Viral Video: ಮೆಕ್ಸಿಕೊದಲ್ಲಿ ಮೃತ ವ್ಯಕ್ತಿಯ ತಲೆಯನ್ನು ನಾಯಿಯೊಂದು ಕಚ್ಚಿಕೊಂಡು ಹೋಗುತ್ತಿರುವ ಘಟನೆ ನಡೆದಿದೆ. ಡ್ರಗ್‌ ಲಾರ್ಡ್‌ಗಳ ನಡುವಿನ ಕದನದಿಂದ ಹಲವಾರು ತಲೆಗಳು ಪ್ರತಿನಿತ್ಯ ಉದುರುತ್ತಿದೆ. ಇಷ್ಟಕ್ಕೂ ಮೆಕ್ಸಿಕೊದ ಡ್ರಗ್‌ ಕಾರ್ಟೆಲ್‌ಗಳ ಕರಾಳತೆ ಏನು?

ಮೆಕ್ಸಿಕೊ: ಬಾಯಲ್ಲಿ ಮನುಷ್ಯನ ಶಿರವನ್ನು ಕಚ್ಚಿಕೊಂಡು ಓಡುತ್ತಿರುವ ನಾಯಿ ಮೆಕ್ಸಿಕೋದ ಝಕಟೆಕಾಸ್‌ ನಗರದಲ್ಲಿ ಕಂಡಿದೆ. ಈ ಶಾಕಿಂಗ್‌ ದೃಶ್ಯದಿಂದ ಮೆಕ್ಸಿಕೊ ಜನತೆ ನಡುಗಿ ಹೋಗಿದ್ದಾರೆ. ತಡರಾತ್ರಿ ಮೃತ ವ್ಯಕ್ತಿಯೊಬ್ಬನ ತಲೆಯನ್ನು ನಾಯಿ ಬಾಯಲ್ಲಿ ಕಚ್ಚಿಕೊಂಡು ರಸ್ತೆಯಲ್ಲಿ ಬರುತ್ತಿತ್ತು. ನಾಯಿ ತಲೆಯನ್ನು ತಿನ್ನುವ ಸಲುವಾಗಿ ನಿರ್ಜನ ಪ್ರದೇಶಕ್ಕೆ ಅದನ್ನು ಕೊಂಡೊಯ್ಯುತ್ತಿದೆ ಎಂದು ಅಂದಾಜಿಸಲಾಗಿದೆ. ಮೆಕ್ಸಿಕೊ ಮೊದಲೇ ಅತಿಹೆಚ್ಚು ಹಿಂಸಾಚಾರ, ಅಪರಾಧ ಕೃತ್ಯಗಳು ನಡೆಯುವ ದೇಶ. ಅಮೆರಿಕಾದಲ್ಲೂ ಮೆಕ್ಸಿಕನ್ನರದ್ದೇ ಹಾವಳಿ. ಕುಖ್ಯಾತ ಗ್ಯಾಂಗ್‌ಸ್ಟರ್‌, ಡ್ರಗ್‌ ಲಾರ್ಡ್‌ ಎಲ್ಚಾಪೋ ಗುಸ್ಮಾನ್‌, ಪಾಬ್ಲೊ ಎಸ್ಕೋಬಾರ್ ಕೂಡ ಮೆಕ್ಸಿಕೊದವರೇ. 

ಫಾಕ್ಸ್‌ ನ್ಯೂಸ್‌ ವರದಿಯ ಪ್ರಕಾರ ಈ ಘಟನೆ ಕಳೆದ ಬುಧವಾರ ನಡೆದಿದೆ. ಉತ್ತರ ಮೆಕ್ಸಿಕೊದ ಝಕಟೆಕಾಸ್‌ ನಗರದಲ್ಲಿ ಕ್ರೈಂ ಸೀನಿನಿಂದ ತಲೆಯೊಂದನ್ನು ಎತ್ತಿಕೊಂಡು ನಾಯಿ ಹೋಗುತ್ತಿರುವ ಸಾಧ್ಯತೆಯಿದೆ ಎಂದು ಫಾಕ್ಸ್‌ ನ್ಯೂಸ್‌ ಬರದಿ ಮಾಡಿದೆ. ಮೋಂಟೆ ಎಸ್ಕೊಬೆಡೊ ಎಂಬ ಪ್ರದೇಶದ ಎಟಿಎಂ ಒಂದರಲ್ಲಿ ನಾಯಿ ಕಚ್ಚಿಕೊಂಡು ಹೋಗುತ್ತಿದ್ದ ತಲೆ ಸಿಕ್ಕಿದೆ ಎಂದು ಮೆಕ್ಸಿಕೊ ಪೊಲೀಸರು ಹೇಳಿದ್ದಾರೆ. ಜತೆಗೆ ಅದರ ಜೊತೆ ಎಚ್ಚರಿಕೆಯ ಸಂದೇಶವೊಂದು ಬರೆದಿಡಲಾಗಿದ್ದು, "ನೆನಪಿಡು ಮುಂದಿನ ತಲೆ ನಿನ್ನದೇ" ಎಂದು ಬೆದರಿಕೆ ಹಾಕಲಾಗಿದೆ. ಮೆಕ್ಸಿಕೊ ಪೊಲೀಸ್‌ ಅಧಿಕಾರಿಯೊಬ್ಬರು ಬಲವಂತವಾಗಿ ನಾಯಿಯಿಂದ ಎಟಿಎಂ ಬೂತ್‌ನೊಳಗೆ ತಲೆಯನ್ನು ಬಿಡಿಸಿದರು ಎನ್ನಲಾಗಿದೆ. ಈ ಕೊಲೆ ಡ್ರಗ್‌ ಕಾರ್ಟೆಲ್‌ಗಳ ನಡುವಿನ ದ್ವೇಷದಿಂದ ಆಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಒಂದು ಡ್ರಗ್‌

