ಹಣದ ಆಸೆಗೆ ಪತ್ನಿಯ ಜತೆಗಿನ ಖಾಸಗಿ ಕ್ಷಣಗಳನ್ನು ಆನ್ ಲೈನ್ ಗೆ ಅಪ್ ಲೋಡ್ ಮಾಡುತ್ತಿದ್ದ/  ಆಪ್ ಮೂಲಕ ಜನರನ್ನು ಆಹ್ವಾನಿಸಿ ಲೈವ್ ಸಹ ಹೋಗಿದ್ದ/ ಸೋಶಿಯಲ್ ಮೀಡಿಯಾದಲ್ಲಿ ತನ್ನದೆ ಬೆತ್ತಲೆ ವಿಡಿಯೋ ಕಂಡು ಹೌಹಾರಿದ ಪತ್ನಿ ಪೊಲೀಸರ ಮೊರೆ ಹೋದಳು

ಗುಂಟೂರು (ನ. 23) ಪತಿ-ಪತ್ನಿ ನಡುವೆ ನಾಲ್ಕು ಗೋಡೆಗಳ ಮಧ್ಯೆ ನಡೆಯುವುದದು ರಹಸ್ಯವಾಗಿರಬೇಕು ಆದರೆ ಇಲ್ಲೊಬ್ಬ ಪಾಪಿ ಪತಿ ಹಣದ ಆಸೆಗೆ ಬಿದ್ದು ಮಾಡಬಾರದ ಕೆಲಸ ಮಾಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ನಿ ಜೊತೆಗಿನ ಮಿಲನದ ಕ್ಷಣಗಳು ಹಾಗೂ ಪತ್ನಿಯ ನಗ್ನ ವಿಡಿಯೋಗಳನ್ನು ಹಣದ ಆಸೆಗೆ ಪೋರ್ನ್ ಸೈಟ್‌ ಗೆ ಅಪ್ ಲೋಡ್ ಮಾಡುತ್ತಿದ್ದ ವಿಕೃತ ಬಲೆಗೆ ಬಿದ್ದಿದ್ದಾನೆ. ಗುಂಟೂರಿನ ಈ ಘಟನೆ ಅನೇಕ ಪ್ರಶ್ನೆಗಳನ್ನು ಎತ್ತಿದೆ.

ಸಿನಿಮಾಕ್ಕಾಗಿ ಬೆತ್ತಲಾದ ನನಟಿಯರಿವರು

ತನ್ನ ನಗ್ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ತಿಳಿದ ಸಂತ್ರಸ್ತ ಗೃಹಿಣಿ ಈ ಸಂಬಂಧ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪತ್ನಂ ಬಜಾರ ಏರಿಯಾದ ಪೊಲೀಸ್ ಅಧಿಕಾರಿಗಳು ಪ್ರಕರಣದ ಮೂಲ ಪತ್ತೆ ಮಾಡಿದ್ದು ಪತಿಯ ಪೈಶಾಚಿಕ ಕೃತ್ಯ ಬಯಲಾಗಿದೆ

ವಿಚಾರಣೆ ನಡೆಸಿದಾಗ ಹಣದ ಆಸೆಗಾಗಿ ಪತ್ನಿಯ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗಳಿಗೆ ಅಪ್ಲೋಡ್ ಮಾಡಿದ್ದಾಗಿ ಹೇಳಿದ್ದಾನೆ. ಅಲ್ಲದೆ ತಮ್ಮಿಬ್ಬರ ಮಿಲನದ ಕ್ಷಣಗಳನ್ನು ಲೈವ್ ಮಾಡಿದ್ದು ಅದಕ್ಕಾಗಿ ಹಲವರಿಂದ ಮುಂಗಡವಾಗಿ ಹಣ ಪಡೆದಿದ್ದನ್ನು ಬಾಯಿ ಬಿಟ್ಟಿದ್ದಾನೆ.