* ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದ ಘಟನೆ* ಜು.19 ಮತ್ತು 22 ರಂದು ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ* ಈ ಕುರಿತು ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 

ಮಹಾಲಿಂಗಪುರ(ಜು.12): ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಶನಿವಾರ ನಡೆದಿದೆ. ಸ್ಥಳೀಯ ಕಲ್ಪಡ ಗಲ್ಲಿಯ ಅಶೋಕ ಪರೀಟ ಇವರ ಮಗಳಾದ ಸ್ನೇಹಾ ಪರೀಟ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. 

ಜು.19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಸರಿಯಾಗಿ ಅಭ್ಯಾಸ ಮಾಡು ಎಂದು ಪೋಷಕರು ಹೇಳಿದ್ದರು. ಅದನ್ನೇ ಮನಸ್ಸಿಗೆ ತೆಗೆದುಕೊಂಡ ಸ್ನೇಹಾ ಶನಿವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. 

ಗೋವಾದಲ್ಲಿ ಕನ್ನಡಿಗರ ವ್ಯಥೆ... ಇಡೀ ಕುಟುಂಬ ನಿಗೂಢ ಸಾವು!

ಠಾಣಾಧಿಕಾರಿ ಎಸ್‌.ಎಸ್‌.ಘಾಟಗೆ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.