16ನೇ ವರ್ಷದಲ್ಲೇ ಸೂಸೈಡ್... ಅಪ್ಪ, ಅಮ್ಮನಿಗೆ ಬೇರ್ ಬೇರೆ ಡೆತ್ ನೋಟ್, ಟೀಚರ್ ಗೆ ನೀಡಿದ ಮೆಸ್ಸೇಜ್ ನೋಡಿ ಶಾಕ್
ದೆಹಲಿಯಲ್ಲಿ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲವಾದ್ರೂ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದೆ. ಎರಡು ಪ್ರತ್ಯೇಕ ಡೆತ್ ನೋಟ್ ಬರೆದಿರುವ ಆತನ ಸಾವು ಆತಂಕ ಸೃಷ್ಟಿಸಿದೆ.
ಮಕ್ಕಳ ಆತ್ಮಹತ್ಯೆ ಪ್ರಕರಣ (Child suicide case) ಇತ್ತೀಚಿಗೆ ಹೆಚ್ಚಾಗ್ತಿದೆ. ಸೋಲನ್ನು ಎದುರಿಸುವ ತಾಕತ್ತು, ಧೈರ್ಯವಿಲ್ಲದ ಮಕ್ಕಳು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ. ಪಾಲಕರ (parents) ಒತ್ತಡ, ಶಿಕ್ಷಣ ನೀತಿ, ಶಿಕ್ಷಕರ ವರ್ತನೆ, ಸಹಪಾಠಿಗಳ ಸ್ಪರ್ಧೆ ಜೊತೆ ಸೆಲೆಬ್ರಿಟಿ ಮಕ್ಕಳ (Celebrity kids) ಜೊತೆ ಸಾಮಾನ್ಯರ ಹೋಲಿಕೆ ಎಲ್ಲವೂ ಮಕ್ಕಳನ್ನು ಹೈರಾಣ ಮಾಡಿದೆ. ಇಡೀ ದಿನ ವಿಶ್ರಾಂತಿ ಇಲ್ಲದೆ ಓಡುವ ಮಕ್ಕಳಿಗೆ ಆಟ, ನೆಮ್ಮದಿ ಮರೆತು ಹೋಗಿದೆ. ದೆಹಲಿ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪಾಲಕರಲ್ಲಿ ಭಯ ಹುಟ್ಟಿಸಿದೆ. ಜನರಲ್ಲಿ ನಾನಾ ಪ್ರಶ್ನೆ ಹುಟ್ಟುಹಾಕಿದ್ದು, ಮುಂದೇನು ಎಂಬ ಆತಂಕ ಶುರುವಾಗಿದೆ.
ರಾಷ್ಟ್ರ ರಾಜಧಾನಿ (national capital) ಯಲ್ಲಿ 16 ವರ್ಷದ ಹುಡುಗನ ಆತ್ಮಹತ್ಯೆ : ದೆಹಲಿಯ ಕಂಜ್ವಾಲಾ ಪ್ರದೇಶದಲ್ಲಿ 16 ವರ್ಷದ ವಿದ್ಯಾರ್ಥಿ ನೇಣಿ ಬಿಗಿದುಕೊಂಡು (Hanging) ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಆತ ಬರೆದ ಡೆತ್ ನೋಟ್ (Death note) ಪೊಲೀಸ್ ಕೈ ಸೇರಿದ್ದು, ಇದೀಗ ವೈರಲ್ ಆಗಿದೆ. ಧೈರ್ಯ ಪ್ರತಾಪ್ ಸಿಂಗ್ ಆತ್ಮಹತ್ಯೆ ಮಾಡ್ಕೊಂಡ ಹುಡುಗ. ಕಂಜ್ವಾಲಾ ಪ್ರದೇಶದ ಕರಾಲಾ ಗ್ರಾಮದ ನಿವಾಸಿ. ದೆಹಲಿ ಆನಂದಪುರ್ ಧಾಮ್ (Anandpur Dham) ಪ್ರದೇಶದಲ್ಲಿರುವ ಶಾಲೆಯಲ್ಲಿ ಓದುತ್ತಿದ್ದ. ಧೈರ್ಯ ಪ್ರತಾಪ್ ಸಿಂಗ್ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ್ದಾನೆ. ಮರುದಿನ ಬೆಳಿಗ್ಗೆ ಧೈರ್ಯ ಎದ್ದು ಬರದ ಕಾರಣ ಕುಟುಂಬಸ್ಥರು ರೂಮ್ ಗೆ ಹೋಗಿದ್ದಾರೆ. ಆದ್ರೆ ರೂಮ್ ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಧೈರ್ಯ ಪ್ರತಾಪ್ ಶವ ಪತ್ತೆಯಾಗಿದೆ.
