Asianet Suvarna News Asianet Suvarna News

ದಾಬಸ್‌ಪೇಟೆ: ಓವರ್ ಟೇಕ್ ಮಾಡುವ ವಿಚಾರಕ್ಕೆ ಜಗಳ, ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಚಾಕು ಇರಿತ

ಬಸ್ ಚಾಲಕ ಶಿವಪ್ಪ, ವಾಹನ ಚಾಲಕ ಭಾಸ್ಕರ್ ರೆಡ್ಡಿಗೆ ಹಲ್ಲೆ ಮಾಡಿದ್ದರಿಂದ ಕೋಪಗೊಂಡ ಟಾಟಾ ಏಸ್ ಚಾಲಕ ವಾಹನದಲ್ಲಿದ್ದ ಚಾಕುವಿನಿಂದ ಬಸ್ ಚಾಲಕ ಶಿವಪ್ಪ ಮಡಿವಾಳರ ಹೊಟ್ಟೆಗೆ ತಿವಿದಿದ್ದಾನೆ. ಕೂಡಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿರ್ವಾಹಕರು, ಆರೋಪಿ ಭಾಸ್ಕರ್ ರೆಡ್ಡಿಯನ್ನು ಹಿಡಿದು ದಾಬಸ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Stabbed to KSRTC Bus Driver at Dabaspete in Bengaluru Rural grg
Author
First Published May 25, 2024, 12:04 PM IST

ದಾಬಸ್‌ಪೇಟೆ(ಮೇ.25):  ವಾಹನ ಓವರ್ ಟೆಕ್ ಮಾಡುವ ವಿಚಾರದಲ್ಲಿ ಟಾಟಾ ಏಸ್ ವಾಹನ ಚಾಲಕ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಡುವೆ ಜಗಳವಾಗಿ ಬಸ್ ಚಾಲಕನಿಗೆ ವಾಹನ ಚಾಲಕ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶಿವಪ್ಪ ಮಡಿವಾಳ(40) ಹಲ್ಲೆಗೊಳಗಾದ ಚಾಲಕ. ಭಾಸ್ಕರ್‌ರೆಡ್ಡಿ (32) ಹಲ್ಲೆ ಮಾಡಿದ ವಾಹನ ಚಾಲಕ. ಮೇ 24ರಂದು ಬೆಳಗಿನ ಜಾವ 4.30 ಗಂಟೆಗೆ ಕೊಪ್ಪಳದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ಹಾಲು ಸಾಗಿಸುವ ಟಾಟಾ ಏಸ್ ಚಾಲಕನ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ದಾಬಸ್‌ಪೇಟೆ ಸಮೀಪದ ಮೇಲೆ ಜಗಳವಾಗಿದೆ. ನಂತರ ಟಾಟಾ ಏಸ್ ಚಾಲಕ ದಾಬಸ್‌ಪೇಟೆ ಬಳಿಯ ಪ್ಲೈ ಓವರ್ ರಸ್ತೆ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಅಡ್ಡಹಾಕಿದ್ದು, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.

ಹುಬ್ಬಳ್ಳಿ: ನೇಹಾ, ಅಂಜಲಿ ಹಂತಕರ ಪರ ವಕಾಲತ್ತು ವಹಿಸಲು ವಕೀಲರೇ ಸಿಗುತ್ತಿಲ್ಲ..!

ಬಸ್ ಚಾಲಕ ಶಿವಪ್ಪ, ವಾಹನ ಚಾಲಕ ಭಾಸ್ಕರ್ ರೆಡ್ಡಿಗೆ ಹಲ್ಲೆ ಮಾಡಿದ್ದರಿಂದ ಕೋಪಗೊಂಡ ಟಾಟಾ ಏಸ್ ಚಾಲಕ ವಾಹನದಲ್ಲಿದ್ದ ಚಾಕುವಿನಿಂದ ಬಸ್ ಚಾಲಕ ಶಿವಪ್ಪ ಮಡಿವಾಳರ ಹೊಟ್ಟೆಗೆ ತಿವಿದಿದ್ದಾನೆ. ಕೂಡಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿರ್ವಾಹಕರು, ಆರೋಪಿ ಭಾಸ್ಕರ್ ರೆಡ್ಡಿಯನ್ನು ಹಿಡಿದು ದಾಬಸ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಸ್ ಚಾಲಕನಿಗೆ ದಾಬಸ್‌ಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭಾಸ್ಕರರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios