ಬೆಂಗಳೂರು(ಜೂ.19): ಆಸ್ತಿ ವಿಚಾರಕ್ಕೆ ಮಗ ಹಾಗೂ ಚಿಕ್ಕಪ್ಪ ಸೇರಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ನಗರದಲ್ಲಿ ನಡೆದಿದೆ. ಮಾಧವ ಕೊಲೆಯಾದ ದುರ್ದೈವಿಯಾಗಿದ್ದಾರೆ. ಹರಿಕೃಷ್ಣ, ಶಿವರಾಂ ಪ್ರಸಾದ್ ಎಂಬುವರೇ ಕೊಲೆ ಮಾಡಿಸಿದ ಪ್ರಮುಖ ಅರೋಪಿಗಳಾಗಿದ್ದಾರೆ. ಈ ಸಂಬಂಧ 5 ಆರೋಪಿಗಳನ್ನ ತಲಘಟಪುರ ಪೊಲೀಸರು ಬಂಧಿಸಿದ್ದಾರೆ. 

ಏನಿದು ಘಟನೆ..?

100 ಕೋಟಿ ಆಸ್ತಿಗಾಗಿ ಮಗ ಹರಿಕೃಷ್ಣ ಚಿಕಪ್ಪ ಶಿವರಾಂ ಸೇರಿ ಐದು ವರ್ಷದಿಂದಲೇ ತಂದೆಯನ್ನೇ ಮುಗಿಸಲು ಪ್ಲಾನ್ ಮಾಡಿದ್ದರು. ಮೂರು ಬಾರಿ ಸ್ಕೆಚ್ ಮಿಸ್ ಅಗಿತ್ತು, ನಾಲ್ಕನೇ ಬಾರಿ ವೃದ್ಧನ ಕತ್ತು ಸೀಳಿದ್ದಾರೆ. ಕೊಲೆಗೂ ಮುನ್ನ ಈ ಆರೋಪಿಗಳು ಹಲವು ಬಾರಿ ವೃದ್ಧನ ಮೇಲೆ ಕೊಲೆಗೆ ಹಲವು ಬಾರಿ ಯತ್ನಗಳನ್ನ ನಡೆಸಿದ್ದರು. 

ಸಲಾಕೆಯಿಂದ ಹೊಡೆದು ತಂದೆಯನ್ನು ಕೊಂದ ಮಕ್ಕಳು

ಕೊಲೆಯಾದ ವೃದ್ಧ ಮಾಧವ ಬಳ್ಳಾರಿಯಲ್ಲಿ ಮೈನಿಂಗ್ ಹಾಗೂ ಹಲವು ಫ್ಯಾಕ್ಟರಿಗಳನ್ನ ಹೊಂದಿದ್ದರು. ಆ ಎಲ್ಲಾ ಫ್ಯಾಕ್ಟರಿಗಳಿಗೂ ಮಾಧವ ಅವರೇ ಎಂಡಿ ಅಗಿದ್ದರು. ಹೀಗಾಗಿ ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ಮಗ ಹರಿಕೃಷ್ಣ ಚಿಕಪ್ಪ ಶಿವರಾಂ ಒತ್ತಾಯಿಸ್ತಿದ್ದರು ಎಂದು ಹೇಳಲಾಗಿದೆ. ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡು ಇಲ್ಲ ಎಲ್ಲಾ ಮಾರಿ ಹಣ ನೀಡುವಂತೆಯೂ ಒತ್ತಾಸುತ್ತಿದ್ದರು. ಇವರ ಬೆದರಿಕೆಗೆಳಿಗೆ ಮಾಧವ ಒಪ್ಪದಿದ್ದಾಗ 25 ಲಕ್ಷ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಈ ಸಂಬಂಧ ಏಳೂವರೆ ಲಕ್ಷ ಹಣವನ್ನ ಸುಪಾರಿ ಕಿಲ್ಲರ್ಸ್ ಗೆ ನೀಡಲಾಗಿತ್ತು

ಸುಪಾರಿ ಪಡೆದುಕೊ೦ಡಿದ್ದ ಖದೀಮರು ಫೆಬ್ರವರಿ 14 ರಂದು ತಲಘಟಪುರ ಠಾಣಾ ವ್ಯಾಪ್ತಿಯಲ್ಲಿ ವೃದ್ಧನನ್ನ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಸುಪಾರಿ ಪಡೆದು ಕೊಲೆ ಮಾಡಿದ್ದ 5 ಆರೋಪಿಗಳನ್ನ ಬಂಧಿಸಿದ್ದಾರೆ. ರಿಯಾಜ್ ಅಹಮ್ಮದ್, ಶಾರುಕ್ ಖಾನ್, ಸೈಯದ್ ಸಲ್ಮಾನ್, ಆದಿಲ್ ಖಾನ್, ಶಾಬಾಜ್ ನಜೀರ್ ಬಂಧಿತ ಆರೋಪಿಗಳಾಗಿದ್ದಾರೆ.  ಇವರಲ್ಲಿ ಇಬ್ಬರು ಗೋವಾದಲ್ಲಿ ತಲೆ ಮರೆಸಿಕೊಂಡಿದ್ದರು, ಇನ್ನುಳಿದ ಆರೋಪಿಗಳು ಬೆಂಗಳೂರಲ್ಲೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"