Breaking: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಮುಖಂಡ ಅರುಣ್ ಪುತ್ತಿಲ ವಿರುದ್ಧ ಎಫ್ಐಆರ್
ಅಪ್ಪ – ಅಮ್ಮನಿಗೆ ಪ್ರತ್ಯೇಕ ಡೆತ್ ನೋಟ್ : ಧೈರ್ಯ ಪ್ರತಾಪ್ ಸಿಂಗ್, ಆತ್ಮಹತ್ಯೆ ಮಾಡ್ಕೊಳ್ಳುವ ಮುನ್ನ ಅಪ್ಪ ಹಾಗೂ ಅಮ್ಮನಿಗೆ ಪ್ರತ್ಯೇಕವಾಗಿ ಡೆತ್ ನೋಟ್ ಬರೆದಿದ್ದಾನೆ. ಅಮ್ಮನಿಗೆ ಬರೆದ ನೋಟ್ ನಲ್ಲಿ, ಇಷ್ಟು ದಿನ ನಿನಗೆ ಕಾಟ ನೀಡಿದ್ದಕ್ಕೆ ಕ್ಷಮೆ ಇರಲಿ. ನಿನ್ನನ್ನು ನಾನು ನೋಯಿಸಿದ್ದೇನೆ. ನಿನ್ನ ನಂಬಿಕೆ ಮುರಿದಿದ್ದೇನೆ. ಎಲ್ಲರ ಮುಂದೆ ನಿನಗೆ ಅವಮಾನ ಮಾಡಿದ್ದೇನೆ. ನಿನ್ನ ಹೆಸರು ಹಾಳು ಮಾಡಿದ್ದೇನೆ. ನಿನ್ನ ಭರವಸೆ ಉಳಿಸಿಕೊಳ್ಳಲು ನನಗೆ ಸಾಧ್ಯವಾಗ್ಲಿಲ್ಲ. ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆದ್ರೆ ಒಂದು ವಿಷಯ ನೆನಪಿಡಿ. ನಾವಿಬ್ಬರು ಮತ್ತೆ ಭೇಟಿಯಾಗ್ತೇವೆ. ಈ ಜನ್ಮದಲ್ಲಿ ನಾನು ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಾಗ್ಲಿಲ್ಲ. ಮುಂದಿನ ಜನ್ಮದಲ್ಲಿ ಇಬ್ಬರು ಒಂದಾಗೋಣ ಎಂದು ಬರೆದಿದ್ದಲ್ಲದೆ ತನ್ನ ತಂಗಿ ಮತ್ತು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಮ್ಮನಿಗೆ ಕೊನೆಯ ವಿನಂತಿ ಮಾಡಿದ್ದಾನೆ ಧೈರ್ಯ.
ಇನ್ನು ಅಪ್ಪನಿಗೆ ಬರೆದ ಡೆತ್ ನೋಟ್ ನಲ್ಲಿ, ತಂಗಿಗೆ ಹೆಚ್ಚು ವಿದ್ಯಾಭ್ಯಾಸ ನೀಡುವಂತೆ ಮನವಿ ಮಾಡಿದ್ದಾನೆ. ನಾನು ಕೇಳಿದ್ದನ್ನೆಲ್ಲ ಕೊಡಿಸಿದ್ದೀರಿ. ನನ್ನ ಎಲ್ಲ ಆಸೆಯನ್ನು ಈಡೇರಿಸಿದ್ದೀರಿ. ನನ್ನ ಕೊನೆಯ ಆಸೆಯೊಂದಿದೆ. ನನ್ನ ತಂಗಿ ಹಂಸಿತಾ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡ್ಬೇಡಿ. ಅವಳು ಹೇಳಿದಷ್ಟು ಕಲಿಸಿ. ನಾನು ನಿಮ್ಮಿಂದ ಇದನ್ನು ಕೊನೆಯದಾಗಿ ಕೇಳ್ತಿದ್ದೇನೆ ಎಂದು ಧೈರ್ಯ ಪತ್ರದಲ್ಲಿ ಬರೆದಿದ್ದಾನೆ.
ಕಿಲ ಕಿಲ ಕೋಮಲ ಆಂಟಿ ಕಣ್ಸನ್ನೆಗೆ ಅಂಕಲ್‌ಗಳೆಲ್ಲಾ ಫ್ಲ್ಯಾಟ್: ಲಕ್ಷ ಲಕ್ಷ ವಂಚಿಸಿ ಸಿಕ್ಕಿಬಿದ್ದಳು!
ಟೀಚರ್ ಮೇಲೆ ಕೇಸ್ ದಾಖಲು : ಧೈರ್ಯ ಪ್ರತಾಪ್ ಸಿಂಗ್ ಆತ್ಮಹತ್ಯೆ ನಂತ್ರ ಆತನ ಶಾಲೆ ಶಿಕ್ಷಕಿ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಇದಕ್ಕೆ ಕಾರಣ ಧೈರ್ಯ ಡೆತ್ ನೋಟ್ ನಲ್ಲಿ ಬರೆದ ವಿಷ್ಯ. ಸಾವಿಗೆ ಮುನ್ನ ತನ್ನ ಶಿಕ್ಷಕಿ ಸುನೀತಾ ಪಾಸಿ ಹೆಸರು ಬರೆದಿರುವ ಧೈರ್ಯ ಪ್ರತಾಪ್ ಸಿಂಗ್, ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಲಿದೆ. ನಿಮ್ಮ ದೊಡ್ಡ ಟೆನ್ಷನ್ ದೂರ ಮಾಡ್ತಿದ್ದೇನೆ ಎಂದು ಬರೆದಿದ್ದಾನೆ. ಶಾಲೆಯಲ್ಲಿ ಏನಾಗಿತ್ತು ಎಂಬುದು ತನಿಖೆ ನಂತ್ರ ಹೊರಬರಬೇಕಿದೆ.