ಐಪಿಎಲ್ ನಲ್ಲಿ ಆಡಲು ಅವಕಾಶ ಮಾಡಿಕೊಡುತ್ತೇವೆ/ ಯುವಕ ಮತ್ತು ಆತನ ಕುಟುಂಬಕ್ಕೆ ವಂವಚನೆ/ ಮೂವತ್ತು ಲಕ್ಷ ರೂ. ಕಳೆದುಕೊಂಡ ಕುಟುಂಬ/ ಕೆಕೆಆರ್ ಟೀಂ ಮ್ಯಾನೇಜ್ ಮೆಂಟ್ ತಮಗೆ ಗೊತ್ತು ಎಂದು ನಂಬಿಸಿದ ಕವಂಚಕರು

ಮುಂಬೈ(ಮೇ 03) ಇಂಡಿಯನ್ ಪ್ರೀಮಿಯಂ ಲೀಗ್ (ಐಪಿಎಲ್) ಆಟ ಆಡಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ ಯುವಕನಿಗೆ ಬರೋಬ್ಬರಿ 30 ಲಕ್ಷ ರೂ ವಂಚಿಸಲಾಗಿದೆ.

ಮುಂಬೈನ 18 ವರ್ಷದ ಯುವಕ ವಂಚನೆಗೆ ಒಳಗಾಗಿದ್ದಾನೆ. ನಟ ಶಾರುಖ್ ಖಾನ್ ಒಡೆತನದ ಐಪಿಎಲ್ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಲ್ಲಿ ಸ್ಥಾನ ನೀಡುತ್ತೇವೆ ಎಂದು ನಂಬಿಸಿದ್ದರು.

ಯುವಕನ ತಂದೆ ಮೈಕ್ರೋಫೈನಾನ್ಸ್ ಕಂಪನಿಗೆ ಉಪಾಧ್ಯಕ್ಷ. ಇವರ ಕುಟುಂಬ ಮುಲುಂಡ್‌ನಲ್ಲಿ ನೆಲೆಸಿದೆ. ಕರ್ನಾಟಕ ಸ್ಪೋರ್ಟ್ಸ್ ಕ್ಲಬ್‌ಗೆ ಜಾಯಿನ್ ಆಗಿರುವ ಯುವಕ ಪ್ರಾಕ್ಟೀಸ್ ಮಾಡುತ್ತಿದ್ದ.

ಈ ವರ್ಷದ ಆರಂಭದಲ್ಲಿ ಯುವಕ ಪುಷ್ಕರ್ ತಿವಾರಿ ಎಂಬುವರನ್ನು ಭೇಟಿ ಮಾಡಿದ್ದಾನೆ. ತಾನು ಹಿಮಾಚಲ ಪ್ರದೇಶದ ಪರವಾಗಿ ಕ್ರಿಕೆಟ್ ಆಡುತ್ತೇನೆ ಎಂದು ತಿವಾರಿ ಯುವಕನನ್ನು ನಂಬಿಸಿದ್ದಾನೆ . ಮಹಾರಾಷ್ಟ್ರದ ಪರವಾಗಿ ಆಡುವ ಯತ್ನ ಮಾಡಬೇಡ.. ಅಲ್ಲಿ ಸಮಸ್ಯೆಗಳಿವೆ ನಿನಗೆ ಬೇರೆ ತಂಡದಲ್ಲಿ ಸ್ಥಾನ ಮಾಡಿಕೊಡುತ್ತೇನೆ ಎಂಧು ನಂಬಿಸಿದ್ದಾರೆ.

ಸಿಎಸ್‌ಕೆ ತಂಡಕ್ಕೆ ಕೊರೋನಾಘಾತ; ಮೂವರಿಗೆ ಸೋಂಕು

ಇದಾದ ಮೇಲೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಮಾರ್ಚ್ ನಲ್ಲಿ ಕರೆ ಮಾಡಿದ ತಿವಾರಿ ಈಗ ಒಂದು ಅವಕಾಶ ಬಂದಿದೆ ಎಂದು ಹೇಳಿದ್ದಾನೆ. ಕೋಲ್ಕತ್ತಾ ತಂಡಕ್ಕೆ ಒಬ್ಬ ಬೌಲರ್ ಅಗತ್ಯಿದೆ ಎಂಬುದು ಚರ್ಚೆಯಾಗಿದೆ.

ಸ್ಥಾನ ಪಡೆದುಕೊಳ್ಳಬೇಕು ಎಂದರೆ ಮೂವತ್ತು ಲಕ್ಷ ರೂ. ಕೂಡಲೇ ನೀಡಬೇಕು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಕುಟುಂಬ ಎರಡು ಹಂತದಲ್ಲಿ ಹಣ ಸಂದಾಯ ಮಾಡಿದೆ. ಹಣ ಕೊಟ್ಟ ಮೇಲೆ ಪೋನ್ ಕರೆ ಸ್ವೀಕಾರ ಮಾಡುವುದನ್ನು ನಿಲ್ಲಿಸಲಾಗಿದೆ. ಅನುಮಾನಗೊಂಡ ಕುಟುಂಬ ಪೊಲೀಸರ ಮೊರೆ ಹೋಗಿದೆ.