ಕಂಡವರಿಗೆಲ್ಲ ಕಪಾಳ ಮೋಕ್ಷ ಮಾಡ್ತಿದ್ದ ಅಪರಿಚಿತ: ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ ಜನರು
ವಾಯು ವಿಹಾರಿಗಳು, ವಾಹನ ಸವಾರರು, ಮಹಿಳೆಯರ ಬಳಿ ಹೋಗಿ ಏಕಾಏಕಿ ನಿಂತು, ಇದ್ದಕ್ಕಿದ್ದಂತೆ ಕಪಾಳ ಮೋಕ್ಷ ಮಾಡಿ, ವಿಕೃತಿ ಮೆರೆಯುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬನಿಗೆ ಸ್ಥಳೀಯ ಯುವಕರು ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಇಲ್ಲಿನ ಕೆಬಿ ಬಡಾವಣೆಯ ಶ್ರೀ ಗುಳ್ಳಮ್ಮ ದೇವಸ್ಥಾನದ ಬಳಿ ನಡೆದಿದೆ.
ದಾವಣಗೆರೆ (ಜು.29): ವಾಯು ವಿಹಾರಿಗಳು, ವಾಹನ ಸವಾರರು, ಮಹಿಳೆಯರ ಬಳಿ ಹೋಗಿ ಏಕಾಏಕಿ ನಿಂತು, ಇದ್ದಕ್ಕಿದ್ದಂತೆ ಕಪಾಳ ಮೋಕ್ಷ ಮಾಡಿ, ವಿಕೃತಿ ಮೆರೆಯುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬನಿಗೆ ಸ್ಥಳೀಯ ಯುವಕರು ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಇಲ್ಲಿನ ಕೆಬಿ ಬಡಾವಣೆಯ ಶ್ರೀ ಗುಳ್ಳಮ್ಮ ದೇವಸ್ಥಾನದ ಬಳಿ ನಡೆದಿದೆ.
ಇಲ್ಲಿನ ಕೆಬಿ ಬಡಾವಣೆಯ ಶ್ರೀ ಗುಳ್ಳಮ್ಮ ದೇವಸ್ಥಾನದ ಬಳಿ ಪಾಲಿಕೆಯ ಶುದ್ಧ ನೀರಿನ ಘಟಕದ ಬಳಿ ಕ್ಯಾನ್ ತಂದು ನೀರು ಒಯ್ಯಲು ಬಂದವರ ಮುಂದೆ ಧುತ್ತೆಂದು ಬಂದು ನಿಂತ ವ್ಯಕ್ತಿ ಏಕಾಏಕಿ ಮುಖ ಮೂತಿ ನೋಡದೆ, ಕಪಾಳ ಮೋಕ್ಷ ಮಾಡಿದ್ದಾನೆ. ನಂತರ ಅಲ್ಲಿಂದ ಕುವೆಂಪು ರಸ್ತೆಗೆ ತೆರಳಿದ ವ್ಯಕ್ತಿಯು ಟೀ ವ್ಯಾಪಾರಿ ಕೆನ್ನೆಗೂ ಭಾರಿಸಿದ್ದಾನೆ. ದಾರಿ ಹೋಕರು, ವಾಹನ ಸವಾರರಿಗೂ ಇದೇ ರೀತಿ ಹಲ್ಲೆ ಮಾಡಿದ್ದಾರೆ. ಎಲ್ಲರೂ ಆತ ಮತಿಭ್ರಮಣೆ ಆದವನಿರಬೇಕೆಂದು ಅಲ್ಲಿದ್ದವರು ಬೈದು ಕಳಿಸಿದ್ದಾರೆ.
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಸವಾರನ ಕಣ್ಣು ಗುಡ್ಡೆಯೇ ಹೊರಕ್ಕೆ!
ಕæಲವರು 112ಗೆ ಕರೆ ಮಾಡಿ, ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ. ಪೊಲೀಸರ ಬಳಿಯೂ ಆತ ಏನು ಮಾಡಿಲ್ಲವೆಂಬಂತೆ ವರ್ತಿಸಿದ್ದಾನೆ. ಸ್ಥಳದಲ್ಲಿದ್ದ ಹಿರಿಯರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವಂತೆ ಪೊಲೀಸರಿಗೆ ತಿಳಿಸಿದರು. ಪೊಲೀಸರು ನಯವಾಗಿ ಕೇಳಿದರೆ, ಬಾಯಿ ಬಿಡದವನು ಪೊಲೀಸ್ ಭಾಷೆ ಹೊರ ಬಂದ ತಕ್ಷಣವೇ ಮೆತ್ತಗಾಗಿದ್ದಾನೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಪೊಲೀಸರು ಕರೆದೊಯ್ದ ನಂತರವಷ್ಟೇ ಅಲ್ಲಿದ್ದ ಜನರು ನಿರಾಳರಾದರು.
ವಿಕಲಚೇತನನ ಮೇಲೆ ಪೊಲೀಸ್ ದೌರ್ಜನ್ಯ: ವರದಿ ಕೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್