಲೀಸರು ಸೋಶಿಯಲ್ ಮೀಡಿಯಾ ಮೂಲಕವೂ ಎಚ್ಚರಿಕೆ ನೀಡಿದ್ದಾರೆ. ಕೊರೋನಾ ಜಾಗೃತಿ ಮೂಡಿಸಲು ವಾರಿಯರ್ಸ್ ಗಳು ನಿರಂತರವಾಗಿ ಶ್ರಮಪಡುತ್ತಿದ್ದು ಇಂಥ ಘಟನೆಗಳು ತಲೆತಗ್ಗಿಸುವಂತೆ ಮಾಡುತ್ತಿವೆ.