ಬೆಂಗಳೂರು(ಆ.11): ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಮಲತಂದೆ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಈ ಸಂಬಂಧ ಕಾವಲ್‌ ಭೈರಸಂದ್ರ ನಿವಾಸಿ ಆರೋಪಿ ಸೈಯದ್‌ ಅಬ್ದುಲ್‌ ರಹೀಮ್‌ ಹಾಗೂ ಆತನ ಸಂಬಂಧಿಕರಾದ ಸೈಯದ್‌ ತುಫೈಲ್‌, ಫಾಜಿಲ್‌, ಅಬ್ದುಲ್‌ ರಶೀದ್‌ ಮತ್ತು ಮಜೀದ್‌ ಎಂಬುವರ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹಸೀನಾ (ಹೆಸರು ಬದಲಾಯಿಸಲಾಗಿದೆ) ಎಂಬುವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹಸೀನಾಗೆ ಮೂವರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ವಿವಾಹ ಮಾಡಿದ್ದರು. 23 ಮತ್ತು 21 ವರ್ಷದ ಇಬ್ಬರು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಪರಿಚಯವಾದ ಆರೋಪಿ ಸೈಯದ್‌ ಅಬ್ದುಲ್‌ ನನ್ನನ್ನು ವಿವಾಹವಾದರೆ, ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಈತನ ಮಾತು ನಂಬಿದ ಮಹಿಳೆ ಹತ್ತು ತಿಂಗಳ ಹಿಂದೆ ಆರೋಪಿಯನ್ನು ವಿವಾಹವಾಗಿದ್ದರು.

6 ವರ್ಷದ ಬಾಲಕಿಯ ರೇಪ್, ಗುಪ್ತಾಂಗಕ್ಕೆ ಗಂಭೀರ ಗಾಯ: ಜೀವನ್ಮರಣ ಸ್ಥಿತಿಯಲ್ಲಿ ಕಂದ!

ಮದುವೆಯಾದ ಬಳಿಕ ಆರೋಪಿ ತನ್ನ ಚಾಳಿ ತೆಗೆದಿದ್ದ. ಪುತ್ರಿಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪುತ್ರಿ ಚೀರಾಡಿದ್ದು, ಕೊಠಡಿಗೆ ತೆರಳಿದ ಪತ್ನಿ ಆರೋಪಿಯಿಂದ ಪುತ್ರಿಯನ್ನು ರಕ್ಷಣೆ ಮಾಡಿದ್ದಾರೆ. ನಾನು ನಿನ್ನನ್ನು ವಿವಾಹವಾಗಿದ್ದೆ, ನಿನ್ನ ಪುತ್ರಿಯರು ನನ್ನ ಜತೆ ಮಲಗಬೇಕು, ನಿನ್ನ ಮಕ್ಕಳು ನನ್ನ ಜೊತೆ ಮಲಗಬೇಕು ಇಲ್ಲದಿದ್ದರೆ, ನಿನಗೆ ತಲಾಕ್‌ ನೀಡುತ್ತೇನೆ ಎಂದು ಹೇಳಿದ್ದಾನೆ. ರಹೀಮ್‌ ಸಂಬಂಧಿಕರು ಕೂಡ ಆತನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮನೆ ಬಿಟ್ಟರೂ ಬಿಡದ ಪಾಪಿ

ಘಟನೆಯಿಂದ ನೊಂದ ಮಹಿಳೆ, ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಆದರೂ ಸುಮ್ಮನೆ ಬಿಡದ ಆರೋಪಿ ಕರೆ ಮಾಡಿ ನಿನ್ನ ಮಕ್ಕಳು ನನಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಆತನ ಸಂಬಂಧಿಕರು ಮನೆ ಬಳಿ ಬಂದು ಖಾಲಿ ಪೇಪರ್‌ಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಹಸೀನಾ ದೂರು ನೀಡಿದ್ದಾಳೆ.