ಕದ್ದ ಹಣ ತಿಂಗಳಲ್ಲಿ ಮರಳಿಸುವುದಾಗಿ ಲೆಟರ್ ಇಟ್ಟು ಹೋದ 'ಪ್ರಾಮಾಣಿಕ' ಕಳ್ಳನಿವನು!
ತಮಿಳುನಾಡಿನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಕಳ್ಳತನ ಮಾಡಿದ ನಂತ್ರ ಕ್ಷಮೆ ಕೇಳಿದ್ದಲ್ಲದೆ ಹಣ, ಬಂಗಾರ ವಾಪಸ್ ಮಾಡಲು ಸಮಯ ತೆಗೆದುಕೊಂಡಿದ್ದಾನೆ. ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮಿಳುನಾಡಿನ ನಿವೃತ್ತ ಶಿಕ್ಷಕರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಅಂತ ಎಲ್ಲರಿಗೂ ಅನ್ನಿಸುತ್ತೆ. ಆದ್ರೆ ಪೊಲೀಸರು ಮನೆ ಪರಿಶೀಲಿಸಿದಾಗ ಸಿಕ್ಕ ನೋಟ್ ಎಲ್ಲರನ್ನು ಅಚ್ಚರಿಗೊಳಿಸಿದೆ. ಕಳ್ಳ, ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಲ್ಲದೆ, ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾನೆ. ಅಷ್ಟೇ ಅಲ್ಲ, ಈ ಹಣವನ್ನು ವಾಪಸ್ ಮಾಡುವ ಭರವಸೆ ನೀಡಿದ್ದಾನೆ. ಇನ್ನೊಂದು ತಿಂಗಳಲ್ಲಿ ಹಣ ವಾಪಸ್ ಮಾಡುವುದಾಗಿ ಚೀಟಿ ಬರೆದಿಟ್ಟು ಹೋಗಿದ್ದಾನೆ.
ಘಟನೆ ನಡೆದಿರೋದು ಚೆನ್ನೈ (Chennai) ನಿಂದ 604 ಕಿಮೀ ದೂರದಲ್ಲಿರುವ ಟುಟಿಕೋರಿನ್ ಜಿಲ್ಲೆಯಲ್ಲಿ. ನಿವೃತ್ತ ಶಿಕ್ಷಕ (Teacher) ರಾದ ಚಿತಿರೈ ಸೆಲ್ವಿನ್ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಬಾಳುವ ಆಭರಣಗಳ ಜೊತೆಗೆ 60,000 ರೂಪಾಯಿಯನ್ನು ಕದ್ದೊಯ್ಯಲಾಗಿದೆ. ಜೂನ್ 17ಕ್ಕೆ ದಂಪತಿ ಚೆನ್ನೈನಲ್ಲಿರುವ ತಮ್ಮ ಮಗನ ಮನೆಗೆ ಹೋಗಿದ್ರು. ಮನೆಯನ್ನು ನೋಡಿಕೊಳ್ಳುವಂತೆ ಒಬ್ಬ ಮಹಿಳೆಗೆ ಹೇಳಿ ಹೋಗಿದ್ರು.
ತುಮಕೂರು: ಏಳು ಪೊಲೀಸರನ್ನು ಹತ್ಯೆ ಮಾಡಿದ್ದ ನಕ್ಸಲ್ ಚಂದ್ರ ಬಂಧನ
ಮಂಗಳವಾರ ಕೆಲಸದಾಕೆ ನಿವೃತ್ತ ಶಿಕ್ಷಕರ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿದ್ದು ಕಣ್ಣಿಗೆ ಬಿದ್ದಿದೆ. ತಕ್ಷಣ ಆಕೆ ಪೊಲೀಸ (Police) ರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಪರಿಶೀಲನೆ ನಡೆಸಿದ್ದಾರೆ. ಕಳ್ಳ 60 ಸಾವಿರ ರೂಪಾಯಿ ನಗದನ್ನು ದೋಚಿದ್ದಾನೆ. ಇದ್ರ ಜೊತೆ ಚಿನ್ನದ ಎರಡು ಕಿವಿಯೋಲೆ, ಬೆಳ್ಳಿಯ ಕೆಲ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾನೆ.
ಪೊಲೀಸರಿಗೆ ಸಿಕ್ಕ ಚೀಟಿಯಲ್ಲಿ ಏನಿದೆ? : ಅನಿವಾರ್ಯ ಕಾರಣಕ್ಕೆ ಕಳ್ಳತನ ಮಾಡುವ ಅನೇಕ ಸಿನಿಮಾಗಳಿವೆ. ತೆರೆ ಮೇಲೆ ನಾವು ನೋಡುವ ಕಥೆಗಳು ರಿಯಲ್ ನಲ್ಲಿಯೂ ನಡೆಯುತ್ತದೆ. ಅದಕ್ಕೆ ಈ ಘಟನೆ ನಿದರ್ಶನ. ನಿವೃತ್ತ ಶಿಕ್ಷಕರ ಮನೆಯಲ್ಲಿ ಹಣ ಲೂಟಿ ಮಾಡಿದ ವ್ಯಕ್ತಿ ಚೀಟಿಯೊಂದನ್ನು ಇಟ್ಟು ಹೋಗಿದ್ದಾನೆ. ಅದರಲ್ಲಿ ಆತ ಶಿಕ್ಷಕರ ಕ್ಷಮೆ ಕೇಳಿದ್ದಾನೆ. ನನ್ನನ್ನು ಕ್ಷಮಿಸಿ. ನಾನು ಇದನ್ನು ಒಂದು ತಿಂಗಳಲ್ಲಿ ಹಿಂತಿರುಗಿಸುತ್ತೇನೆ. ನನ್ನ ಮನೆಯಲ್ಲಿ ಯಾರೋ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಿವಾರ್ಯ ಕಾರಣಕ್ಕೆ ಕಳ್ಳತನ ಮಾಡುತ್ತಿದ್ದೇನೆ ಎಂದು ಆತ ಚೀಟಿಯಲ್ಲಿ ಬರೆದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ವೃದ್ಧ ದಂಪತಿ, ಕಳ್ಳ ಕೊಟ್ಟ ಮಾತಿನಂತೆ ನಡೆದುಕೊಳ್ತಾನಾ ಎಂದು ಕಾಯ್ತಿದ್ದಾರೆ.
ಕಳ್ಳತನ ಮಾಡಿ ಕ್ಷಮೆ ಕೇಳಿದ ಘಟನೆ : ಇದಕ್ಕೂ ಮುನ್ನವೂ ಇಂಥ ಅನೇಕ ಘಟನೆಗಳು ಬೆಳಕಿಗೆ ಬಂದಿದೆ. ಇದಕ್ಕೂ ಮುನ್ನ ಒಡಿಶಾದ ಗೋಪಿನಾಥ ದೇವಸ್ಥಾನದಲ್ಲಿ ದೇವರ ಆಭರಣ ಕದ್ದಿದ್ದ ವ್ಯಕ್ತಿಯೊಬ್ಬ 9 ವರ್ಷಗಳ ನಂತ್ರ ಅದನ್ನು ಹಿಂತಿರುಗಿಸಿದ್ದನು. ಈ ಆಭರಣ ಕದ್ದ ಮೇಲೆ ದುಸ್ವಪ್ನಗಳು ನನ್ನನ್ನು ಕಾಡುತ್ತಿವೆ ಎಂದು ಆತ ನೋಟ್ ಬರೆದಿದ್ದ. ಅಲ್ಲದೆ, ಭಗವದ್ಗೀತೆ ಓದಿದ ಮೇಲೆ ನನಗೆ ಜ್ಞಾನೋದಯವಾಯಿತು ಎಂದಿದ್ದ.
ಬೆಂಗಳೂರು: ಕಾಲೇಜಿನ ಸೆಕ್ಯೂರಿಟಿ ಗಾರ್ಡ್‌ನನ್ನು ಇರಿದು ಕೊಂದ ವಿದ್ಯಾರ್ಥಿ ಅರೆಸ್ಟ್
ಈ ಹಿಂದೆ ಚೆನ್ನೈನ ಉಸಿಲಂಪಟ್ಟಿಯ ಸೂಪರ್ ಮಾರ್ಕೆಟ್ ನಲ್ಲಿಯೂ ಇಂಥ ಘಟನೆ ನಡೆದಿತ್ತು. 65,000 ಮೌಲ್ಯದ ವಸ್ತುಗಳು ಮತ್ತು 5,000 ರೂ ಮೌಲ್ಯದ ನಗದನ್ನು ದೋಚಿದ್ದ. ನಂತ್ರ ಮಾಲೀಕನ ಕ್ಷಮೆ ಕೇಳಿ ಒಂದು ಪತ್ರವನ್ನು ಬರೆದಿದ್ದ. ನೀವು ಕೇವಲ ಒಂದು ದಿನದ ಆದಾಯವನ್ನು ಕಳೆದುಕೊಂಡಿದ್ದೀರಿ, ಆದರೆ ಅದು ನನ್ನ ಮೂರು ತಿಂಗಳ ಆದಾಯಕ್ಕೆ ಸಮಾನವಾಗಿದೆ. ನಾನೊಬ್ಬ ಕೂಲಿ, ಅಸಹಾಯಕ. ನಾನು ನಿಮ್ಮ ಅಪರಾಧಿ. ನಾನು ನಿಮ್ಮ ಸೈಕಲ್ ತೆಗೆದುಕೊಳ್ಳುತ್ತಿದ್ದೇನೆ. ನನ್ನನು ಕ್ಷಮಿಸು. ನಾನು ಬರೇಲಿಗೆ ಹೋಗಬೇಕು. ನನಗೆ ಯಾವುದೇ ಮಾರ್ಗವಿಲ್ಲ ಮತ್ತು ಅಂಗವಿಕಲ ಮಗುವನ್ನು ಹೊಂದಿದ್ದೇನೆ ಎಂದು ಬರೆದಿದ್ದ.