Asianet Suvarna News Asianet Suvarna News

Single-use plastic ban: ನಿಷೇಧಿತ ಪ್ಲಾಸ್ಟಿಕ್ ಬಳಕೆ: 26 ಸಾವಿರ ಕೇಸ್; ದಂಡ!

ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧದ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕಾ ಘಟಕ ಹಾಗೂ ಮಾರಾಟ ಮಳಿಗೆಗಳ ಮೇಲೆ ದಾಳಿ ತೀವ್ರಗೊಳಿಸಿರುವ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಜುಲೈನಿಂದ ಈವರೆಗೆ ಒಟ್ಟು 26 ಸಾವಿರ ಪ್ರಕರಣ ದಾಖಲಿಸಿ .75 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

Single use plastic ban 26 case and Penalty bbmp bengaluru rav
Author
First Published Dec 5, 2022, 7:27 AM IST

ಬೆಂಗಳೂರು (ಡಿ.5) : ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧದ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕಾ ಘಟಕ ಹಾಗೂ ಮಾರಾಟ ಮಳಿಗೆಗಳ ಮೇಲೆ ದಾಳಿ ತೀವ್ರಗೊಳಿಸಿರುವ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಜುಲೈನಿಂದ ಈವರೆಗೆ ಒಟ್ಟು 26 ಸಾವಿರ ಪ್ರಕರಣ ದಾಖಲಿಸಿ .75 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಜುಲೈ 1ರಿಂದ ಒಟ್ಟು 22 ಮಾದರಿಯ ಪ್ಲಾಸ್ಟಿಕ್‌ ವಸ್ತುಗಳಾದ ಇಯರ್‌ ಬಡ್‌ಗಳು, ಥರ್ಮಾಕೋಲ್‌, ಪ್ಲಾಸ್ಟಿಕ್‌ ತಟ್ಟೆ, ಲೋಟ ಸೇರಿದಂತೆ ಇತರೆ ವಸ್ತುಗಳ ತಯಾರಿಕೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಿ ಆದೇಶಿಸಿತ್ತು. ಅಲ್ಲದೇ .200 ರಿಂದ .30 ಸಾವಿರದವರೆಗೆ ದಂಡ ವಿಧಿಸುವುದಾಗಿ ಸೂಚಿಸಿದೆ. ನಿಷೇಧವಿದ್ದರೂ ನಗರದ ವಿವಿಧ ಕಡೆ ಅಕ್ರಮವಾಗಿ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ ಮತ್ತು ಮಾರಾಟ ನಡೆಯುತ್ತಿದೆ.

ನಿಷೇಧವಿದ್ದರೂ ನಿಲ್ಲದ ಪ್ಲಾಸ್ಟಿಕ್‌ ಮಾರಾಟ, ಬಳಕೆ

ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಈ ರೀತಿ ಅಕ್ರಮವಾಗಿ ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ ಮತ್ತು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆಯುವುದರೊಂದಿಗೆ ದಂಡ ವಿಧಿಸುತ್ತಿದ್ದಾರೆ. ಜುಲೈ 1ರಿಂದ ನವೆಂಬರ್‌ ಅಂತ್ಯದವರೆಗೆ ಒಟ್ಟು 26,751 ಪ್ರಕರಣ ದಾಖಲಿಸಿ .75,06,078 ದಂಡ ವಸೂಲಿ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆಯಿಂದಲೂ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ನಿಷೇಧಿತವಾಗಿದ್ದರೂ ಯಶಸ್ವಿ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ ಅನುಕೂಲವಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ 2019ರ ಸೆಪ್ಟಂಬರ್‌ನಿಂದ 2022ರ ನವೆಂಬರ್‌ ಅಂತ್ಯದ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 34,047 ಪ್ರಕರಣ ದಾಖಲಿಸಿ .1.89 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕಳೆದ ನವೆಂಬರ್‌ ತಿಂಗಳಲ್ಲಿ 4,846 ಪ್ರಕರಣ ದಾಖಲಿಸಿ .14,23,235 ದಂಡ ವಸೂಲಿ ಮಾಡಲಾಗಿದೆ. ಈ ಪೈಕಿ ಕೇಂದ್ರ ವಲಯಗಳಾದ ಪೂರ್ವ ಮತ್ತು ಪಶ್ಚಿಮ ವಲಯದಲ್ಲಿಯೇ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಹೆಚ್ಚಾಗಿ ಕಂಡು ಬಂದಿದೆ.

ನಿಷೇಧದ ನಂತ್ರ ರಾತ್ರಿಹೊತ್ತಲ್ಲಿ ಪ್ಲಾಸ್ಟಿಕ್ ತಯಾರಿ, BBMPಗೆ ತಲೆನೋವು

ನಿಷೇಧಿತ ಪ್ಲಾಸ್ಟಿಕ್‌ ದಂಡ ವಿವರ (ನವೆಂಬರ್‌-22)

ವಲಯ ಪ್ರಕರಣ ದಂಡ (ರು.ಗಳಲ್ಲಿ)

  • ಪೂರ್ವ1,468 3,41,200
  • ಪಶ್ಚಿಮ 1,835 3,66,706
  • ದಕ್ಷಿಣ 312 1,62,800
  • ಮಹದೇವಪುರ 557 1,10,000
  • ಆರ್‌ಆರ್‌ನಗರ 178 2,44,100
  • ಯಲಹಂಕ 65 31,600
  • ದಾಸರಹಳ್ಳಿ 216 50,000
  • ಬೊಮ್ಮನಹಳ್ಳಿ 215 1,16,828
  • ಒಟ್ಟು 4,868 14,23,235

ಕೇಂದ್ರದ ನಿಷೇಧ ಬಳಿಕ ದಂಡ-ಪ್ರಕರಣದ ವಿವರ

ತಿಂಗಳು ಪ್ರಕರಣ ದಂಡ (ರು.ಗಳಲ್ಲಿ)

  • ಜುಲೈ 4,899 11,97,807
  • ಆಗಸ್ಟ್‌ 6,467 20,10,194
  • ಸೆಪ್ಟಂಬರ್‌ 5,023 13,94,918
  • ಅಕ್ಟೋಬರ್‌ 5,516 14,79,924
  • ನವೆಂಬರ್‌ 4,868 14,23,235
Follow Us:
Download App:
  • android
  • ios