ವಿಕಲಚೇತನನ ಮೇಲೆ ಪೊಲೀಸ್‌ ದೌರ್ಜನ್ಯ: ವರದಿ ಕೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿಯಲ್ಲಿ ವಿಕಲಚೇತನನ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆದೇಶಿಸಿದ್ದಾರೆ.

Police brutality on physically challenged minister lakshmi hebbalkar asked for report rav

ಬೆಳಗಾವಿ (ಜು.29): ಬೆಳಗಾವಿಯಲ್ಲಿ ವಿಕಲಚೇತನನ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆದೇಶಿಸಿದ್ದಾರೆ.

ಈ ಕುರಿತು ಪೊಲೀಸ… ಆಯುಕ್ತರಿಗೆ ಸಚಿವರು ಪತ್ರ ಬರೆದಿದ್ದಾರೆ. ನಡು ರಸ್ತೆಯಲ್ಲಿ ರಾತ್ರಿ ವಿಕಲ ಚೇತನ ವ್ಯಕ್ತಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿ, ಬೂಟುಗಾಲಿನಿಂದ ಒದ್ದು ರಾತ್ರಿಯಿಡೀ ಅಲ್ಲೇ ನರಳುವಂತೆ ಮಾಡಿದ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ವಿಚಾರಣೆ ನಡೆಸಿ, ತಪ್ಪಿತಸ್ಥ ಪೊಲೀಸರ ಮೇಲೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸಚಿವರು ಸೂಚಿಸಿದ್ದಾರೆ.

ಉದ್ಯಮಬಾಗ ಪೊಲೀಸ್‌ ಠಾಣೆಯ ನಾಲ್ವರು ಸಿಬ್ಬಂದಿ ಈ ವಿಕಲಚೇತನ ವ್ಯಕ್ತಿಯನ್ನು ನಡುರಸ್ತೆಯಲ್ಲೇ ನೆಲಕ್ಕೆ ಉರುಳಿಸಿ, ಮನಸೋ ಇಚ್ಛೆಯಂತೆ ಥಳಿಸಿದ್ದಾರೆ. ಒಬ್ಬ ಪೇದೆ ಲಾಠಿಯಿಂದ ಹೊಡೆದರೆ, ಮತ್ತೊಬ್ಬ ಪೇದೆ ಬೂಟುಗಾಲಿನಿಂದ ಒದೆಯುತ್ತಿರುವುದು, ರಸ್ತೆಯಲ್ಲಿ ನರಳಾಡುತ್ತಿರುವ ವಿಕಲಚೇತನನ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನ 60 ಸಾವಿರ ಮಹಿಳೆಯರ ನೋಂದಣಿ

Latest Videos
Follow Us:
Download App:
  • android
  • ios