ಕಾರ್ಟೆಲ್‌ನ ಸದಸ್ಯರು ಇನ್ನೊಂದು ಕಾರ್ಟೆಲ್‌ನ ಸದಸ್ಯನ ಕೊಲೆ ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಪ್ರಾಥಮಿಕವಾಗಿ ಅಂದುಕೊಳ್ಳಲಾಗಿದೆ. 
ಕಾರ್ಟೆಲ್‌ ಜಲಿಸ್ಕೊ ನುಯೆವಾ ಜನರೇಷನ್‌ ಎಂಬ ಡ್ರಗ್‌ ಕಾರ್ಟೆಲ್‌ ಈ ಕೃತ್ಯದ ಹಿಂದಿರುವ ಸಾಧ್ಯತೆಯಿದೆ. ಇದು ಪ್ರಪಂಚದಲ್ಲೇ ಅತಿ ಹೆಚ್ಚು ಕರಾಳ ರೂಪ ತೋರಿಸಿರುವ ಮತ್ತು ಭಯ ಹುಟ್ಟಿಸಿರುವ ಮಾದಕ ವಸ್ತು ವಿತರಿಸುವ ಕಾರ್ಟೆಲ್‌ ಎಂದು ಕರೆಯಲಾಗುತ್ತದೆ. ಕೊಲೆಯಾದ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಮತ್ತು ಆತನ ಉಳಿದ ದೇಹ ಕೂಡ ಪತ್ತೆಯಾಗಿಲ್ಲ. 

ಇದನ್ನೂ ಓದಿ: ಅತ್ಯಾಚಾರ ದೃಢೀಕರಿಸುವ Two Finger Test ಪಿತೃಪ್ರಧಾನ, ಸೆಕ್ಸಿಸ್ಟ್‌ ಪರೀಕ್ಷೆ: ಸುಪ್ರೀಂಕೋರ್ಟ್‌

ಝಕಟೆಕಾಸ್‌ನಲ್ಲಿ ಸ್ಥಳೀಯ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇರುತ್ತವೆ. ಕಾರ್ಟೆಲ್‌ ಜಲಿಸ್ಕೊ ನುಯೆವಾ ಜನರೇಷನ್‌ ಮತ್ತು ಸಿನಲೋವಾ ನಡುವೆ ಆಗಾಗ ಹೊಡೆದಾಟ ನಡೆಯುತ್ತಿರುತ್ತದೆ. ಒಂದು ಗುಂಪಿನ ವ್ಯಕ್ತಿಯನ್ನು ಕೊಲೆ ಮಾಡಿದ ನಂತರ ಆ ವ್ಯಕ್ತಿಯ ತಲೆಯನ್ನು ಕತ್ತರಿಸಿಟ್ಟು ಹೆದರಿಸುವುದು ಇಲ್ಲಿನ ರಿವಾಜು. ಈ ರೀತಿಯ ಸಾಕಷ್ಟು ಕೊಲೆಗಳು ಮೆಕ್ಸಿಕೊದ ಹಲವು ನಗರಗಳಲ್ಲಿ ನಡೆದಿವೆ. ಮಾದಕ ವಸ್ತುಗಳನ್ನು ಇಡೀ ಜಗತ್ತಿಗೆ ಹಂಚುತ್ತಿರುವ ಮೆಕ್ಸಿಕೊದಲ್ಲಿ ಇವೆಲ್ಲಾ ನಾರ್ಮಲ್‌ ಎಂಬಂತಾಗಿದೆ. 

ಇದನ್ನೂ ಓದಿ: Iran Anti-Hijab Protest: ಸೆಲೆಬ್ರಿಟಿ ಚೆಫ್‌ ಹೊಡೆದು ಕೊಂದ ಇರಾನ್‌ ಪಡೆ

ಇತ್ತೀಚೆಗಷ್ಟೇ ಗುರ್ರೆರೊದಲ್ಲಿ ನಡೆದ ಗುಂಪು ಗಲಭೆಯಲ್ಲಿ 18 ಮಂದಿ ಮೃತಪಟ್ಟಿದ್ದರು. ಇದರಲ್ಲಿ ನಗರದ ಮೇಯರ್‌ ಮತ್ತು ಮಾಜಿ ಮೇಯರ್‌ ಕೂಡ ಕೊಲೆಯಾಗಿದ್ದರು. ಎರಡು ಅಪರಾಧಿ ಗುಂಪುಗಳ ನಡುವೆ ನಡೆದ ಕದನದಲ್ಲಿ ಅಪಾರ ಸಾವು ನೋವಾಗಿತ್ತು.