ಸೋಶಿಯಲ್ ಮೀಡಿಯಾದಲ್ಲಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಪುತ್ರ

Crime News: ಸೋಷಿಯಲ್‌ ಮೀಡಿಯಾ ಮೂಲಕ ಸುಪಾರಿ ಕೊಟ್ಟು ಹೆತ್ತ ತಂದೆಯನ್ನೇ ಮಗ ಕೊಲೆ ಮಾಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ 

Son gets father murdered after hiring killer through social media in Madhya Pradesh mnj

ಮಧ್ಯಪ್ರದೇಶ (ಜು. 25): ಸಾಮಾಜಿಕ ಮಾಧ್ಯಮದ ಮೂಲಕ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.  ಮಹೇಶ್ ಗುಪ್ತಾ (59) ಕೊಲೆಯಾದ ವ್ಯಕ್ತಿ. ಜುಲೈ 21-22 ರ ಮಧ್ಯರಾತ್ರಿಯಲ್ಲಿ ಗುಂಡಿಕ್ಕಿ ಮಹೇಶ್ ಗುಪ್ತಾ ಕೊಲೆ ಮಾಡಲಾಗಿದೆ.  ಪಿಚೋರ್ ಪಟ್ಟಣದ ತನ್ನ ಮನೆಯ ಕೊಠಡಿಯಲ್ಲಿ ಮಹೇಶ್ ಮಲಗಿದ್ದಾಗ ಕೊಲೆ ಮಾಡಲಾಗಿದೆ  ಎಂದು ಎಸ್ಪಿ ರಾಜೇಶ್ ಸಿಂಗ್ ಚಾಂಡೆಲ್ ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಿಹಾರ ಮೂಲದ ಅಜಿತ್ ಸಿಂಗ್, ಗುಪ್ತಾ ಅವರ ಮಗ ಅಂಕಿತ್ (32) ಮತ್ತು ಆತನ ಸ್ನೇಹಿತ ನಿತಿನ್ ಲೋಧಿ ಎಂದು ಗುರುತಿಸಲಾಗಿದೆ. ಮಗ ತನ್ನ ಮನೆಯ ನೆಲ ಮಹಡಿಯಲ್ಲಿ ಮಲಗಿದ್ದು ತಂದೆಯನ್ನು ಮೂರನೇ ಮಹಡಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹೀಗಾಗಿ ಅಪರಾಧದಲ್ಲಿ ಗುಪ್ತಾ ಮಗನ ಪಾತ್ರದ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಆನ್‌ಲೈನ್‌ನಲ್ಲಿ ಸುಪಾರಿ ಕಿಲ್ಲರ್‌ಗಾಗಿ ಹುಡುಕಾಟ: ವಿಚಾರಣೆ ವೇಳೆ ಅಂಕಿತ್‌ನ ಮದ್ಯದ ಚಟ ಮತ್ತು ಜೂಜಾಟ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ ಹಣ ನೀಡಲು ನಿರಾಕರಿಸಿದ್ದರಿಂದ ತನ್ನ ತಂದೆಯ ಮೇಲೆ ಕೋಪಗೊಂಡಿರುವುದಾಗಿ ತಿಳಿಸಿದ್ದಾನೆ.  ಸಿಟ್ಟಾದ ಅಂಕಿತ್ ಆನ್‌ಲೈನ್‌ನಲ್ಲಿ ಸುಪಾರಿ ಕಿಲ್ಲರ್‌ಗಾಗಿ ಹುಡುಕಾಟ ನಡೆಸಿದ್ದ.

ಬಳಿಕ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಬಿಹಾರದ 'ಅಜಿತ್ ಕಿಂಗ್' ಎಂಬ ಹೆಸರಿನ ಗ್ಯಾಂಗನ್ನು ತನ್ನ ತಂದೆಯನ್ನು ಅಪಹರಿಸಿ ಕೊಳ್ಳುವುದಕ್ಕಾಗಿ 1 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ಡ್ರಗ್‌ಗೆ ದಾಸನಾಗಿದ್ದ ಮಗನ ಕೊಂದು ದೇಹ ಪೀಸ್‌ ಪೀಸ್ ಮಾಡಿ ವಿವಿಧೆಡೆ ಬಿಸಾಕಿದ ತಂದೆ

ಈ ಸಂಚಿನಲ್ಲಿ ಆತ ತನ್ನ ಸ್ನೇಹಿತ ಲೋಧಿಯ ಸಹಾಯವನ್ನೂ ಪಡೆದಿದ್ದ. ಅಂಕಿತ್ ಮತ್ತು ಲೋಧಿ ನಂತರ ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ಸಿಂಗ್‌ನನ್ನು ಭೇಟಿಯಾಗಿ ಶಿವಪುರಿ ಜಿಲ್ಲೆಯ ಲಭೇದಾ ತಿರಹಾ ಪ್ರದೇಶದಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು.

ತಂದೆ ಹಣದ ಮೇಲೆ ಮಗನ ಕಣ್ಣು: ಲೋಧಿ  ಅಪರಾಧಕ್ಕೆ ಬಳಸಲಾದ ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ವ್ಯವಸ್ಥೆ ಮಾಡಿದ್ದ. ಜುಲೈ 21-22ರ ಮಧ್ಯರಾತ್ರಿ ಅಂಕಿತ್ ತನ್ನ ಹೆಂಡತಿ ಮತ್ತು ಮಗಳನ್ನು ನೆಲ ಅಂತಸ್ತಿನ ಇನ್ನೊಂದು ಕೋಣೆಯಲ್ಲಿ ಮಲಗಲು ಹೇಳಿದ್ದ. ಬಳಿಕ  ಹಂತಕನಿಗೆ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಮನೆಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದ. 

ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾತಕಿ..!

ಗುಪ್ತಾರನ್ನು ಕೊಲೆ ಮಾಡಿದ ನಂತರ, ಹಂತಕ ಹೊರಟು ಹೋಗುದ್ದು ಅಂಕಿತ್ ಮನೆಗೆ ಒಳಗಿನಿಂದ ಬೀಗ ಹಾಕಿಕೊಂಡಿದ್ದ. ಗುಪ್ತಾ ಪತ್ನಿ ಸುಮಾರು 20 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು ಮತ್ತು ಅವರು ತಮ್ಮ ಮಗನೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಇನ್ನು ಸೇನೆಯಲ್ಲಿದ್ದ ಅವರ ಇನ್ನೊಬ್ಬ ಮಗ ಅನಿಲ್ ಗುಪ್ತಾ ಆತ್ಮಹತ್ಯೆ ಮಾಡಿಕೊಂಡ ನಂತರ ಗುಪ್ತಾ ಇತ್ತೀಚೆಗೆ 1 ಕೋಟಿ ರೂಪಾಯಿ ಪರಿಹಾರವನ್ನು ಪಡೆದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ, ಗುಪ್ತಾ ಕೂಡ ಪಿಂಚಣಿ ಪಡೆಯುತ್ತಿದ್ದು ಈ ಹಣದ ಮೇಲೆ ಅಂಕಿತ್ ಕಣ್ಣಿಟ್ಟಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios